Gautam Gambhir: ಟೀಮ್ ಇಂಡಿಯಾ ಸೋಲಿಗೆ ಐಪಿಎಲ್ ಅನ್ನು ದೂಷಿಸಬೇಡಿ ಎಂದ ಗಂಭೀರ್..!
TV9 Web | Updated By: ಝಾಹಿರ್ ಯೂಸುಫ್
Updated on:
Nov 26, 2022 | 10:30 PM
IPL 2023: ಗೌತಮ್ ಗಂಭೀರ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಲಕ್ನೋ ಫ್ರಾಂಚೈಸಿ ಸೌತ್ ಆಫ್ರಿಕಾ ಲೀಗ್ನಲ್ಲೂ ತಂಡವನ್ನು ಖರೀದಿಸಿದ್ದು, ಅಲ್ಲೂ ಕೂಡ ಗೌತಿ ಮೆಂಟರ್ ಆಗಲಿದ್ದಾರೆ ಎಂದು ವರದಿಯಾಗಿದೆ.
1 / 7
ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಹೀನಾಯ ಪ್ರದರ್ಶನಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ಕಾರಣ ಎಂಬ ಆರೋಪಗಳು ಆಗಾಗ್ಗೆ ಕೇಳಿ ಬರುತ್ತಿತ್ತವೆ. ಅದರಲ್ಲೂ ಕೆಲ ಆಟಗಾರರು ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ರಾಷ್ಟ್ರೀಯ ತಂಡದಲ್ಲಿ ವಿಫಲರಾಗುತ್ತಿರುತ್ತಾರೆ. ಇದೇ ಕಾರಣದಿಂದ ಐಸಿಸಿ ಟೂರ್ನಿಗಳಲ್ಲಿ ಭಾರತದ ಸೋಲಿನ ಬೆನ್ನಲ್ಲೇ ಐಪಿಎಲ್ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿರುತ್ತದೆ.
2 / 7
ಆದರೆ ಹೀಗೆ ವಿನಾಕಾರಣ ಪ್ರಮುಖ ಟೂರ್ನಿಯ ಮೇಲೆ ಆರೋಪ ಮಾಡುವುದನ್ನು ಬಿಡಬೇಕೆಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
3 / 7
ಈ ಬಗ್ಗೆ ಮಾತನಾಡಿದ ಗೌತಮ್ ಗಂಭೀರ್, ನನ್ನ ಪ್ರಕಾರ ಐಪಿಎಲ್ ಎಂಬುದು ಭಾರತೀಯ ಕ್ರಿಕೆಟ್ನಲ್ಲಿನ ಸಂಭವಿಸಿದ ಅತ್ಯುತ್ತಮ ಸಂಗತಿಯಾಗಿದೆ. ಐಪಿಎಲ್ ಆರಂಭವಾದಾಗಿನಿಂದಲೂ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಪ್ರತಿ ಬಾರಿ ಭಾರತೀಯ ಕ್ರಿಕೆಟ್ ಉತ್ತಮ ಪ್ರದರ್ಶನ ನೀಡದಿದ್ದಾಗ, ಐಪಿಎಲ್ ಮೇಲೆ ಆರೋಪ ಕೇಳಿ ಬರುತ್ತವೆ. ಆದರೆ ಅದು ಸರಿಯಲ್ಲ ಎಂದು ಗಂಭೀರ್ ತಿಳಿಸಿದ್ದಾರೆ.
4 / 7
ಭಾರತ ತಂಡವು ಐಸಿಸಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ, ಐಪಿಎಲ್ ಅನ್ನು ದೂರಬೇಡಿ. ಬದಲಾಗಿ ಭಾರತದ ಪರ ಚೆನ್ನಾಗಿ ಆಡದ ಆಟಗಾರರನ್ನು ದೂಷಿಸಿ. ಅವರ ಪ್ರದರ್ಶನವನ್ನು ದೂಷಿಸಿ, ಆದರೆ ಐಪಿಎಲ್‌ನತ್ತ ಬೆರಳು ತೋರಿಸುವುದು ಸರಿಯಲ್ಲ ಎಂದು ಗಂಭೀರ್ ತಿಳಿಸಿದರು.
5 / 7
ಐಪಿಎಲ್ನಲ್ಲಿ 154 ಪಂದ್ಯಗಳನ್ನಾಡಿರುವ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ ತಂಡವು 2012 ಹಾಗೂ 2014 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಅಲ್ಲದೆ 2007 ರ ಟಿ20 ವಿಶ್ವಕಪ್ ಹಾಗೂ 2011 ಏಕದಿನ ವಿಶ್ವಕಪ್ನ ಗೆಲುವಿನ ರೂವಾರಿಗಳಲ್ಲಿ ಗಂಭೀರ್ ಕೂಡ ಒಬ್ಬರು.
6 / 7
ಅಂದರೆ ಐಪಿಎಲ್ ಆಡುತ್ತಿದ್ದ ವೇಳೆಯೇ ಟೀಮ್ ಇಂಡಿಯಾ 2011ರ ಏಕದಿನ ವಿಶ್ವಕಪ್ ಹಾಗೂ 2013 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಜಯ ಸಾಧಿಸಿತ್ತು. ಆದರೆ ಆ ಬಳಿಕ ಟೀಮ್ ಇಂಡಿಯಾ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ.
7 / 7
ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಿಂಚುವ ಆಟಗಾರರು ಟೀಮ್ ಇಂಡಿಯಾ ಪರ ವಿಫಲರಾಗುತ್ತಿರುವುದರಿಂದ ಕೆಲ ಅಭಿಮಾನಿಗಳು ಐಪಿಎಲ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಆದರೆ ಟೀಮ್ ಇಂಡಿಯಾ ಸೋತರೆ ಆಟಗಾರರನ್ನು ದೂಷಿಸಬೇಕೇ ಹೊರತು, ಐಪಿಎಲ್ನಲ್ಲ ಎಂಬ ವಾದವನ್ನು ಗೌತಮ್ ಗಂಭೀರ್ ಮುಂದಿಟ್ಟಿದ್ದಾರೆ.