IPL 2025: ಗೆಲುವಿನ ಸಂಭ್ರಮದಲ್ಲಿರುವ ಡೆಲ್ಲಿ ತಂಡಕ್ಕೆ ಮತ್ತೊಂದು ಸಿಹಿ ಸುದ್ದಿ

|

Updated on: Mar 26, 2025 | 8:43 PM

KL Rahul Returns to Delhi Capitals: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೆಎಲ್ ರಾಹುಲ್ ಅವರ ಮರಳುವಿಕೆ ಸಂತಸದ ಸುದ್ದಿಯಾಗಿದೆ. ಅವರು ಭಾನುವಾರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ. ರಾಹುಲ್ ಅವರ ಆಗಮನದಿಂದ ಡೆಲ್ಲಿ ತಂಡದ ಆಡುವ ಹನ್ನೊಂದರಲ್ಲಿ ಬದಲಾವಣೆಗಳಾಗುವ ಸಾಧ್ಯತೆಯಿದೆ. ಸಮೀರ್ ರಿಜ್ವಿ ಅಥವಾ ಅಭಿಷೇಕ್ ಪೊರೆಲ್ ಅವರು ತಂಡದಿಂದ ಹೊರಗುಳಿಯಬೇಕಾಗಬಹುದು.

1 / 5
ಆಡಿದ ಮೊದಲ ಪಂದ್ಯದಲ್ಲೇ ಬಲಿಷ್ಠ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಮಣಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸದ್ಯ ಗೆಲುವಿನ ಅಲೆಯಲ್ಲಿ ತೇಲುತ್ತಿದೆ. ಈ ನಡುವೆ ತಂಡಕ್ಕೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದ್ದು, ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಭಾನುವಾರ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಆಡಲಿದ್ದಾರೆ.

2 / 5
ಕನ್ನಡಿಗ ಕೆಎಲ್ ರಾಹುಲ್ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ವಾಸ್ತವವಾಗಿ ಅವರ ಪತ್ನಿ ಅತಿಯಾ ಶೆಟ್ಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೀಗಾಗಿ ರಾಹುಲ್ ಆ ಸಮಯದಲ್ಲಿ ಮಡದಿಯೊಂದಿಗಿರುವ ಸಲುವಾಗಿ ತಂಡವನ್ನು ತೊರೆದು ಮನೆಗೆ ವಾಪಸ್ಸಾಗಿದ್ದರು. ಇಷ್ಟು ದಿನ ಮಡದಿ ಹಾಗೂ ಮಗಳೊಂದಿಗೆ ಕಾಲ ಕಳೆದಿರುವ ರಾಹುಲ್ ಇಷ್ಟರಲ್ಲೇ ತಂಡ ಕೂಡಿಕೊಳ್ಳಲಿದ್ದಾರೆ.

3 / 5
ಸದ್ಯದ ಮಾಹಿತಿ ಪ್ರಕಾರ ರಾಹುಲ್, ಭಾನುವಾರ ನಡೆಯಲಿರುವ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆಡುವುದು ಖಚಿತವಾಗಿದೆ. ಇದರರ್ಥ ರಾಹುಲ್ ಆಡುತ್ತಿದ್ದಾರೆ ಎಂದರೆ ತಂಡದ ಇನ್ನೊಬ್ಬ ಆಟಗಾರನಿಗೆ ಆಡುವ ಹನ್ನೊಂದರ ಬಳಗದಿಂದ ಹೊರಗುಳಿಯಬೇಕಾಗುತ್ತದೆ. ಹಾಗಿದ್ದರೆ ಆ ಆಟಗಾರ ಯಾರಾಗಬಹುದು?

4 / 5
ಕೆಎಲ್ ರಾಹುಲ್ ತಂಡಕ್ಕೆ ಸೇರ್ಪಡೆಗೊಂಡಿರುವುದರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡುವ ಹನ್ನೊಂದರ ಬಳಗದಲ್ಲಿ ಒಬ್ಬ ಬ್ಯಾಟ್ಸ್‌ಮನ್‌ ಹೊರಗುಳಿಯುವುದು ಖಚಿತ. ಕಳೆದ ಪಂದ್ಯದಲ್ಲಿ 4 ನೇ ಸ್ಥಾನದಲ್ಲಿ ಆಡಿದ್ದ ಸಮೀರ್ ರಿಜ್ವಿ ಬದಲಿಗೆ ರಾಹುಲ್ 4 ನೇ ಸ್ಥಾನದಲ್ಲಿ ಆಡಬಹುದು ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡಿದರೆ, ಅಭಿಷೇಕ್ ಪೊರೆಲ್ ಅವರನ್ನು ಸಹ ತಂಡದಿಂದ ಕೈಬಿಡಬಹುದು.

5 / 5
ಐಪಿಎಲ್​ನಲ್ಲಿ ರಾಹುಲ್ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಈ ಬಲಗೈ ಬ್ಯಾಟ್ಸ್‌ಮನ್ 123 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 45 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 4683 ರನ್ ಗಳಿಸಿದ್ದಾರೆ. ಇದರಲ್ಲಿ 37 ಅರ್ಧಶತಕಗಳು ಮತ್ತು 4 ಶತಕಗಳು ಸೇರಿವೆ. ಕಳೆದ ಋತುವಿನವರೆಗೆ ಕೆಎಲ್ ರಾಹುಲ್ ಲಕ್ನೋ ಸೂಪರ್‌ಜೈಂಟ್ಸ್ ತಂಡದ ನಾಯಕರಾಗಿದ್ದರು ಆದರೆ ಈ ಬಾರಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 14 ಕೋಟಿ ರೂ.ಗಳಿಗೆ ಖರೀದಿಸಿದೆ.