
ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡುತ್ತಿಲ್ಲ. ವೈಯಕ್ತಿಕ ಕಾರಣಗಳಿಂದ ಇವರು ಸರಣಿಗೂ ಮುನ್ನ ತಮ್ಮ ಹೆಸರನ್ನು ಹಿಂಪಡೆದಿದ್ದರು. ಹೀಗಾಗಿ ಕೊಹ್ಲಿ ಹಾಗೂ ಇಂಗ್ಲೆಂಡ್‌ನ ಶ್ರೇಷ್ಠ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ನಡುವಿನ ಕಾಳಗದಿಂದ ಅಭಿಮಾನಿಗಳು ವಂಚಿತರಾದರು. ಇದು ಅಭಿಮಾನಿಗಳನ್ನು ನಿರಾಸೆಗೊಳಿಸಿದ್ದು ಮಾತ್ರವಲ್ಲದೆ ಸ್ವತಃ ಆ್ಯಂಡರ್ಸನ್ ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಸರಣಿಯಲ್ಲಿ ಕೊಹ್ಲಿಗೆ ಬೌಲಿಂಗ್ ಮಾಡಲು ಸಾಧ್ಯವಾಗದಿರುವುದು ನನಗೆ ನಾಚಿಕೆಗೇಡಿನ ಸಂಗತಿ ಎಂದು ಆಂಡರ್ಸನ್ ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಕೊಹ್ಲಿ ತಮ್ಮ ಹೆಸರನ್ನು ಹಿಂಪಡೆದಿದ್ದರು. ಫೆಬ್ರವರಿ 15 ರಂದು ಅವರ ಪತ್ನಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಕೊಹ್ಲಿ ಮತ್ತು ಆಂಡರ್ಸನ್ ನಡುವಿನ ಕಾಳಗಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಕೊಹ್ಲಿಗೆ ತುಂಬಾ ತೊಂದರೆ ಕೊಡುವ ಬೌಲರ್‌ಗಳಲ್ಲಿ ಆಂಡರ್ಸನ್ ಕೂಡ ಒಬ್ಬರು. ಟೆಸ್ಟ್ ನಲ್ಲಿ ಹಲವು ಬಾರಿ ಕೊಹ್ಲಿಯನ್ನು ಬಲಿಪಶು ಮಾಡಿದ್ದಾರೆ. ಈ ಬಾರಿಯ ಟೆಸ್ಟ್ ಸರಣಿಯಲ್ಲೂ ಕೊಹ್ಲಿ-ಆ್ಯಂಡರ್ಸನ್ ನಡುವೆ ಹಣಾಹಣಿ ನಡೆಯಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಇದು ಆಗಲಿಲ್ಲ.

ಜಿಯೋ ಸಿನಿಮಾ ಜೊತೆ ಮಾತನಾಡಿದ ಆ್ಯಂಡರ್ಸನ್, ಕೊಹ್ಲಿ ಆಡದೇ ಇರುವುದಕ್ಕೆ ಇಂಗ್ಲೆಂಡ್ ತಂಡದ ಅಭಿಮಾನಿಗಳು ಹೆಚ್ಚು ಖುಷಿಯಾಗುತ್ತಾರೆ. ಆದರೆ, ಇದು ನನ್ನ ದೃಷ್ಟಿಕೋನದಿಂದ ಒಳ್ಳೆಯದಲ್ಲ, ಏಕೆಂದರೆ ನಾನು ಅತ್ಯುತ್ತಮ ಆಟಗಾರರ ವಿರುದ್ಧ ಪರೀಕ್ಷಿಸಲು ಬಯಸುತ್ತಾರೆ. ಕೊಹ್ಲಿ ಒಬ್ಬ ಶ್ರೇಷ್ಠ ಆಟಗಾರ, ಮೈದಾನದಲ್ಲಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ಹೇಳಿದ್ದಾರೆ.

ಹಲವು ವರ್ಷಗಳಿಂದ ಕೊಹ್ಲಿ ವಿರುದ್ಧ ಬೌಲಿಂಗ್ ಮಾಡುವುದು ತುಂಬಾ ಸವಾಲಿನದ್ದಾಗಿದೆ. ಅವರು ಆಡದಿದ್ದರೆ ಅದು ಇಂಗ್ಲೆಂಡ್ ತಂಡ ಮತ್ತು ನನಗೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆ್ಯಂಡರ್ಸನ್ ಹೇಳಿದ್ದಾರೆ. ಕೊಹ್ಲಿ ಈ ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದಾರೆ. ಕೊನೆಯ ಪಂದ್ಯ ಮಾರ್ಚ್ 7 ರಿಂದ ಧರ್ಮಶಾಲಾದಲ್ಲಿ ನಡೆಯಲಿದೆ. ಭಾರತ ಈಗಾಗಲೇ ಸರಣಿ ಗೆದ್ದು 3-1 ಮುನ್ನಡೆ ಸಾಧಿಸಿದೆ.