IPL 2023 – WPL 2023: ತಂಡದಲ್ಲಿ ಕಿಂಗ್ ಅ್ಯಂಡ್ ಕ್ವೀನ್: ಈ ಸಲ ಕಪ್ ನಮ್ದೆ ಎಂದ RCB ಫ್ಯಾನ್ಸ್​

| Updated By: ಝಾಹಿರ್ ಯೂಸುಫ್

Updated on: Feb 16, 2023 | 9:23 PM

IPL 2023 - WPL 2023: ಸ್ಮೃತಿ ಮಂಧಾನ ತಂಡಕ್ಕೆ ಆಯ್ಕೆಯಾಗುತ್ತಿದ್ದಂತೆ RCB ಅಭಿಮಾನಿಗಳ ಹರ್ಷೋದ್ಘಾರ ಕೂಡ ಮುಗಿಲು ಮುಟ್ಟಿದೆ. ಇದಕ್ಕೆ ಒಂದು ಕಾರಣ ಜೆರ್ಸಿ ನಂಬರ್ 18. ಮತ್ತೊಂದು ಕಾರಣ ಕಿಂಗ್ ಅ್ಯಂಡ್ ಕ್ವೀನ್.

1 / 6
ವುಮೆನ್ಸ್ ಪ್ರೀಮಿಯರ್ ಲೀಗ್​ಗಾಗಿ ರಾಯಲ್ ಚಾಲೆಂಜರ್ಸ್ ತಂಡವು ಬಲಿಷ್ಠ ತಂಡವನ್ನು ರೂಪಿಸಿದೆ. ಅದರಲ್ಲೂ ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರನ್ನು ತಂಡಕ್ಕೆ ಆಯ್ಕೆ ಮಾಡಿ ಅಭಿಮಾನಿಗಳ ಮನಗೆಲ್ಲುವಲ್ಲಿ ಆರ್​ಸಿಬಿ ಫ್ರಾಂಚೈಸಿ ಯಶಸ್ವಿಯಾಗಿದೆ.

2 / 6
ಇತ್ತ ಸ್ಟೈಲಿಷ್ಟ್ ಸ್ಮೃತಿ ತಂಡಕ್ಕೆ ಆಯ್ಕೆಯಾಗುತ್ತಿದ್ದಂತೆ RCB ಅಭಿಮಾನಿಗಳ ಹರ್ಷೋದ್ಘಾರ ಕೂಡ ಮುಗಿಲು ಮುಟ್ಟಿದೆ. ಇದಕ್ಕೆ ಒಂದು ಕಾರಣ ಜೆರ್ಸಿ ನಂಬರ್ 18. ಮತ್ತೊಂದು ಕಾರಣ ಕಿಂಗ್ ಅ್ಯಂಡ್ ಕ್ವೀನ್.

3 / 6
ಹೌದು, ಟೀಮ್ ಇಂಡಿಯಾದ ಕಿಂಗ್ ಯಾರೆಂದು ಕೇಳಿದರೆ ಥಟ್ಟನೆ ಬರುವ ಉತ್ತರ ವಿರಾಟ್ ಕೊಹ್ಲಿ. ಅತ್ತ ಮಹಿಳಾ ತಂಡದ ಕ್ವೀನ್ ಯಾರೆಂಬ ಪ್ರಶ್ನೆಗೆ ಸಿಗುವ ಉತ್ತರ ಸ್ಮೃತಿ ಮಂಧಾನ. ಇದೀಗ ಇವರಿಬ್ಬರೂ ಆರ್​ಸಿಬಿ ತಂಡದಲ್ಲಿದ್ದಾರೆ.

4 / 6
ಇಲ್ಲಿ ಮತ್ತೊಂದು ವಿಶೇಷ ಎಂದರೆ ಇಬ್ಬರೂ ಕೂಡ ಜೆರ್ಸಿ ನಂಬರ್ 18 ನಲ್ಲೇ ಕಣಕ್ಕಿಳಿಯಲಿದ್ದಾರೆ. ಸ್ಮೃತಿ ಮಂಧಾನ ತಮ್ಮ ಫೇವರೇಟ್ ನಂಬರ್ ಆಗಿ ಜನ್ಮದಿನಾಂಕವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ತಂದೆಯ ನೆನಪಿಗಾಗಿ 18 ನಂಬರಿನ ಜೆರ್ಸಿಯಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯುತ್ತಿದ್ದಾರೆ.

5 / 6
ಇದೀಗ ಭಾರತೀಯ ಕ್ರಿಕೆಟ್ ಅಂಗಳದ ಕಿಂಗ್ ಅ್ಯಂಡ್ ಕ್ವೀನ್ ಆಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಹಾಗೂ ಸ್ಮೃತಿ ಮಂಧಾನ ಆರ್​ಸಿಬಿ ತಂಡದಲ್ಲಿ ಜೆರ್ಸಿ ನಂಬರ್ 18 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತ ಕಿಂಗ್ ಮತ್ತು ಕ್ವೀನ್ ನಮ್ಮ ತಂಡದಲ್ಲಿರುವ ಕಾರಣ ಈ ಸಲ ಕಪ್ ನಮ್ದೆ ಎಂದು ಆರ್​ಸಿಬಿ ಅಭಿಮಾನಿಗಳು ವಿಜಯಘೋಷ ಮೊಳಗಿಸಲಾರಂಭಿಸಿದ್ದಾರೆ.

6 / 6
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್, ರಿಚಾ ಘೋಷ್, ಇಂದ್ರಾಣಿ ರಾಯ್, ದಿಶಾ ಕಸತ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಭನಾ, ಎರಿನ್ ಬರ್ನ್ಸ್, ಹೀದರ್ ನೈಟ್, ಡೇನ್ ವ್ಯಾನ್ ನಿಕೆರ್ಕ್, ಪ್ರೀತಿ ಬೋಸ್, ಪೂನಂ ಖೆಮ್ನಾರ್, ಕೋಮಲ್ ಝಂಝಾದ್, ಮೇಗನ್ ಶಟ್, ಸಹನಾ ಪವಾರ್.