16ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮೊದಲು ಮುಂಬೈ ಇಂಡಿಯನ್ಸ್‌ನ ಪ್ರಮುಖ ಸದಸ್ಯರಾಗಿದ್ದ ಕೀರಾನ್ ಪೊಲಾರ್ಡ್ ಐಪಿಎಲ್ಗೆ ವಿದಾಯ ಹೇಳಿದ್ದರು. ಆದರೆ ಅವರನ್ನು ಕೋಚಿಂಗ್ ಸಿಬ್ಬಂದಿಯಾಗಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮುಂಬೈ ಫ್ರಾಂಚೈಸ್ ತನ್ನ ತಂಡವೊಂದರ ನಾಯಕತ್ವವನ್ನು ಅವರಿಗೆ ವಹಿಸಿದೆ. ಅಷ್ಟೇ ಅಲ್ಲ, ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ಗೂ ಕೂಡ ಮುಂಬೈ ಫ್ರಾಂಚೈಸಿ ದೊಡ್ಡ ಜವಾಬ್ದಾರಿ ನೀಡಿದೆ.
ಮುಂಬೈ ಫ್ರಾಂಚೈಸಿ, ಯುಎಇ ಟಿ20 ಲೀಗ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಮುಂಬರುವ ಟಿ20 ಲೀಗ್‌ನಲ್ಲಿ ತಂಡಗಳನ್ನು ಖರೀದಿಸಿದೆ. ಪೊಲಾರ್ಡ್ ಮತ್ತು ರಶೀದ್ ಈ ಲೀಗ್‌ಗಳಲ್ಲಿ ಮುಂಬೈ ಫ್ರಾಂಚೈಸಿಯ ಭಾಗವಾಗಿದ್ದಾರೆ.
ಪೊಲಾರ್ಡ್ ಅವರನ್ನು ಯುಎಇ ಟಿ20 ಲೀಗ್ ತಂಡದ ಎಂಐ ಎಮಿರೇಟ್ಸ್‌ನ ನಾಯಕರನ್ನಾಗಿ ನೇಮಿಸಲಾಗಿದೆ ಎಂದು ಮುಂಬೈ ಫ್ರಾಂಚೈಸಿ ಶುಕ್ರವಾರ ಹೇಳಿಕೆ ನೀಡಿದೆ.
ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಆಡುವ ರಶೀದ್ ಖಾನ್ ಅವರನ್ನು ದಕ್ಷಿಣ ಆಫ್ರಿಕಾದ ಟಿ20 ಲೀಗ್‌ನಲ್ಲಿ ಮುಂಬೈ ಫ್ರಾಂಚೈಸಿ ಡ್ರಾಫ್ಟ್‌ನಲ್ಲಿ ಖರೀದಿಸಿತ್ತು. ಇದೀಗ ಅವರನ್ನು MI ಕೇಪ್ ಟೌನ್ ತಂಡದ ನಾಯಕರಾಗಿ ಆಯ್ಕೆ ಮಾಡಲಾಗಿದೆ.
ಮುಂಬೈ ಫ್ರಾಂಚೈಸಿ ತಂಡವು ಐಪಿಎಲ್‌ನಲ್ಲಿ ಮಾಡಿದ ಸಾಧನೆಯನ್ನು ದಕ್ಷಿಣ ಆಫ್ರಿಕಾ ಮತ್ತು ಯುಎಇ ಲೀಗ್‌ಗಳಲ್ಲಿ ಮಾಡುತ್ತದೆಯಾ ಎಂಬುದನ್ನು ಈಗ ಕಾದುನೋಡಬೇಕಿದೆ.