- Kannada News Photo gallery Cricket photos MS Dhoni fan makes his presence felt at FIFA World Cup 2022 Kannada News
MS Dhoni: ಎಲ್ಲೆಲ್ಲೂ ಯೆಲ್ಲೋ: ಫುಟ್ಬಾಲ್ ವಿಶ್ವಕಪ್ನಲ್ಲೂ ಧೋನಿಯದ್ದೇ ಹವಾ..!
FIFA World Cup 2022: ಮಹೇಂದ್ರ ಸಿಂಗ್ ಧೋನಿ ಕೂಡ ಫುಟ್ಬಾಲ್ ಪ್ರಿಯರು. ಅವರ ನೆಚ್ಚಿನ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್.
Updated on:Nov 26, 2022 | 6:30 PM

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ವಿಶ್ವದಾದ್ಯಂತ ಅಭಿಮಾನಿಗಳಿರುವುದು ಗೊತ್ತೇ ಇದೆ. ಅದರಲ್ಲೂ ಯೆಲ್ಲೋ ಜೆರ್ಸಿಯ ಸಿಎಸ್ಕೆಗೂ ಅಂತಹದ್ದೇ ಫ್ಯಾನ್ ಫಾಲೋವರ್ಸ್ ಇದೆ. ಇದೀಗ ಯೆಲ್ಲೋ ಅಭಿಮಾನಿಯೊಬ್ಬರು ಖತರ್ ವಿಶ್ವಕಪ್ನಲ್ಲೂ ಕಾಣಿಸಿಕೊಂಡಿದ್ದಾರೆ. ಅದು ಕೂಡ ಧೋನಿಯ ಜೆರ್ಸಿಯ ಮೂಲಕ ಎಂಬುದು ವಿಶೇಷ.

ಅಂದರೆ ಸಿಎಸ್ಕೆ ತಂಡದ ಅಪ್ಪಟ ಅಭಿಮಾನಿಯೊಬ್ಬರು ಮಹೇಂದ್ರ ಸಿಂಗ್ ಧೋನಿ ಜೆರ್ಸಿಯೊಂದಿಗೆ ವಿಶ್ವಕಪ್ ನೋಡಲು ತೆರಳಿದ್ದಾರೆ. ಬ್ರೆಝಿಲ್-ಸರ್ಬಿಯಾ ಪಂದ್ಯದ ವೇಳೆ ಕಾಣಿಸಿಕೊಂಡ ಈ ಅಭಿಮಾನಿಯು ಧೋನಿಯ ಹೆಸರಿರುವ ಸಿಎಸ್ಕೆ ಜೆರ್ಸಿ ಹಾಗೂ ಪೋಸ್ಟರ್ಗಳನ್ನು ಪ್ರದರ್ಶಿಸಿದ್ದರು.

ಇದೀಗ ಈ ಅಭಿಮಾನಿಯ ಫೋಟೋವನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೆ ಈ ಫೋಟೋಗೆ ಎಲ್ಲೆಲ್ಲೂ ಯೆಲ್ಲೋ ಎಂಬ ಟ್ಯಾಗ್ಲೈನ್ ನೀಡಲಾಗಿದೆ.

ಅಂದರೆ ಸಿಎಸ್ಕೆ ಅಭಿಮಾನಿಯು ಬ್ರೆಝಿಲ್ ತಂಡದ ಅಪ್ಪಟ ಫ್ಯಾನ್. ಹೀಗಾಗಿ ಹಳದಿ ಬಣ್ಣದ ಬ್ರೆಝಿಲ್ ಜೆರ್ಸಿಯ ಜೊತೆ ಸಿಎಸ್ಕೆ ಟಿ-ಶರ್ಟ್ ಅನ್ನು ಕೂಡ ಧರಿಸಿಕೊಂಡಿದ್ದಾರೆ.

ಇದೀಗ ಫುಟ್ಬಾಲ್ ಫೀವರ್ ನಡುವೆ ಧೋನಿ ಫ್ಯಾನ್ನ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಎಂಎಸ್ಡಿ ಅಭಿಮಾನಿಗಳಿಂದ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ.

ಅಂದಹಾಗೆ ಮಹೇಂದ್ರ ಸಿಂಗ್ ಧೋನಿ ಕೂಡ ಫುಟ್ಬಾಲ್ ಪ್ರಿಯರು. ಅವರ ನೆಚ್ಚಿನ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್. ಹಾಗೆಯೇ ಧೋನಿಯ ನೆಚ್ಚಿನ ಫುಟ್ಬಾಲ್ ಆಟಗಾರ ಪೋರ್ಚುಗಲ್ನ ಕ್ರಿಸ್ಟಿಯಾನೋ ರೊನಾಲ್ಡೊ.
Published On - 6:30 pm, Sat, 26 November 22
