IND vs BAN, ICC World Cup: ಶತಕಕ್ಕೂ ಮುನ್ನ ಕೊಹ್ಲಿ-ರಾಹುಲ್ ನಡುವೆ ಏನು ಮಾತುಕತೆ ಆಯಿತು?: ರಿವೀಲ್ ಆಗಿದೆ ನೋಡಿ

KL Rahul Talking about Virat Kohli Century: ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ ಶತಕ ತಲುಪಲು ಸುಲಭವಾದ ಸಿಂಗಲ್ಸ್‌ ಕೂಡ ಕೈಬಿಟ್ಟರು. ಈ ಸಂದರ್ಭ ಕೊಹ್ಲಿ ವಿರುದ್ಧ, ಈತ ಶತಕಕ್ಕಾಗಿ ಆಡುತ್ತಿದ್ದಾನೆ, ತನ್ನ ವೈಯಕ್ತಿಕ ದಾಖಲೆ ಮಾಡುತ್ತಿದ್ದಾರೆ ಎಂಬ ಮಾತುಗಳು ಬಂದವು. ಇದೀಗ ಈ ಎಲ್ಲ ಟೀಕೆಗಳಿಗೆ ಕೆಎಲ್ ರಾಹುಲ್ ಸ್ಪಷ್ಟನೆ ನೀಡಿದ್ದಾರೆ.

Vinay Bhat
|

Updated on: Oct 20, 2023 | 9:47 AM

ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಗುರುವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲ್ಲುವ ಜೊತೆಗೆ ವಿರಾಟ್ ಕೊಹ್ಲಿ ತಮ್ಮ 48 ನೇ ಏಕದಿನ ಶತಕವನ್ನು ದಾಖಲಿಸಿದರು. ಮನಮೋಹಕ ಬ್ಯಾಟಿಂಗ್ ನಡೆಸಿದ ಕೊಹ್ಲಿ 6 ಫೋರ್, 4 ಸಿಕ್ಸರ್​ನೊಂದಿಗೆ 97 ಎಸೆತಗಳಲ್ಲಿ ಅಜೇಯ 103 ರನ್ ಚ್ಚಚಿದರು.

1 / 7
ಈ ಪಂದ್ಯದಲ್ಲಿ ಭಾರತವು ಕೇವಲ 41.3 ಓವರ್‌ಗಳಲ್ಲಿ 261 ಸಿಡಿಸಿ ಗೆಲುವು ಕಂಡಿತು. ಬಾಂಗ್ಲಾದೇಶ ಅವರ 50 ಓವರ್‌ಗಳಲ್ಲಿ 256 ರನ್ ಕಲೆಹಾಕಿತ್ತು. ಕ್ರೀಸ್‌ನಲ್ಲಿ ಕೊಹ್ಲಿಗೆ ಉತ್ತಮ ಬೆಂಬಲ ನೀಡಿದ ಕೆಎಲ್ ರಾಹುಲ್ ಅವರು ಅಜೇಯ 34 ರನ್ ಗಳಿಸಿ ತಮ್ಮ ಇನ್ನಿಂಗ್ಸ್ ಅನ್ನು ಅಂತ್ಯಗೊಳಿಸಿದರು.

2 / 7
ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ತಮ್ಮ ಶತಕವನ್ನು ಗಳಿಸಲು ನಾನಾ ಕಸರತ್ತು ನಡೆಸಿದರು. 100 ರನ್​ಗಳತ್ತ ಸಮೀಪಿಸುತ್ತಿದ್ದಂತೆ ಕೊಹ್ಲಿ ಬ್ಯಾಟಿಂಗ್ ಶೈಲಿಯಲ್ಲಿ ಕೆಲವು ಬದಲಾವಣೆ ಕಂಡುಬಂದವು. ಭಾರತ ಗೆಲ್ಲಲು 19 ರನ್​ಗಳ ಅಗತ್ಯವಿದ್ದರೆ ಅತ್ತ ಕೊಹ್ಲಿಯ ಶತಕ ತಲುಪಲು ಅಷ್ಟೇ ರನ್ ಬೇಕಾಗಿತ್ತು.

3 / 7
ವಿರಾಟ್ ಶತಕ ತಲುಪಲು ಬೌಂಡರಿಗಳನ್ನು ಸಿಡಿಸಲು ನಿರ್ಧರಿಸಿದರು. ಸ್ಟ್ರೈಕ್ ಉಳಿಸಿಕೊಳ್ಳಲು ಸುಲಭವಾದ ಸಿಂಗಲ್ಸ್‌ ಕೂಡ ಕೈಬಿಟ್ಟರು. ಈ ಸಂದರ್ಭ ಕೊಹ್ಲಿ ವಿರುದ್ಧ ಕೆಲ ಮಾತುಗಳು ಕೇಳಿಬಂದವು. ಈತ ಶತಕಕ್ಕಾಗಿ ಆಡುತ್ತಿದ್ದಾನೆ, ತನ್ನ ವೈಯಕ್ತಿಕ ದಾಖಲೆ ಮಾಡುತ್ತಿದ್ದಾರೆ ಎಂಬ ಮಾತುಗಳು ಬಂದವು. ಇದೀಗ ಈ ಎಲ್ಲ ಟೀಕೆಗಳಿಗೆ ಕೆಎಲ್ ರಾಹುಲ್ ಸ್ಪಷ್ಟನೆ ನೀಡಿದ್ದಾರೆ.

4 / 7
ಗೆಲುವಿನ ನಂತರ, ಕೊಹ್ಲಿ ಶತಕದ ಸಮೀಪದಲ್ಲಿರುವಾಗ ನಾವು ಏನು ಮಾತನಾಡಿಕೊಂಡೆವು ಎಂಬುದನ್ನು ಕೆಎಲ್ ರಾಹುಲ್ ಬಿಚ್ಚಿಟ್ಟಿದ್ದಾರೆ. ಕೊಹ್ಲಿ ಶತಕ ಗಳಿಸುವ ಯೋಜನೆ ಹೊಂದಿರಲಿಲ್ಲ. ಮಹತ್ವದ ವಿಶ್ವಕಪ್ ಪಂದ್ಯದಲ್ಲಿ ನಾನು ವೈಯಕ್ತಿಕ ಮೈಲಿಗಲ್ಲನ್ನು ನೋಡುವುದು ಸರಿ ಕಾಣುವುದಿಲ್ಲ ಎಂದು ಹೇಳಿದ್ದರಂತೆ.

5 / 7
"ವಿರಾಟ್ ಗೊಂದಲಕ್ಕೊಳಗಾಗಿದ್ದರು, ಇದು ವಿಶ್ವಕಪ್ ಪಂದ್ಯವಾಗಿದೆ, ದೊಡ್ಡ ವೇದಿಕೆ. ಇಲ್ಲಿ ನನ್ನ ವೈಯಕ್ತಿಕ ಮೈಲಿಗಲ್ಲು ಪಡೆಯುವುದು ಸರಿ ಅಲ್ಲ. ಸಿಂಗಲ್ ತೆಗೆಯುವುದನ್ನು ನಿಲ್ಲಿಸುವ ಎಂದು ಕೊಹ್ಲಿ ಹೇಳಿದರು. ಆದರೆ ನಾನು ಹೇಳಿದೆ, ನಾವಿನ್ನು ಗೆದ್ದಿಲ್ಲ, ಇನ್ನೂ ಸಾಕಷ್ಟು ಓವರ್ ಬಾಕಿಯಿದೆ, ಸುಲಭವಾಗಿ ಗೆಲ್ಲುತ್ತೇವೆ, ನೀವು ಶತಕಕ್ಕೆ ಪ್ರಯತ್ನಿಸಿ ಎಂದು ನಾನು ಹೇಳಿದೆ,'' ಎಂಬುದು ರಾಹುಲ್ ಮಾತು.

6 / 7
ವಿರಾಟ್ ಕೊಹ್ಲಿ ಇದೀಗ 48 ಏಕದಿನ ಶತಕ ಪೂರೈಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ವಿಶ್ವ ದಾಖಲೆಯನ್ನು ಸರಿಗಟ್ಟಲು ಕೊಹ್ಲಿಗೆ ಈಗ ಕೇವಲ ಒಂದು ಶತಕ ಬಾಕಿಯಿದೆಯಷ್ಟೆ. ಎಲ್ಲಾ ಸ್ವರೂಪಗಳಲ್ಲಿ, ಇದು ಕೊಹ್ಲಿಯ 78 ನೇ ಅಂತರರಾಷ್ಟ್ರೀಯ ಶತಕವಾಗಿದೆ. 2011 ರಿಂದ ವಿಶ್ವಕಪ್‌ಗಳಲ್ಲಿ ಅವರ ಮೂರನೇ ಶತಕವಾಗಿದೆ.

7 / 7
Follow us