Kane Williamson: ಭರ್ಜರಿ ಶತಕದೊಂದಿಗೆ ಹೊಸ ದಾಖಲೆ ಬರೆದ ಕೇನ್ ವಿಲಿಯಮ್ಸನ್

| Updated By: ಝಾಹಿರ್ ಯೂಸುಫ್

Updated on: Feb 27, 2023 | 6:08 PM

Kane Williamson Records: ಕೇನ್ ವಿಲಿಯಮ್ಸನ್ ಅವರ ಈ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 483 ರನ್​ ಕಲೆಹಾಕಿದೆ. ವಿಶೇಷ ಎಂದರೆ ಈ ಸೆಂಚುರಿಯೊಂದಿಗೆ ನ್ಯೂಜಿಲೆಂಡ್ ಪರ ಹೊಸ ದಾಖಲೆಯನ್ನು ಕೂಡ ಕೇನ್ ವಿಲಿಯಮ್ಸನ್ ನಿರ್ಮಿಸಿದರು.

1 / 7
ವೆಲ್ಲಿಂಗ್ಟನ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ದ್ವಿತೀಯ ಇನಿಂಗ್ಸ್​ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಕೇನ್ 282 ಎಸೆತಗಳಲ್ಲಿ 132 ರನ್ ಬಾರಿಸಿದರು.

2 / 7
ಕೇನ್ ವಿಲಿಯಮ್ಸನ್ ಅವರ ಈ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 483 ರನ್​ ಕಲೆಹಾಕಿದೆ. ವಿಶೇಷ ಎಂದರೆ ಈ ಸೆಂಚುರಿಯೊಂದಿಗೆ ನ್ಯೂಜಿಲೆಂಡ್ ಪರ ಹೊಸ ದಾಖಲೆಯನ್ನು ಕೂಡ ಕೇನ್ ವಿಲಿಯಮ್ಸನ್ ನಿರ್ಮಿಸಿದರು.

3 / 7
ಹೌದು, ಇಂಗ್ಲೆಂಡ್ ವಿರುದ್ಧದ ಈ ಶತಕದೊಂದಿಗೆ ನ್ಯೂಜಿಲೆಂಡ್ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಕೇನ್ ವಿಲಿಯಮ್ಸನ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ರಾಸ್ ಟೇಲರ್ ಹೆಸರಿನಲ್ಲಿತ್ತು.

4 / 7
ನ್ಯೂಜಿಲೆಂಡ್ ಪರ 112 ಟೆಸ್ಟ್ ಪಂದ್ಯಗಳಲ್ಲಿ 196 ಇನಿಂಗ್ಸ್ ಆಡಿದ್ದ ರಾಸ್ ಟೇಲರ್ 3 ದ್ವಿಶತಕ, 19 ಶತಕ ಹಾಗೂ 35 ಅರ್ಧಶತಕಗಳೊಂದಿಗೆ ಒಟ್ಟು 7684 ರನ್ ಕಲೆಹಾಕಿದ್ದರು. ಇದೀಗ ಈ ದಾಖಲೆಯನ್ನು ಮುರಿದು ಕೇನ್ ವಿಲಿಯಮ್ಸನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

5 / 7
92 ಟೆಸ್ಟ್ ಪಂದ್ಯಗಳಲ್ಲಿ 161 ಇನಿಂಗ್ಸ್ ಆಡಿರುವ ಕೇನ್ ವಿಲಿಯಮ್ಸನ್ 5 ದ್ವಿಶತಕ, 26 ಶತಕ ಹಾಗೂ 33 ಅರ್ಧಶತಕದೊಂದಿಗೆ ಒಟ್ಟು 7787	 ರನ್​ ಕಲೆಹಾಕಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ಪರ ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

6 / 7
ವಿಶೇಷ ಎಂದರೆ ನ್ಯೂಜಿಲೆಂಡ್ ಪರ ಟೆಸ್ಟ್ ಕ್ರಿಕೆಟ್​ನಲ್ಲಿ 7 ಸಾವಿರಕ್ಕೂ ಅಧಿಕ ರನ್​ಗಳಿಸಿರುವುದು ಕೇವಲ ಮೂವರು ಬ್ಯಾಟರ್​ಗಳು ಮಾತ್ರ. ಅದರಲ್ಲಿ ಕೇನ್ ವಿಲಿಯಮ್ಸನ್ ಈಗ ಅಗ್ರಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನದಲ್ಲಿ ರಾಸ್ ಟೇಲರ್ ಇದ್ದಾರೆ.

7 / 7
ಇನ್ನು 111 ಟೆಸ್ಟ್ ಪಂದ್ಯಗಳ 189 ಇನಿಂಗ್ಸ್​ನಲ್ಲಿ 7172 ಕಲೆಹಾಕಿರುವ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್  ಮೂರನೇ ಸ್ಥಾನದಲ್ಲಿದ್ದಾರೆ. ಈ ಮೂವರನ್ನು ಹೊರತುಪಡಿಸಿ ಕಿವೀಸ್ ತಂಡದ ಮತ್ಯಾವ ಬ್ಯಾಟರ್ ಟೆಸ್ಟ್ ಕ್ರಿಕೆಟ್​ನಲ್ಲಿ 7 ಸಾವಿರ ರನ್ ಪೂರೈಸಿಲ್ಲ ಎಂಬುದೇ ವಿಶೇಷ.