‘ಹ್ಯಾಪಿ ಬರ್ತ್​ ಡೇ ಮೈ ಜೋಕರ್’; ಪ್ರೇಯಸಿ ಅಥಿಯಾಗೆ ವಿಶೇಷವಾಗಿ ಶುಭಕೋರಿದ ರಾಹುಲ್

Edited By:

Updated on: Nov 05, 2022 | 6:30 PM

KL Rahul-Athiya Shetty: ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಮುಂದಿನ ವರ್ಷ ರಾಹುಲ್-ಅಥಿಯಾ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ ಎಂಬುದು ಸುದ್ದಿ.

1 / 5
ಲೋಕೇಶ್ ರಾಹುಲ್​ಗೆ ಇಂದು ಡಬಲ್ ಖುಷಿ. ಒಂದು ಆತ್ಮೀಯ ಗೆಳೆಯ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ 34 ನೇ ಹುಟ್ಟುಹಬ್ಬವಾದರೆ, ಇನ್ನೊಂದು ತನ್ನ ಪ್ರೇಯಸಿ ಅಥಿಯಾ ಶೆಟ್ಟಿಗೂ ಇಂದು ಜನ್ಮ ದಿನ. ಹಾಗಾಗಿ ನವೆಂಬರ್ 5 ರಾಹುಲ್​ಗೆ ಬಹಳ ವಿಶೇಷವಾದ ದಿನ.

ಲೋಕೇಶ್ ರಾಹುಲ್​ಗೆ ಇಂದು ಡಬಲ್ ಖುಷಿ. ಒಂದು ಆತ್ಮೀಯ ಗೆಳೆಯ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ 34 ನೇ ಹುಟ್ಟುಹಬ್ಬವಾದರೆ, ಇನ್ನೊಂದು ತನ್ನ ಪ್ರೇಯಸಿ ಅಥಿಯಾ ಶೆಟ್ಟಿಗೂ ಇಂದು ಜನ್ಮ ದಿನ. ಹಾಗಾಗಿ ನವೆಂಬರ್ 5 ರಾಹುಲ್​ಗೆ ಬಹಳ ವಿಶೇಷವಾದ ದಿನ.

2 / 5

ಹಲವು ದಿನಗಳಿಂದ ಈ ಜೋಡಿ ಪ್ರೀತಿಯಲ್ಲಿದ್ದಾರೆ ಎಂಬುದು ಹಳೆಯ ವಿಚಾರವಾಗಿದ್ದು, ಈ ಇಬ್ಬರ ನಡುವಿನ ಪ್ರೇಮಪುರಾಣ ಮದುವೆವರೆಗೂ ಬಂದಿದೆ ಎಂಬುದು ಸಮಾಚಾರ. ಸದ್ಯ ಟಿ20 ವಿಶ್ವಕಪ್ ಆಡುತ್ತಿರುವ ರಾಹುಲ್, ಇಬ್ಬರೂ ಒಟ್ಟಿಗಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಪ್ರೇಯಸಿ ಅಥಿಯಾ ಶೆಟ್ಟಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

3 / 5

ಇಬ್ಬರು ಜೊತೆಗಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಾಹುಲ್ ಹ್ಯಾಪಿ ಬರ್ತ್ ಡೇ ಮೈ ಲವ್, ನೀನು ಎಲ್ಲವನ್ನೂ ಉತ್ತಮಗೊಳಿಸಿದ್ದೀಯ ಎಂದು ಬರೆದುಕೊಂಡಿದ್ದಾರೆ. ಅದರಲ್ಲೂ ಶುಭಾಶಯ ತಿಳಿಸಿದ ಬಳಿಕ ಜೋಕರ್ ಎಮೋಜಿ ಬಳಸಿರುವುದು ಇಲ್ಲಿ ವಿಶೇಷ.

4 / 5

ಈಗ ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಮುಂದಿನ ವರ್ಷ ರಾಹುಲ್-ಅಥಿಯಾ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ ಎಂಬುದು ಸುದ್ದಿ.

5 / 5

ಈಗ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ರಾಹುಲ್ ಅವರ ಈವರೆಗಿನ ಪ್ರದರ್ಶನದ ವಿಚಾರಕ್ಕೆ ಬಂದರೆ. ಮೊದಲ ಮೂರು ಪಂದ್ಯಗಳಲ್ಲಿ ರಾಹುಲ್ ಬ್ಯಾಟ್ ಸೈಲೆಂಟ್ ಆಗಿತ್ತು. ಆದರೆ ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅರ್ಧಶತಕ ಶತಕ ಬಾರಿಸಿ ಮತ್ತೆ ಫಾರ್ಮ್​ಗೆ ಮರಳಿದ ಸಿಗ್ನಲ್ ನೀಡಿದ್ದಾರೆ.

Published On - 6:30 pm, Sat, 5 November 22

Loading...
Unable to load recommendations.
Follow Us