IPL 2026: ಕೆಕೆಆರ್ ತಂಡಕ್ಕೆ ಕನ್ನಡಿಗ ಕೆಎಲ್ ರಾಹುಲ್?

Updated on: Oct 15, 2025 | 10:00 PM

KL Rahul IPL transfer: ಭಾರತ ಟಿ20 ತಂಡದಿಂದ ಹೊರಬಿದ್ದಿದ್ದರೂ ಕೆಎಲ್ ರಾಹುಲ್‌ಗೆ ಐಪಿಎಲ್‌ನಲ್ಲಿ ಭಾರಿ ಬೇಡಿಕೆಯಿದೆ. ಮುಂಬರುವ ಐಪಿಎಲ್​ಗೆ ಶಾರುಖ್ ಖಾನ್ ಒಡೆತನದ ಕೆಕೆಆರ್ ರಾಹುಲ್​ರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿದೆ. ಅವರಿಗೆ ನಾಯಕತ್ವ, ಆರಂಭಿಕ ಮತ್ತು ವಿಕೆಟ್‌ಕೀಪಿಂಗ್ ಜವಾಬ್ದಾರಿ ನೀಡಲು ಕೆಕೆಆರ್ ಉತ್ಸುಕವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್‌ನಿಂದ ರಾಹುಲ್ ಹೊರಬಿದ್ದರೆ, ಸಂಜು ಸ್ಯಾಮ್ಸನ್ ಡೆಲ್ಲಿ ಸೇರುವ ಸಾಧ್ಯತೆ ಇದೆ.

1 / 6
ಕನ್ನಡಿಗ ಕೆಎಲ್ ರಾಹುಲ್​ ಭಾರತ ಟಿ20 ತಂಡದಿಂದ ಹೊರಬಿದ್ದಿರಬಹುದು. ಆದರೆ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​ನಲ್ಲಿ ಮಾತ್ರ ಅವರಿಗೆ ಸಾಕಷ್ಟು ಬೇಡಿಕೆ ಇದೆ. ಆರಂಭಿಕ ಬ್ಯಾಟ್ಸ್‌ಮನ್ ಆಗಿ, ವಿಕೆಟ್ ಕೀಪರ್ ಆಗಿ ಹಾಗೂ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅನುಭವವಿರುವ ರಾಹುಲ್​ಗಾಗಿ ಮುಂಬರುವ ಐಪಿಎಲ್​ಗೂ ಮುನ್ನ ಸಾಕಷ್ಟು ಫ್ರಾಂಚೈಸಿಗಳು ಬಲೆ ಬೀಸಿವೆ ಎಂಬ ಸುದ್ದಿ ಹರಿದಾಡಲಾರಂಭಿಸುತ್ತಿದೆ.

ಕನ್ನಡಿಗ ಕೆಎಲ್ ರಾಹುಲ್​ ಭಾರತ ಟಿ20 ತಂಡದಿಂದ ಹೊರಬಿದ್ದಿರಬಹುದು. ಆದರೆ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​ನಲ್ಲಿ ಮಾತ್ರ ಅವರಿಗೆ ಸಾಕಷ್ಟು ಬೇಡಿಕೆ ಇದೆ. ಆರಂಭಿಕ ಬ್ಯಾಟ್ಸ್‌ಮನ್ ಆಗಿ, ವಿಕೆಟ್ ಕೀಪರ್ ಆಗಿ ಹಾಗೂ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅನುಭವವಿರುವ ರಾಹುಲ್​ಗಾಗಿ ಮುಂಬರುವ ಐಪಿಎಲ್​ಗೂ ಮುನ್ನ ಸಾಕಷ್ಟು ಫ್ರಾಂಚೈಸಿಗಳು ಬಲೆ ಬೀಸಿವೆ ಎಂಬ ಸುದ್ದಿ ಹರಿದಾಡಲಾರಂಭಿಸುತ್ತಿದೆ.

2 / 6

ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ರಾಹುಲ್ ಬಗ್ಗೆ ಇದೀಗ ಮಹತ್ವದ ಸುದ್ದಿಯೊಂದು ಹೊರಹೊಮ್ಮಿದ್ದು, ಕಳೆದ ಆವೃತ್ತಿಯಲ್ಲಷ್ಟೇ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದ ಅವರನ್ನು ಶಾರುಖ್ ಖಾನ್ ಒಡೆತನದ ಕೊಲ್ಕತ್ತಾ ನೈಟ್ ರೈಡರ್ಸ್​ ಫ್ರಾಂಚೈಸಿ ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ವರದಿಗಳು ಕೇಳಿಬರುತ್ತಿವೆ.

3 / 6

ವರದಿಗಳ ಪ್ರಕಾರ ಕೆಎಲ್ ರಾಹುಲ್ ಜೊತೆಗೆ ಈಗಾಗಲೇ ಕೆಕೆಆರ್ ಫ್ರಾಂಚೈಸಿ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ. ಆ ಪ್ರಕಾರ ರಾಹುಲ್​ರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಮಾತ್ರವಲ್ಲದೆ ಅವರಿಗೆ ತಂಡದ ನಾಯಕತ್ವ, ಆರಂಭಿಕನ ಜವಾಬ್ದಾರಿ ಮತ್ತು ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸಲು ಕೆಕೆಆರ್ ಉತ್ಸುಕವಾಗಿದೆ ಎಂದು ಹೇಳಲಾಗುತ್ತಿದೆ.

4 / 6

ವಾಸ್ತವವಾಗಿ ಶ್ರೇಯಸ್ ಅಯ್ಯರ್ ನಿರ್ಗಮನದ ನಂತರ, ಕೆಕೆಆರ್ ಅಜಿಂಕ್ಯ ರಹಾನೆ ಅವರನ್ನು ನಾಯಕನನ್ನಾಗಿ ನೇಮಿಸಿತು. ಆದರೆ ಅವರ ನಾಯಕತ್ವದಲ್ಲಿ ಕೆಕೆಆರ್ ಪ್ರದರ್ಶನ ತೀರ ಕಳಪೆಯಾಗಿತ್ತು. ತಂಡಕ್ಕೆ ಪ್ಲೇಆಫ್ ತಲುಪಲು ಸಾಧ್ಯವಾಗಲಿಲ್ಲ. ಈಗ, ಮುಂದಿನ ಸೀಸನ್​ನಲ್ಲಿ ರಹಾನೆ ಅವರ ನಾಯಕತ್ವ ಮುಂದುವರಿಯುವುದು ಅಸಂಭವವಾಗಿದೆ. ಹೀಗಾಗಿ ಅವರ ಬದಲಿಯಾಗಿ ರಾಹುಲ್​ರನ್ನು ನೋಡಲಾಗುತ್ತಿದೆ.

5 / 6

ಕೆಎಲ್ ರಾಹುಲ್ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದಾರೆ. ಕಳೆದ ವರ್ಷ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 14 ಕೋಟಿಗೆ ಖರೀದಿಸಿತ್ತು. ಕಳೆದ ಸೀಸನ್​ನಲ್ಲಿ ರಾಹುಲ್ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿದಂತೆ ಸುಮಾರು 54 ಸರಾಸರಿಯಲ್ಲಿ 539 ರನ್ ಗಳಿಸಿದ್ದರು.

6 / 6

ಕೆಎಲ್ ರಾಹುಲ್ ದೆಹಲಿ ತಂಡವನ್ನು ತೊರೆಯುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ, ರಾಜಸ್ಥಾನ ರಾಯಲ್ಸ್​ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಬಹುದು ಎಂಬ ವರದಿಗಳಿವೆ. ಇದು ನಿಜವಾದರೆ, ರಾಹುಲ್​ರನ್ನು ಕೆಕೆಆರ್​ಗೆ ಬಿಟ್ಟುಕೊಟ್ಟು, ಸಂಜುರನ್ನು ಡೆಲ್ಲಿ ತಂಡದ ನಾಯಕನನ್ನಾಗಿ ನೇಮಿಸುವ ಸಾಧ್ಯತೆಗಳಿವೆ.

Loading...
Unable to load recommendations.
Follow Us