AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VPL 2024: ಹೊಸ ಲೀಗ್​ನಲ್ಲಿ ಕಣಕ್ಕಿಳಿಯಲಿದ್ದಾರೆ ಸಿಡಿಲಬ್ಬರದ ಸಿಡಿಲಮರಿ ಸೆಹ್ವಾಗ್

IVPL 2024: ಇಂಡಿಯನ್ ಪ್ರೀಮಿಯರ್ ಲೀಗ್, ಲೆಜೆಂಡ್ಸ್​ ಲೀಗ್ ಬಳಿಕ ಇದೀಗ ಭಾರತದಲ್ಲಿ ಮತ್ತೊಂದು ಲೀಗ್ ಶುರುವಾಗುತ್ತಿದೆ. ಈ ಲೀಗ್​ನಲ್ಲಿ ವಿಶ್ವದ ಖ್ಯಾತನಾಮ ದಿಗ್ಗಜ ಆಟಗಾರರು ಕಣಕ್ಕಿಳಿಯಲಿದ್ದಾರೆ. ಆರು ತಂಡಗಳು ಕಣಕ್ಕಿಳಿಯುವ ಈ ಲೀಗ್​ನಲ್ಲಿ ಮುಂಬೈ ಚಾಂಪಿಯನ್ಸ್ ತಂಡದ ನಾಯಕರಾಗಿ ವೀರೇಂದ್ರ ಸೆಹ್ವಾಗ್ ಆಯ್ಕೆಯಾಗಿರುವುದು ವಿಶೇಷ.

TV9 Web
| Updated By: ಝಾಹಿರ್ ಯೂಸುಫ್|

Updated on: Feb 07, 2024 | 9:30 AM

Share
ಕ್ರಿಕೆಟ್​ ಅಂಗಳಕ್ಕೆ ಮತ್ತೊಂದು ಹೊಸ ಲೀಗ್ ಸೇರ್ಪಡೆಯಾಗುತ್ತಿದೆ. ಆದರೆ ಇದು ಲೆಜೆಂಡ್ಸ್ ಆಟಗಾರರನ್ನು ಒಳಗೊಂಡ ಲೀಗ್ ಎಂಬುದಷ್ಟೇ ವ್ಯತ್ಯಾಸ. ಹೌದು, ಇಂಡಿಯನ್ ವೆಟರನ್ ಪ್ರೀಮಿಯರ್ ಲೀಗ್ (IVPL) ಅನ್ನು ಆಯೋಜಿಸಲು ಭಾರತೀಯ ಹಿರಿಯ ಕ್ರಿಕೆಟ್ ಮಂಡಳಿ (BVCI) ಮುಂದಾಗಿದೆ.

1 / 6
ಇದಕ್ಕಾಗಿ ಈಗಾಗಲೇ 6 ತಂಡಗಳನ್ನು ಘೋಷಿಸಲಾಗಿದೆ. ಅದರಂತೆ ಹೊಸ ಲೀಗ್​ನಲ್ಲಿ ವಿವಿಐಪಿ ಉತ್ತರಪ್ರದೇಶ್, ರೆಡ್ ಕಾರ್ಪೆಟ್ ಡೆಲ್ಲಿ, ಮುಂಬೈ ಚಾಂಪಿಯನ್ಸ್​, ರಾಜಸ್ಥಾನ್ ಲೆಜೆಂಡ್ಸ್, ಚತ್ತೀಸ್​ಗಢ್ ವಾರಿಯರ್ಸ್​ ಮತ್ತು ತೆಲಂಗಾಣ ಟೈಗರ್ಸ್ ತಂಡಗಳು ಕಣಕ್ಕಿಳಿಯಲಿದೆ.

2 / 6
ವಿಶೇಷ ಎಂದರೆ ಈ ತಂಡಗಳಲ್ಲಿ ಮುಂಬೈ ಚಾಂಪಿಯನ್ಸ್ ತಂಡದ ನಾಯಕರಾಗಿ ವೀರೇಂದ್ರ ಸೆಹ್ವಾಗ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಐಪಿಎಲ್​ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್, ಕಿಂಗ್ಸ್​ ಇಲೆವೆನ್ ಪಂಜಾಬ್​ ತಂಡಗಳನ್ನು ಮುನ್ನಡೆಸಿದ್ದ ವೀರು ಇದೀಗ ಹೊಸ ಲೀಗ್​ನಲ್ಲಿ ಮುಂಬೈ ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

3 / 6
ಇನ್ನು ಸುರೇಶ್ ರೈನಾ ವಿವಿಐಪಿ ಉತ್ತರಪ್ರದೇಶ್ ತಂಡವನ್ನು ಮುನ್ನಡೆಸಲಿದ್ದಾರೆ. ಹಾಗೆಯೇ ತೆಲಂಗಾಣ ಟೈಗರ್ಸ್ ತಂಡದ ನಾಯಕರಾಗಿ ಮಾಜಿ ಆರ್​ಸಿಬಿ ಆಟಗಾರ ಕ್ರಿಸ್ ಗೇಲ್ ಆಯ್ಕೆಯಾಗಿದ್ದಾರೆ.

4 / 6
ಸೌತ್ ಆಫ್ರಿಕಾ ತಂಡದ ಮಾಜಿ ಆಟಗಾರ ಹರ್ಷಲ್ ಗಿಬ್ಸ್​ ರೆಡ್ ಕಾರ್ಪೆಟ್ ಡೆಲ್ಲಿ ತಂಡದ ಸಾರಥ್ಯವಹಿಸಿಕೊಂಡಿದ್ದಾರೆ. ಹಾಗೆಯೇ ಉಳಿದ ಎರಡು ತಂಡಗಳನ್ನು ಯೂಸುಫ್ ಪಠಾಣ್ ಹಾಗೂ ಶ್ರೀಶಾಂತ್ ಮುನ್ನಡೆಸಲಿದ್ದಾರೆ.

5 / 6
ಫೆಬ್ರವರಿ 23 ರಿಂದ ಮಾರ್ಚ್ 3 ರವರೆಗೆ ನಡೆಯಲಿರುವ ಚೊಚ್ಚಲ ವೆಟರನ್ ಪ್ರೀಮಿಯರ್ ಲೀಗ್​ಗೆ ಡೆಹ್ರಾಡೂನ್‌ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಟೂರ್ನಿಯ ಪಂದ್ಯಗಳನ್ನು ಯುರೋಸ್ಪೋರ್ಟ್ ಚಾನೆಲ್, ಡಿಡಿ ಸ್ಪೋರ್ಟ್ಸ್ ಮತ್ತು ಫ್ಯಾನ್‌ಕೋಡ್‌ ಆ್ಯಪ್​ನಲ್ಲಿ ವೀಕ್ಷಿಸಬಹುದು.

6 / 6
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ

Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ

ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ

Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ

ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?

ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?