
ದೇಶಿ ಟೂರ್ನಿ 2026 ರ ದುಲೀಪ್ ಟ್ರೋಫಿ ಇದೀಗ ಫೈನಲ್ ಹಂತಕ್ಕೆ ಬಂದು ನಿಂತಿದೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯಕ್ಕೆ ಮೊದಲ ತಂಡವಾಗಿ ಪೂರ್ವ ವಲಯ ತಂಡ ಅರ್ಹತೆ ಪಡೆದುಕೊಂಡಿದೆ. ಇಶಾನ್ ಕಿಶನ್ ನಾಯಕತ್ವದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಪೂರ್ವ ವಲಯ ತಂಡ ಸೆಮಿಫೈನಲ್ ಪಂದ್ಯದಲ್ಲಿ ಕೇಂದ್ರ ವಲಯ ತಂಡವನ್ನು 4 ವಿಕೆಟ್ಗಳಿಂದ ಮಣಿಸಿ ಫೈನಲ್ಗೇರಿದೆ(PC-PTI).
ಈ ಮೂಲಕ ಪೂರ್ವ ವಲಯ ತಂಡ ಬರೋಬ್ಬರಿ 13 ವರ್ಷಗಳ ನಂತರ ದುಲೀಪ್ ಟ್ರೋಫಿ ಫೈನಲ್ ಆಡುವ ಅವಕಾಶ ಪಡೆದುಕೊಂಡಿದೆ. ತಂಡದ ಈ ಐತಿಹಾಸಿಕ ಸಾಧನೆಯಲ್ಲಿ ನಾಯಕ ಇಶಾನ್ ಕಿಶನ್ ಅವರ ಪಾತ್ರ ಅಪಾರವಾಗಿದೆ. ಮೊದಲಿಗೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈಶಾನ್ಯ ವಲಯ ತಂಡವನ್ನು ಇನ್ನಿಂಗ್ಸ್ ಮತ್ತು 210 ರನ್ಗಳಿಂದ ಮಣಿಸಿದ್ದ ಕಿಶನ್ ಪಡೆ ಇದೀಗ ಸೆಮಿಫೈನಲ್ನಲ್ಲೂ ತನ್ನ ಅಜೇಯ ಓಟವನ್ನು ಮುಂದುವರೆಸಿದೆ(PC-PTI).
ಈ ಗೆಲುವಿನೊಂದಿಗೆ ಇಶಾನ್ ಕಿಶನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನಾಯಕನಾಗಿ ತಮ್ಮ ಅಜೇಯ ಓಟವನ್ನು ಮುಂದುವರೆಸಿದ್ದಾರೆ. ಇಶಾನ್ ಕಿಶನ್ ಕಳೆದ 8 ವರ್ಷಗಳಿಂದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿದ್ದಾರೆ. ಅವರ ನಾಯಕತ್ವದಲ್ಲಿ ತಂಡ ಒಂದೇ ಒಂದು ಪಂದ್ಯವನ್ನು ಸೋತಿಲ್ಲ(PC-PTI).
ಇಶಾನ್ ಕಿಶನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದುವರೆಗೆ 15 ಪಂದ್ಯಗಳಲ್ಲಿ ತಂಡದ ನಾಯಕತ್ವವಹಿಸಿದ್ದಾರೆ. ಇದರಲ್ಲಿ ತಂಡವು 8 ಪಂದ್ಯಗಳನ್ನು ಗೆದ್ದಿದ್ದರೆ, 7 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಕಿಶನ್ 2018 ರಲ್ಲಿ ಮೊದಲ ಬಾರಿಗೆ ಜಾರ್ಖಂಡ್ ತಂಡದ ನಾಯಕತ್ವವಹಿಸಿದ್ದರು. ಆ ಪಂದ್ಯದಲ್ಲಿ ಜಾರ್ಖಂಡ್ ತಂಡವು ಅಸ್ಸಾಂ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು(PC-PTI).
ನಂತರ ಹರಿಯಾಣ ವಿರುದ್ಧದ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಕಿಶನ್ ತಮ್ಮ ಗೆಲುವಿನ ಖಾತೆ ತೆರೆದಿದ್ದರು. ಅಂದಿನಿಂದ ಇಂದಿನವರೆಗೆ ಕಿಶನ್ ನಾಯಕತ್ವದಲ್ಲಿ ತಂಡಕ್ಕೆ ಸೋಲು ಎದುರಾಗದಿರುವುದು ಅವರ ಚಾಣಾಕ್ಷ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅವರ ಈ ಅಂಕಿಅಂಶಗಳನ್ನು ಗಮನಿಸಿದರೆ ದುಲೀಪ್ ಟ್ರೋಫಿ ಫೈನಲ್ ಗೆಲುವು ಕೂಡ ಪೂರ್ವ ವಲಯ ತಂಡದ್ದೇ ಎನ್ನಬಹುದು(PC-PTI).