ವಿರಾಟ್ ಕೊಹ್ಲಿಯ ವಿಶ್ವ ದಾಖಲೆ ಪಟ್ಟಿಗೆ ಜೋ ರೂಟ್ ಎಂಟ್ರಿ

|

Updated on: Oct 10, 2024 | 1:43 PM

Pakistan vs England, 1st Test: ಪಾಕಿಸ್ತಾನ್ - ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ರನ್​ಗಳ ಸುರಿಮಳೆಯಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಪ್ರಥಮ ಇನಿಂಗ್ಸ್​ 556 ರನ್ ಕಲೆಹಾಕಿದರೆ, ಇದಕ್ಕುತ್ತರವಾಗಿ ಇನಿಂಗ್ಸ್ ಆಡುತ್ತಿರುವ ಇಂಗ್ಲೆಂಡ್ 700 ಕ್ಕೂ ಅಧಿಕ ರನ್ ಪೇರಿಸಿದೆ.

1 / 6
ಮುಲ್ತಾನ್​​ನಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ದಾಂಡಿಗ ಜೋ ರೂಟ್ (Joe Root) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೂಟ್ 375 ಎಸೆತಗಳಲ್ಲಿ 17 ಫೋರ್​ಗಳೊಂದಿಗೆ 262 ರನ್ ಬಾರಿಸಿದ್ದಾರೆ.

2 / 6
ಈ ಭರ್ಜರಿ ದ್ವಿಶತಕದೊಂದಿಗೆ ರೂಟ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 20 ಸಾವಿರ ರನ್ ಪೂರೈಸಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಇಂಗ್ಲೆಂಡ್​ನ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ಸಕ್ರಿಯ ಬ್ಯಾಟರ್​ಗಳ ಪಟ್ಟಿಯಲ್ಲಿ ಈ ಮೈಲುಗಲ್ಲು ದಾಟಿದ 2ನೇ ದಾಂಡಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

3 / 6
ಪ್ರಸ್ತುತ ಆಡುತ್ತಿರುವ ಆಟಗಾರರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 20 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇಂಟರ್​ನ್ಯಾಷನಲ್ ಕ್ರಿಕೆಟ್​ನಲ್ಲಿ 595 ಇನಿಂಗ್ಸ್ ಆಡಿರುವ ಕಿಂಗ್ ಕೊಹ್ಲಿ 80 ಶತಕಗಳೊಂದಿಗೆ ಒಟ್ಟು 27041 ರನ್​ ಕಲೆಹಾಕಿದ್ದಾರೆ.

4 / 6
ಇದೀಗ 20 ಸಾವಿರ ರನ್​ಗಳಿಸಿದ ಸಕ್ರಿಯ ಬ್ಯಾಟರ್​ಗಳ ಪಟ್ಟಿಗೆ ಜೋ ರೂಟ್ ಕೂಡ ಎಂಟ್ರಿ ಕೊಟ್ಟಿದ್ದಾರೆ. 2012 ರಿಂದ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುತ್ತಿರುವ ರೂಟ್ ಒಟ್ಟು 457 ಇನಿಂಗ್ಸ್​ಗಳಿಂದ 20,000* ರನ್ ಕಲೆಹಾಕಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ 2ನೇ ಆ್ಯಕ್ಟೀವ್ ಪ್ಲೇಯರ್ ಎನಿಸಿಕೊಂಡಿದ್ದಾರೆ.

5 / 6
ಇದಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ 20 ಸಾವಿರ ರನ್ ಕಲೆಹಾಕಿದ ವಿಶ್ವದ ನಾಲ್ಕನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (417 ಇನಿಂಗ್ಸ್) ಅಗ್ರಸ್ಥಾನದಲ್ಲಿದ್ದರೆ, ಸಚಿನ್ ತೆಂಡೂಲ್ಕರ್ (453 ಇನಿಂಗ್ಸ್) ಹಾಗೂ ಬ್ರಿಯಾನ್ ಲಾರಾ (453) ನಂತರದ ಸ್ಥಾನಗಳಲ್ಲಿದ್ದಾರೆ. ಇದೀಗ 458 ಇನಿಂಗ್ಸ್​ಗಳ ಮೂಲಕ 20 ಸಾವಿರ ರನ್ ಪೂರೈಸಿರುವ ಜೋ ರೂಟ್ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (564) ಅವರನ್ನು ಹಿಂದಿಕ್ಕಿದ್ದಾರೆ.

6 / 6
ಹಾಗೆಯೇ ಈ ದ್ವಿಶತಕದೊಂದಿಗೆ ಫ್ಯಾಬ್-4 ಆಟಗಾರರಲ್ಲಿ ಅತೀ ಹೆಚ್ಚು ಡಬಲ್ ಸೆಂಚುರಿ ಸಿಡಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅದು ಸಹ ಕೇನ್ ವಿಲಿಯಮ್ಸನ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ. ಅಂದರೆ ಫಾಬಲಸ್ ಫೋರ್​ನಲ್ಲಿ ಅತ್ಯಧಿಕ ಡಬಲ್ ಸೆಂಚುರಿ ಸಿಡಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ ಈವರೆಗೆ 7 ದ್ವಿಶತಕ ಬಾರಿಸಿದರೆ, ಜೋ ರೂಟ್ ಹಾಗೂ ಕೇನ್ ವಿಲಿಯಮ್ಸನ್ ತಲಾ 6 ಡಬಲ್ ಸೆಂಚುರಿ ಸಿಡಿಸಿದ್ದಾರೆ. ಇನ್ನು ಸ್ಟೀವ್ ಸ್ಮಿತ್ 4 ದ್ವಿಶತಕಗಳನ್ನು ಬಾರಿಸಿದ್ದಾರೆ.

Published On - 12:54 pm, Thu, 10 October 24