AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶೀದ್ ಖಾನ್ ವಿಶ್ವ ದಾಖಲೆಯನ್ನೇ ಅಳಿಸಿ ಹಾಕಿದ ಜೇಸನ್ ಹೋಲ್ಡರ್​

Jason Holder Record:  ವೆಸ್ಟ್ ಇಂಡೀಸ್ ಆಲ್​ರೌಂಡರ್ ಜೇಸನ್ ಹೋಲ್ಡರ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯಲಿದ್ದಾರೆ. 7 ಕೋಟಿ ರೂ.ಗೆ ಗುಜರಾತ್ ಟೈಟಾನ್ಸ್ ತಂಡದ ಪಾಲಾಗಿರುವ ಹೋಲ್ಡರ್ ಇದೀಗ ಭರ್ಜರಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಅವರ ವರ್ಲ್ಡ್​ ರೆಕಾರ್ಡ್ ಅನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ.

ಝಾಹಿರ್ ಯೂಸುಫ್
|

Updated on:Dec 30, 2025 | 8:01 AM

Share
ಟಿ೨೦ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ವರ್ಷದೊಳಗೆ ಅತ್ಯಧಿಕ ವಿಕೆಟ್ ಕಬಳಿಸಿದ ವಿಶ್ವ ದಾಖಲೆ ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ ಪಾಲಾಗಿದೆ. ಪ್ರಸ್ತುತ ನಡೆಯುತ್ತಿರುವ ಇಂಟರ್ನ್ಯಾಷನಲ್ ಟಿ೨೦ ಲೀಗ್ ಟೂರ್ನಿಯಲ್ಲಿ 12 ವಿಕೆಟ್ ಕಬಳಿಸುವ ಮೂಲಕ ಹೋಲ್ಡರ್ ಈ ಸಾಧನೆ ಮಾಡಿದ್ದಾರೆ.

1 / 5
ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಅಫ್ಘಾನಿಸ್ತಾನದ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಹೆಸರಿನಲ್ಲಿತ್ತು. 2018 ರಲ್ಲಿ 61 ಟಿ೨೦ ಇನಿಂಗ್ಸ್ ಮೂಲಕ ರಶೀದ್ ಒಟ್ಟು 96 ವಿಕೆಟ್ ಕಬಳಿಸಿದ್ದರು.

2 / 5
ಈ ಮೂಲಕ ರಶೀದ್ ಖಾನ್ ಒಂದೇ ವರ್ಷದಲ್ಲಿ ಟಿ೨೦ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ವಿಶ್ವ ದಾಖಲೆ ನಿರ್ಮಿಸಿದ್ದರು. 8 ವರ್ಷಗಳ ಹಿಂದೆ ಬರೆದಿದ್ದ ಈ ವರ್ಲ್ಡ್ ರೆಕಾರ್ಡ್ ಅನ್ನು ಇದೀಗ ಜೇಸನ್ ಹೋಲ್ಡರ್ ಅಳಿಸಿ ಹಾಕಿದ್ದಾರೆ.

3 / 5
ಈ ವರ್ಷ ಈವರೆಗೆ 69 ಇನಿಂಗ್ಸ್ ಆಡಿರುವ ಜೇಸನ್ ಹೋಲ್ಡರ್ ಒಟ್ಟು 97 ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ ಟಿ೨೦ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ವರ್ಷದೊಳಗೆ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡಿದ್ದಾರೆ.

4 / 5
ವಿಶೇಷ ಎಂದರೆ ಜೇಸನ್ ಹೋಲ್ಡರ್ ಹಾಗೂ ರಶೀದ್ ಖಾನ್ ಅವರನ್ನು ಹೊರತುಪಡಿಸಿ ಟಿ20 ಕ್ರಿಕೆಟ್​ನಲ್ಲಿ ಯಾವುದೇ ಬೌಲರ್ ಒಂದೇ ವರ್ಷದಲ್ಲಿ 90 ಕ್ಕಿಂತ ಹೆಚ್ಚು ವಿಕೆಟ್ ಪಡೆದಿಲ್ಲ. ಇದೀಗ ಭರ್ಜರಿ ದಾಖಲೆಯೊಂದಿಗೆ ಹೋಲ್ಡರ್ ಐಪಿಎಲ್​ಗಾಗಿ ಸಜ್ಜಾಗುತ್ತಿದ್ದಾರೆ.

5 / 5

Published On - 8:00 am, Tue, 30 December 25