- Kannada News Photo gallery Cricket photos Ishan Kishan becomes first batsman to convert maiden ton to double hundred Kannada news zp
Ishan Kishan: ಕ್ರಿಕೆಟ್ ಇತಿಹಾಸದಲ್ಲೇ ಯಾರು ಮಾಡದ ವಿಶೇಷ ದಾಖಲೆ ಬರೆದ ಇಶಾನ್ ಕಿಶನ್
Ishan Kishan: ಚೊಚ್ಚಲ ದ್ವಿಶತಕ ಬಾರಿಸಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆ ಕೂಡ ಕಿಶನ್ ಪಾಲಾಗಿದೆ. ಈ ಹಿಂದೆ ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು.
Updated on: Dec 11, 2022 | 6:10 AM

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ 9 ದ್ವಿಶತಕಗಳು ಮೂಡಿಬಂದಿವೆ. ಇವುಗಳಲ್ಲಿ ಮೊದಲ ಡಬಲ್ ಸೆಂಚುರಿ ಸಚಿನ್ ತೆಂಡೂಲ್ಕರ್ ಬ್ಯಾಟ್ನಿಂದ ಮೂಡಿಬಂದರೆ, ಕೊನೆಯ ದ್ವಿಶತಕ ಸಿಡಿಸಿರುವುದು ಯುವ ದಾಂಡಿಗ ಇಶಾನ್ ಕಿಶನ್. ಈ ಡಬಲ್ ಸೆಂಚುರಿಯೊಂದಿಗೆ ಕಿಶನ್ ಹಲವು ವಿಶ್ವ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಅವುಗಳಲ್ಲಿ ಒಂದು ವಿಶೇಷ ವಿಶ್ವದಾಖಲೆ ಎಂಬುದೇ ಇಲ್ಲಿ ವಿಶೇಷ.

ಈ ದ್ವಿಶತಕದ ವಿಶೇಷ ಏನೆಂದರೆ...ಇದಕ್ಕೂ ಮುನ್ನ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ ಬ್ಯಾಟ್ಸ್ಮನ್ಗಳೆಲ್ಲರೂ, ಅದಕ್ಕೂ ಮೊದಲು ಶತಕ ಸಿಡಿಸಿ ಬ್ಯಾಟ್ ಮೇಲೆತ್ತಿದ್ದರು. ಆದರೆ ಇಶಾನ್ ಕಿಶನ್ ಮಾತ್ರ ಚೊಚ್ಚಲ ಶತಕದೊಂದಿಗೆ ದ್ವಿಶತಕ ಪೂರೈಸಿದ್ದರು.

ಅಂದರೆ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಇಶಾನ್ ಕಿಶನ್ ಪಾತ್ರರಾಗಿದ್ದಾರೆ. ಮೊದಲ ಶತಕ ಬಾರಿಸಿದ ಕೆಲವೇ ಕ್ಷಣದಲ್ಲೇ ಚೊಚ್ಚಲ ದ್ವಿಶತಕ ಸಿಡಿಸಿದ ಆಟಗಾರ ಎಂಬ ವಿಶ್ವ ದಾಖಲೆ ಇಶಾನ್ ಕಿಶನ್ ಪಾಲಾಗಿದೆ.

ಇನ್ನು 85 ಎಸೆತಗಳಲ್ಲಿ ಚೊಚ್ಚಲ ಶತಕ ಬಾರಿಸಿದ್ದ ಇಶಾನ್ ಕೇವಲ 126 ಎಸೆತಗಳಲ್ಲಿ 200 ರನ್ಗಳ ಗಡಿದಾಟಿದ್ದರು. ಈ ಮೂಲಕ ಅತೀ ವೇಗವಾಗಿ ದ್ವಿಶತಕ ಬಾರಿಸಿದ ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ಇದರ ಜೊತೆಗೆ ಚೊಚ್ಚಲ ದ್ವಿಶತಕ ಬಾರಿಸಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆ ಕೂಡ ಕಿಶನ್ ಪಾಲಾಗಿದೆ. ಈ ಹಿಂದೆ ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ಇದೀಗ 24ನೇ ವಯಸ್ಸಿನಲ್ಲೇ ಚೊಚ್ಚಲ ಶತಕದೊಂದಿಗೆ ದ್ವಿಶತಕ ಪೂರೈಸಿದ ಕ್ರಿಕೆಟ್ ಇತಿಹಾಸದಲ್ಲಿ ಯಾರು ಮಾಡದ ಅಪರೂಪದ ವಿಶ್ವ ದಾಖಲೆ ನಿರ್ಮಿಸಿದ್ದಾರೆ ಪಾಕೆಟ್ ಡೈನಾಮೊ ಖ್ಯಾತಿಯ ಇಶಾನ್ ಕಿಶನ್.




