Jasprit Bumrah: ಕೆರಿಯರ್ನಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದ ಬೂಮ್ ಬೂಮ್ ಬುಮ್ರಾ
TV9 Web | Updated By: ಝಾಹಿರ್ ಯೂಸುಫ್
Updated on:
Sep 26, 2022 | 11:31 AM
Jasprit Bumrah: ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ 4 ಓವರ್ಗಳನ್ನು ಬೌಲ್ ಮಾಡಿದ್ದರು. ಈ ವೇಳೆ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ.
1 / 6
ಭಾರತ-ಆಸ್ಟ್ರೇಲಿಯಾ ನಡುವಣ ಟಿ20 ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಿಂದ ಗೆದ್ದುಕೊಂಡಿದೆ. ಮುಂಬರುವ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಈ ಗೆಲುವು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದಾಗಿದೆ. ಏಕೆಂದರೆ ಬಲಿಷ್ಠ ತಂಡವನ್ನು ಬಗ್ಗು ಬಡಿಯುವ ಮೂಲಕ ಇದೀಗ ರೋಹಿತ್ ಶರ್ಮಾ ಪಡೆ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಇದಾಗ್ಯೂ ತಂಡದ ಪ್ರಮುಖ ವೇಗಿಗಳು ದುಬಾರಿಯಾಗುತ್ತಿರುವುದು ಇದೀಗ ಟೀಮ್ ಇಂಡಿಯಾ ಚಿಂತೆಯನ್ನು ಹೆಚ್ಚಿಸಿದೆ. ಅದರಲ್ಲೂ ಜಸ್ಪ್ರೀತ್ ಬುಮ್ರಾ ತಮ್ಮ ಟಿ20 ಕೆರಿಯರ್ನಲ್ಲೇ ಅತ್ಯಂತ ಕೆಟ್ಟ ಸ್ಪೆಲ್ಗಳನ್ನು ಮಾಡುವ ಮೂಲಕ ಈ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
2 / 6
ಅಂದರೆ ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ 4 ಓವರ್ಗಳನ್ನು ಬೌಲ್ ಮಾಡಿದ್ದರು. ಈ ವೇಳೆ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಅಷ್ಟೇ ಅಲ್ಲದೆ ನೀಡಿರುವುದು ಬರೋಬ್ಬರಿ 50 ರನ್ಗಳು. ಇದು ಬುಮ್ರಾ ಅವರ ಟಿ20 ಕ್ರಿಕೆಟ್ ಕೆರಿಯರ್ನಲ್ಲೇ ಅತ್ಯಂತ ಕೆಟ್ಟ ಸಾಧನೆಯಾಗಿದೆ.
3 / 6
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಜಸ್ಪ್ರೀತ್ ಬುಮ್ರಾ ಇಷ್ಟೊಂದು ದುಬಾರಿಯಾಗಿದ್ದು ಇದೇ ಮೊದಲು. ಈ ಹಿಂದೆ 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 4 ಓವರ್ಗಳಲ್ಲಿ 47 ರನ್ ನೀಡಿದ್ದು ಈ ಹಿಂದಿನ ಕೆಟ್ಟ ಸ್ಪೆಲ್ ಆಗಿತ್ತು. ಇದಾಗ್ಯೂ ಅಂದು 2 ವಿಕೆಟ್ಗಳನ್ನು ಕಬಳಿಸಿದ್ದರು.
4 / 6
ಆದರೆ ಈ ಬಾರಿ ಯಾವುದೇ ವಿಕೆಟ್ ಪಡೆಯದೇ 50 ರನ್ಗಳನ್ನು ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 4 ಓವರ್ಗಳಲ್ಲಿ 50 ರನ್ ನೀಡಿದ ಬೌಲರ್ಗಳ ಪಟ್ಟಿಗೆ ಜಸ್ಪ್ರೀತ್ ಬುಮ್ರಾ ಕೂಡ ಸೇರ್ಪಡೆಯಾಗಿದ್ದಾರೆ.
5 / 6
ಇತ್ತ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಲಯ ತಪ್ಪಿರುವುದು ಟೀಮ್ ಇಂಡಿಯಾ ಪಾಲಿಗೆ ಶುಭ ಸೂಚನೆಯಂತು ಅಲ್ಲ. ಏಕೆಂದರೆ ಈಗಾಗಲೇ ತಂಡದಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಹರ್ಷಲ್ ಪಟೇಲ್ ಮೊನಚಿನ ಬೌಲಿಂಗ್ ದಾಳಿ ಸಂಘಟಿಸುವಲ್ಲಿ ವಿಫಲರಾಗುತ್ತಿದ್ದಾರೆ.
6 / 6
ಇದರ ನಡುವೆ ಸಂಪೂರ್ಣ ನಿರೀಕ್ಷೆ ಬುಮ್ರಾ ಮೇಲಿತ್ತು. ಆದರೆ ಭಾರತೀಯ ಪಿಚ್ನಲ್ಲೇ ಯಾರ್ಕರ್ ಕಿಂಗ್ ವಿಫಲರಾಗಿರುವುದು ಟೀಮ್ ಇಂಡಿಯಾ ಚಿಂತೆಯನ್ನು ಹೆಚ್ಚಿಸಿದೆ. ಇದಾಗ್ಯೂ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೂಲಕ ಜಸ್ಪ್ರೀತ್ ಬುಮ್ರಾ ಹಳೆಯ ಲಯಕ್ಕೆ ಮರಳಲಿದ್ದಾರಾ ಕಾದು ನೋಡಬೇಕಿದೆ.
Published On - 11:31 am, Mon, 26 September 22