ಅಪರೂಪದ ಸಾಧನೆಯ ಸನಿಹದಲ್ಲಿ ಜಸ್ಪ್ರೀತ್ ಬುಮ್ರಾ

Updated on: Sep 12, 2026 | 9:52 PM

ಭಾರತ-ಅಫ್ಘಾನಿಸ್ತಾನ ಟಿ20 ಸರಣಿಗೆ ಗಾಯದಿಂದ ಚೇತರಿಸಿದ ಜಸ್ಪ್ರೀತ್ ಬುಮ್ರಾ ಮರಳಿದ್ದಾರೆ. ಸೆಪ್ಟೆಂಬರ್ 13ಕ್ಕೆ ಆರಂಭವಾಗುವ ಸರಣಿಯ ಮೊದಲ ಪಂದ್ಯ ಬುಮ್ರಾಗೆ ವಿಶೇಷ. ಕೇವಲ ಒಂದು ವಿಕೆಟ್ ಪಡೆದರೆ, ಅವರು ಟಿ20 ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳ ಐತಿಹಾಸಿಕ ಮೈಲಿಗಲ್ಲು ತಲುಪಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೂರನೇ ಬೌಲರ್ ಆಗಲಿದ್ದಾರೆ. ಚಾಹಲ್ ಮತ್ತು ಭುವನೇಶ್ವರ್ ನಂತರ ಈ ಪಟ್ಟಿಗೆ ಬುಮ್ರಾ ಸೇರಲಿದ್ದಾರೆ.

1 / 5
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಸೆಪ್ಟೆಂಬರ್ 13 ರಂದು ಆರಂಭವಾಗಲಿದೆ. ಈ ಸರಣಿಗೆ ಟೀಂ ಇಂಡಿಯಾದ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಜುಲೈ ತಿಂಗಳಲ್ಲಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ವೇಳೆ ಗಾಯಕ್ಕೆ ತುತ್ತಾಗಿದ್ದ ಬುಮ್ರಾ ಅಂದಿನಿಂದ ತಂಡದಿಂದ ಹೊರಗುಳಿದಿದ್ದರು(PC-PTI).

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಸೆಪ್ಟೆಂಬರ್ 13 ರಂದು ಆರಂಭವಾಗಲಿದೆ. ಈ ಸರಣಿಗೆ ಟೀಂ ಇಂಡಿಯಾದ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಜುಲೈ ತಿಂಗಳಲ್ಲಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ವೇಳೆ ಗಾಯಕ್ಕೆ ತುತ್ತಾಗಿದ್ದ ಬುಮ್ರಾ ಅಂದಿನಿಂದ ತಂಡದಿಂದ ಹೊರಗುಳಿದಿದ್ದರು(PC-PTI).

2 / 5

ಇದೀಗ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಸರಣಿಯ ಮೊದಲ ಪಂದ್ಯ ಬುಮ್ರಾಗೆ ಮತ್ತಷ್ಟು ವಿಶೇಷವಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ಬುಮ್ರಾ ಒಂದು ವಿಕೆಟ್ ಪಡೆದರೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ದಾಟಲಿದ್ದಾರೆ(PC-PTI).

3 / 5

ಈ ಪಂದ್ಯದಲ್ಲಿ ಬುಮ್ರಾ 1 ವಿಕೆಟ್ ಪಡೆದರೆ, ಟಿ20 ಸ್ವರೂಪದಲ್ಲಿ 350 ವಿಕೆಟ್‌ಗಳನ್ನು ಪೂರೈಸುತ್ತಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೂರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಬುಮ್ರಾಗೂ ಮೊದಲು, ಕೇವಲ ಇಬ್ಬರು ಭಾರತೀಯ ಬೌಲರ್‌ಗಳು ಈ ಸಾಧನೆ ಮಾಡಿದ್ದಾರೆ. ಅವರಲ್ಲಿ ಯುಜ್ವೇಂದ್ರ ಚಾಹಲ್ ಹಾಗೂ ಭುವನೇಶ್ವರ್ ಕುಮಾರ್ ಸೇರಿದ್ದಾರೆ(PC-PTI).

4 / 5

ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರ ಹೆಸರಿನಲ್ಲಿದೆ. ಅವರು ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 343 ಪಂದ್ಯಗಳಲ್ಲಿ 396 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ನಂತರದ ಸ್ಥಾನದಲ್ಲಿರುವ ಭುವನೇಶ್ವರ್ ಕುಮಾರ್ 332 ಪಂದ್ಯಗಳಲ್ಲಿ 363 ವಿಕೆಟ್‌ಗಳನ್ನು ಪಡೆದಿದ್ದಾರೆ(PC-PTI).

5 / 5

ಬುಮ್ರಾ ಬಗ್ಗೆ ಹೇಳುವುದಾದರೆ.. ಇಲ್ಲಿಯವರೆಗೆ 283 ಟಿ20 ಪಂದ್ಯಗಳನ್ನಾಡಿರುವ ಬುಮ್ರಾ 349 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20ಯಲ್ಲಿ ವಿಕೆಟ್ ಪಡೆಯುವ ಮೂಲಕ, ಅವರು 350 ವಿಕೆಟ್‌ಗಳ ಗಡಿ ತಲುಪಲಿದ್ದಾರೆ. ಈ ಮೂಲಕ ಚಾಹಲ್ ಹಾಗೂ ಭುವನೇಶ್ವರ್ ಅವರ ಪಟ್ಟಿ ಸೇರಿಕೊಳ್ಳಲಿದ್ದಾರೆ(PC-PTI).

Loading...
Unable to load recommendations.
Follow Us