ಹೌದು, ಟೆಸ್ಟ್ ಕ್ರಿಕೆಟ್ನಲ್ಲಿ 200 ಪಂದ್ಯಗಳನ್ನು ಆಡಿರುವ ದಾಖಲೆ ಮುರಿಯಲು ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸನ್ಗೆ ಬೇಕಿರುವುದು ಕೇವಲ 22 ಪಂದ್ಯಗಳು ಮಾತ್ರ. ಅಂದರೆ ಈಗಾಗಲೇ 179 ಟೆಸ್ಟ್ ಪಂದ್ಯಗಳನ್ನಾಡಿರುವ ಅ್ಯಂಡರ್ಸನ್ಗೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಅಪರೂಪದ ದಾಖಲೆಯನ್ನು ಮುರಿಯುವ ಅವಕಾಶವಿದೆ.