Jasprit Bumrah: ಜಸ್​ಪ್ರೀತ್ ಬುಮ್ರಾ ಕಂಬ್ಯಾಕ್​ಗೆ ವೇದಿಕೆ ಸಜ್ಜು..!

| Updated By: ಝಾಹಿರ್ ಯೂಸುಫ್

Updated on: Jun 19, 2023 | 3:58 PM

Jasprit Bumrah Comeback: ಟೀಮ್ ಇಂಡಿಯಾ ಸೆಪ್ಟೆಂಬರ್​ನಲ್ಲಿ ಏಷ್ಯಾಕಪ್ ಆಡಿದ್ರೆ, ಅಕ್ಟೋಬರ್​ನಲ್ಲಿ ಏಕದಿನ ವಿಶ್ವಕಪ್ ಆಡಬೇಕಿದೆ. ಹೀಗಾಗಿ ಜಸ್​ಪ್ರೀತ್ ಬುಮ್ರಾ ಕಂಬ್ಯಾಕ್ ಅನಿವಾರ್ಯ.

1 / 5
ಟೀಮ್ ಇಂಡಿಯಾ (Team India) ವೇಗಿ ಜಸ್​ಪ್ರೀತ್ ಬುಮ್ರಾ (Jasprit Bumrah) ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಂಡು ವರ್ಷಗಳಾಗುತ್ತಾ ಬರುತ್ತಿವೆ. ಅಂದರೆ ಸೆಪ್ಟೆಂಬರ್ 25, 2022 ರಲ್ಲಿ ಬುಮ್ರಾ ಕೊನೆಯ ಬಾರಿ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ಬೆನ್ನು ನೋವಿನ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಯಾರ್ಕರ್ ಸ್ಪೆಷಲಿಸ್ಟ್ ಇದೀಗ ಕಂಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ.

2 / 5
ಭಾರತ ತಂಡವು ಏಷ್ಯಾಕಪ್​ಗೂ ಮುನ್ನ ಐರ್ಲೆಂಡ್ ವಿರುದ್ಧ ಟಿ20 ಸರಣಿ ಆಡಲಿದ್ದು, ಈ ಸರಣಿಯಲ್ಲಿ ಜಸ್​ಪ್ರೀತ್ ಬುಮ್ರಾ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

3 / 5
ಈಗಾಗಲೇ ಜಸ್​ಪ್ರೀತ್ ಬುಮ್ರಾ ಬಹುತೇಕ ಫಿಟ್​ನೆಸ್ ಸಾಧಿಸಿದ್ದು, ಸದ್ಯ ಫಿಸಿಯೋ ಮೇಲ್ವಿಚಾರಣೆಯಲ್ಲಿ ಬೌಲಿಂಗ್ ಅಭ್ಯಾಸವನ್ನು ಕೂಡ ಆರಂಭಿಸಿದ್ದಾರೆ. ಹೀಗಾಗಿಯೇ ಏಷ್ಯಾಕಪ್​ಗೂ ಮುನ್ನ ಬುಮ್ರಾ ಭಾರತ ತಂಡಕ್ಕೆ ಮರಳುವುದು ಖಚಿತ ಎನ್ನಲಾಗಿದೆ.

4 / 5
ಏಕೆಂದರೆ ಸೆಪ್ಟೆಂಬರ್​ನಲ್ಲಿ ಟೀಮ್ ಇಂಡಿಯಾ ಏಷ್ಯಾಕಪ್ ಆಡಿದ್ರೆ, ಅಕ್ಟೋಬರ್​ನಲ್ಲಿ ಏಕದಿನ ವಿಶ್ವಕಪ್ ಆಡಬೇಕಿದೆ. ಈ ಎರಡು ಟೂರ್ನಿಗಳು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು.

5 / 5
ಹೀಗಾಗಿ ಜಸ್​ಪ್ರೀತ್ ಬುಮ್ರಾ ಅವರ ಕಂಬ್ಯಾಕ್ ಅನ್ನು ಬಿಸಿಸಿಐ ಕೂಡ ಎದುರು ನೋಡುತ್ತಿದೆ. ಇದೇ ಕಾರಣದಿಂದಾಗಿ ಬಿಸಿಸಿಐ ಏಷ್ಯಾಕಪ್​ಗೂ ಮುನ್ನ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಬುಮ್ರಾರನ್ನು ಕಣಕ್ಕಿಳಿಸುವ ಇರಾದೆಯಲ್ಲಿದೆ. ಹಾಗಾಗಿ ಐರ್ಲೆಂಡ್ ಸರಣಿಯ ಮೂಲಕ ಜಸ್​ಪ್ರೀತ್ ಬುಮ್ರಾ ಅವರ ಕಂಬ್ಯಾಕ್ ಅನ್ನು ಎದುರು ನೋಡಬಹುದು.