ಇಂಜುರಿಯಿಂದಾಗಿ ಐಪಿಎಲ್ ತೊರೆದಿದ್ದ ರಾಹುಲ್, ಬಳಿಕ ಲಂಡನ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಿಂದಲೂ ಹೊರಬಿದ್ದಿದ್ದರು. ಹೀಗಾಗಿ ರಾಹುಲ್ ಬದಲಿಯಾಗಿ ಮತ್ತೊಬ್ಬ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಟೀಂ ಇಂಡಿಯಾವನ್ನು ಸೇರಿಕೊಂಡಿದ್ದರು. ಆದರೆ ಕಿಶನ್ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗಲಿಲ್ಲ. ವಿಕೆಟ್ ಕೀಪರ್ ಆಗಿ ಕೆಎಸ್ ಭರತ್ ತಂಡದಲ್ಲಿ ಆಡಿದರಾದರೂ, ಯಾವುದೇ ಪರಿಣಾಮಕಾರಿ ಆಟ ತೋರಲಿಲ್ಲ.