Josh Hazlewood IPL Auction 2025: ಮತ್ತೆ ಆರ್​ಸಿಬಿಗೆ ಬಂದ ಆಸೀಸ್ ವೇಗಿ

Updated on: Nov 24, 2024 | 9:50 PM

Josh Hazlewood Auction Price: ಆಸ್ಟ್ರೇಲಿಯಾದ ಸ್ಟಾರ್ ಜೋಶ್ ಹೇಜಲ್‌ವುಡ್ ಮತ್ತೊಮ್ಮೆ ಆರ್​ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. 2023 ರ ಆವೃತ್ತಿಯಲ್ಲಿ ಆರ್​ಸಿಬಿ ಪರ ಆಡಿದ್ದ ಹೇಜಲ್‌ವುಡ್ 2 ಕೋಟಿ ಮೂಲ ಬೆಲೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಅಂತಿಮವಾಗಿ ಅವರನ್ನು ಆರ್​ಸಿಬಿ 12.50 ಕೋಟಿಗೆ ಖರೀದಿಸಿದೆ.

1 / 5
ಆಸ್ಟ್ರೇಲಿಯಾದ ಸ್ಟಾರ್ ಜೋಶ್ ಹೇಜಲ್‌ವುಡ್ ಮತ್ತೊಮ್ಮೆ ಆರ್​ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. 2023 ರ ಆವೃತ್ತಿಯಲ್ಲಿ ಆರ್​ಸಿಬಿ ಪರ ಆಡಿದ್ದ ಹೇಜಲ್‌ವುಡ್ 2 ಕೋಟಿ ಮೂಲ ಬೆಲೆಗೆ ತಮ್ಮ ಹೆಸರನ್ನು  ನೋಂದಾಯಿಸಿಕೊಂಡಿದ್ದರು. ಅಂತಿಮವಾಗಿ ಅವರನ್ನು ಆರ್​ಸಿಬಿ 12.50 ಕೋಟಿಗೆ ಖರೀದಿಸಿದೆ.

ಆಸ್ಟ್ರೇಲಿಯಾದ ಸ್ಟಾರ್ ಜೋಶ್ ಹೇಜಲ್‌ವುಡ್ ಮತ್ತೊಮ್ಮೆ ಆರ್​ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. 2023 ರ ಆವೃತ್ತಿಯಲ್ಲಿ ಆರ್​ಸಿಬಿ ಪರ ಆಡಿದ್ದ ಹೇಜಲ್‌ವುಡ್ 2 ಕೋಟಿ ಮೂಲ ಬೆಲೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಅಂತಿಮವಾಗಿ ಅವರನ್ನು ಆರ್​ಸಿಬಿ 12.50 ಕೋಟಿಗೆ ಖರೀದಿಸಿದೆ.

2 / 5

2010 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುತ್ತಿರುವ ಹೇಜಲ್‌ವುಡ್ 2020 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಮೊದಲ ಆವೃತ್ತಿಯಲ್ಲಿ ಕೇವಲ ಮೂರು ಪಂದ್ಯಗಳನ್ನು ಆಡಿದ್ದ ಅವರು ಏಕೈಕ ವಿಕೆಟ್ ಪಡೆದಿದ್ದರು.

3 / 5

2021 ರ ಐಪಿಎಲ್‌ನಲ್ಲಿ 9 ಪಂದ್ಯಗಳನ್ನಾಡಿದ್ದ ಹೇಜಲ್‌ವುಡ್ 11 ವಿಕೆಟ್ಗಳನ್ನು ಪಡೆದಿದ್ದರು. ಹೀಗಾಗಿ 2022 ರ ಐಪಿಎಲ್​ನ ಮುಂಚಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೇಜಲ್‌ವುಡ್​ರನ್ನು ತಂಡಕ್ಕೆ ಸೇರಿಕೊಂಡಿತ್ತು.

4 / 5

2022 ರ ಆವೃತ್ತಿಯಲ್ಲಿ ಆಡಿದ್ದ 3 ಪಂದ್ಯಗಳಲ್ಲಿ 3 ವಿಕೆಟ್​ಗಳನ್ನು ತೆಗೆದುಕೊಂಡಿದ್ದ ಹೇಜಲ್‌ವುಡ್, ಆ ಬಳಿಕ 2023 ರ ಐಪಿಎಲ್‌ನಲ್ಲಿ ಆಡಿದ್ದ 12 ಪಂದ್ಯಗಳಲ್ಲಿ 20 ವಿಕೆಟ್ಗಳನ್ನು ಪಡೆದಿದ್ದರು. ಐಪಿಎಲ್‌ನಲ್ಲಿ ಇದುವರೆಗೆ 27 ಪಂದ್ಯಗಳನ್ನು ಆಡಿರುವ ಅವರು 23.14ರ ಸರಾಸರಿಯಲ್ಲಿ 35 ವಿಕೆಟ್‌ಗಳು ಉರುಳಿಸಿದ್ದಾರೆ.

5 / 5

ಇದೀಗ ಈ ಮೆಗಾ ಹರಾಜಿನಲ್ಲಿ ಜೋಶ್ ಹೇಜಲ್‌ವುಡ್ ಅವರನ್ನು ಖರೀದಿಸಲು ಲಕ್ನೋ ಸೂಪರ್ ಜೈಂಟ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಕೂಡ ಬಿಡ್ ಮಾಡಿದ್ದವು. ಆದರೆ ಅಂತಿಮವಾಗಿ ಆರ್​ಸಿಬಿ 12.50 ಕೋಟಿ ನೀಡಿ ಖರೀದಿಸುವಲ್ಲಿ ಯಶಸ್ವಿಯಾಯಿತು.

Loading...
Unable to load recommendations.
Follow Us