ಕ್ರಿಕೆಟ್ ದೇವರ ವಿಶ್ವ ದಾಖಲೆ ಮುರಿದ ಜೋ ರೂಟ್..!

Updated on: Sep 12, 2026 | 7:52 PM

ಇಂಗ್ಲೆಂಡ್‌ನ ಜೋ ರೂಟ್ ಪಾಕಿಸ್ತಾನ ವಿರುದ್ಧದ ಟೆಸ್ಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಟೆಸ್ಟ್ ಅರ್ಧಶತಕಗಳ ದಾಖಲೆಯನ್ನು (69) ಮುರಿದಿದ್ದಾರೆ. ಈ ಮೂಲಕ ಅವರು 149 ವರ್ಷಗಳ ಇತಿಹಾಸದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ರೂಟ್ ಎಡ್ಜ್‌ಬಾಸ್ಟನ್‌ನಲ್ಲಿ 1,000 ಟೆಸ್ಟ್ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದು, ನಾಲ್ಕು ಕ್ರೀಡಾಂಗಣಗಳಲ್ಲಿ 1,000+ ರನ್ ಗಳಿಸಿದ ವಿಶ್ವದ ಮೂರನೇ ಆಟಗಾರ ಎನಿಸಿದ್ದಾರೆ.

1 / 5
ಪಾಕಿಸ್ತಾನ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಆತಿಥೇಯ ಇಂಗ್ಲೆಂಡ್‌ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ. ಕೊನೆಯ ಟೆಸ್ಟ್​ನಲ್ಲಿ ಪಾಕ್ ನೀಡಿದ 130 ರನ್​ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಪರ ನಾಯಕ ಜೋ ರೂಟ್ ಅಜೇಯ 62 ರನ್​ಗಳ ಇನ್ನಿಂಗ್ಸ್ ಆಡಿದರು. ಈ  ಅರ್ಧಶತಕದ ಮೂಲಕ ರೂಟ್ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ(PC-PTI).

ಪಾಕಿಸ್ತಾನ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಆತಿಥೇಯ ಇಂಗ್ಲೆಂಡ್‌ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ. ಕೊನೆಯ ಟೆಸ್ಟ್​ನಲ್ಲಿ ಪಾಕ್ ನೀಡಿದ 130 ರನ್​ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಪರ ನಾಯಕ ಜೋ ರೂಟ್ ಅಜೇಯ 62 ರನ್​ಗಳ ಇನ್ನಿಂಗ್ಸ್ ಆಡಿದರು. ಈ ಅರ್ಧಶತಕದ ಮೂಲಕ ರೂಟ್ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ(PC-PTI).

2 / 5

ಈ ಅರ್ಧಶತಕದೊಂದಿಗೆ, ಜೋ ರೂಟ್ 149 ವರ್ಷಗಳ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೂಲಕ ದಶಕಗಳಿಂದ ಈ ದಾಖಲೆಯನ್ನು ತನ್ನ ಖಾತೆಯಲ್ಲಿ ಇಟ್ಟಿಕೊಂಡಿದ್ದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ(PC-PTI).

3 / 5

ಸಚಿನ್ ತೆಂಡೂಲ್ಕರ್ ತಮ್ಮ ಐತಿಹಾಸಿಕ 200 ಪಂದ್ಯಗಳ ಟೆಸ್ಟ್ ವೃತ್ತಿಜೀವನದಲ್ಲಿ 68 ಅರ್ಧಶತಕಗಳನ್ನು ಬಾರಿಸಿದ್ದರು. ಈಗ, ಜೋ ರೂಟ್ ತಮ್ಮ 69 ನೇ ಟೆಸ್ಟ್ ಅರ್ಧಶತಕದೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ತಲುಪಿದ್ದಾರೆ. ವೆಸ್ಟ್ ಇಂಡೀಸ್ ದಂತಕಥೆ ಶಿವನಾರಾಯಣ್ ಚಂದ್ರಪಾಲ್ 66 ಅರ್ಧಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ(PC-PTI).

4 / 5

ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ತಂಡ ಎಂಟು ವಿಕೆಟ್‌ಗಳ ಜಯ ಸಾಧಿಸುವಲ್ಲಿ 69 ಎಸೆತಗಳಲ್ಲಿ ಅಜೇಯ 62 ರನ್ ಗಳಿಸಿದ ಜೋ ರೂಟ್, ಈ ಪಂದ್ಯದಲ್ಲಿ ಮತ್ತೊಂದು ವಿಶಿಷ್ಟ ದಾಖಲೆ ನಿರ್ಮಿಸಿದರು. ಬರ್ಮಿಂಗ್ಹ್ಯಾಮ್‌ನ ಐತಿಹಾಸಿಕ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಟೆಸ್ಟ್ ಇತಿಹಾಸದಲ್ಲಿ 1,000 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ(PC-PTI).

5 / 5

ಜೋ ರೂಟ್ ನಾಲ್ಕು ವಿಭಿನ್ನ ಮೈದಾನಗಳಲ್ಲಿ 1,000 ಕ್ಕೂ ಹೆಚ್ಚು ಟೆಸ್ಟ್ ರನ್ ಗಳಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಆಟಗಾರ ಅವರು. ರೂಟ್‌ಗಿಂತ ಮೊದಲು, ದಕ್ಷಿಣ ಆಫ್ರಿಕಾದ ಜಾಕ್ವೆಸ್ ಕಾಲಿಸ್ ಮತ್ತು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮಾತ್ರ ಈ ಸಾಧನೆ ಮಾಡಿದ್ದರು(PC-PTI).

Loading...
Unable to load recommendations.
Follow Us