KL Rahul: ಭಾರತ ತಂಡದಿಂದ ಕೆಎಲ್ ರಾಹುಲ್ ಔಟ್
Asia Cup 2025: ಏಷ್ಯಾಕಪ್ 2025 ರಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಆ ತಂಡಗಳೆಂದರೆ, ಭಾರತ, ಪಾಕಿಸ್ತಾನ್, ಶ್ರೀಲಂಕಾ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಯುಎಇ, ಒಮಾನ್ ಹಾಗೂ ಹಾಂಗ್ಕಾಂಗ್. ಈ ತಿಂಗಳಾಂತ್ಯದೊಳಗೆ ಏಷ್ಯಾಕಪ್ಗೆ ಎಲ್ಲಾ ತಂಡಗಳು ಪ್ರಕಟವಾಗಲಿದ್ದು, ಇತ್ತ ಭಾರತ ತಂಡದಲ್ಲಿ ಕೆಎಲ್ ರಾಹುಲ್ ಕಾಣಿಸಿಕೊಳ್ಳುವುದು ಡೌಟ್.
Updated on: Aug 07, 2025 | 7:32 AM

ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನ ಏಷ್ಯಾಕಪ್ (Asia Cup 2025) ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಯುಎಇ ನಲ್ಲಿ ನಡೆಯಲಿರುವ ಈ ಟೂರ್ನಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಹದಿನೈದು ಸದಸ್ಯರುಗಳ ಈ ತಂಡದಲ್ಲಿ ಕನ್ನಡಿಗ ಕೆಎಲ್ ರಾಹುಲ್ಗೆ (KL Rahul) ಸ್ಥಾನ ಲಭಿಸಿಲ್ಲ.

ಮುಂಬರುವ ಏಷ್ಯಾಕಪ್ ಟಿ20 ಸ್ವರೂಪದಲ್ಲಿ ನಡೆಯಲಿದ್ದು, ಹೀಗಾಗಿ ಯುವ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಇದೇ ಕಾರಣದಿಂದಾಗಿ ಕೆಎಲ್ ರಾಹುಲ್ಗೆ ಸ್ಥಾನ ನೀಡಲಾಗಿಲ್ಲ ಎಂದು ತಿಳಿದು ಬಂದಿದೆ. ಬದಲಾಗಿ ವಿಕೆಟ್ ಕೀಪರ್ಗಳಾಗಿ ಸಂಜು ಸ್ಯಾಮ್ಸನ್ ಹಾಗೂ ಜಿತೇಶ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ.

ಇತ್ತ ಕೆಎಲ್ ರಾಹುಲ್ ಭಾರತದ ಪರ ಟಿ20 ಪಂದ್ಯವಾಡಿ ವರ್ಷ ಕಳೆದಿದೆ. ಅದರಲ್ಲೂ 2024ರಲ್ಲಿ ನಡೆದ ಟಿ20 ವಿಶ್ವಕಪ್ ಗೆ ರಾಹುಲ್ ಅವರನ್ನು ಆಯ್ಕೆ ಮಾಡಿರಲಿಲ್ಲ. ಇನ್ನು ಈ ವರ್ಷದ ಆರಂಭದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲೂ ಕೆಎಲ್ಆರ್ಗೆ ಚಾನ್ಸ್ ನೀಡಿರಲಿಲ್ಲ.

ಇದಾಗ್ಯೂ ಕಳೆದ ಬಾರಿಯ ಐಪಿಎಲ್ನಲ್ಲಿ ಕೆಎಲ್ ರಾಹುಲ್ 539 ರನ್ ಕಲೆಹಾಕಿ ಮಿಂಚಿದ್ದರು. ಹೀಗಾಗಿ ಈ ಬಾರಿಯ ಏಷ್ಯಾಕಪ್ ತಂಡದಲ್ಲಿ ಅವಕಾಶವನ್ನು ನಿರೀಕ್ಷಿಸಲಾಗಿತ್ತು. ಆದರೀಗ ಭಾರತ ಟಿ20 ತಂಡ ಪ್ರಕಟಗೊಂಡಿದ್ದು, ಈ ತಂಡದಲ್ಲಿ ಆವರ ಹೆಸರು ಕಾಣಿಸಿಕೊಂಡಿಲ್ಲ. ಹೀಗಾಗಿ ಕೆಎಲ್ ರಾಹುಲ್ ಅವರ ಟಿ20 ಕೆರಿಯರ್ ಅಂತ್ಯ ಎಂದರೆ ತಪ್ಪಾಗಲಾರದು.

ಕೆಎಲ್ ರಾಹುಲ್ ಟೀಮ್ ಇಂಡಿಯಾ ಪರ ಈವರೆಗೆ 72 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 68 ಇನಿಂಗ್ಸ್ ಆಡಿರುವ ಅವರು 2265 ರನ್ ಕಲೆ ಹಾಕಿದ್ದಾರೆ. ಇದರ ನಡುವೆ 2 ಶತಕ ಹಾಗೂ 22 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಈ ಮೂಲಕ ಭಾರತದ ಪರ ಟಿ20 ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಕಲೆಹಾಕಿದ 4ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.




