U19 World Cup 2024: ಬರೋಬ್ಬರಿ 18 ವಿಕೆಟ್ಗಳು: ಟೀಮ್ ಇಂಡಿಯಾದ ಚಿಂತೆ ಹೆಚ್ಚಿಸಿದ ಕ್ವೆನಾ
Kwena Maphaka: ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ಕಿರಿಯರ ವಿಶ್ವಕಪ್ನಲ್ಲಿ ಎಡಗೈ ವೇಗಿ ಕ್ವೆನಾ ಮಫಕಾ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ ಕಣಕ್ಕಿಳಿಯುತ್ತಿರುವ ಕ್ವೆನಾ ಈಗಾಗಲೇ 18 ವಿಕೆಟ್ ಪಡೆದು ಮಿಂಚಿದ್ದಾರೆ. ಅಲ್ಲದೆ ಸೆಮಿಫೈನಲ್ನಲ್ಲೂ ಸೌತ್ ಆಫ್ರಿಕಾ ತಂಡಕ್ಕೆ ಜಯ ತಂದುಕೊಡುವ ವಿಶ್ವಾಸದಲ್ಲಿದ್ದಾರೆ.
Updated on: Feb 03, 2024 | 9:30 AM

ಪ್ರಸ್ತುತ ನಡೆಯುತ್ತಿರುವ ಅಂಡರ್-19 ವಿಶ್ವಕಪ್ನಲ್ಲಿ ಮಾರಕ ಬೌಲಿಂಗ್ ಸಂಘಟಿಸುವ ಮೂಲಕ ಸೌತ್ ಆಫ್ರಿಕಾ ತಂಡದ ಯುವ ವೇಗಿ ಕ್ವೆನಾ ಮಫಕಾ (Kwena Maphaka) ಹೊಸ ಸಂಚಲನ ಸೃಷ್ಟಿಸಿದ್ದಾರೆ. ಮಾರಕ ಬೌನ್ಸರ್ ಹಾಗೂ ಯಾರ್ಕರ್ ಎಸೆತಗಳನ್ನೇ ಅಸ್ತ್ರವಾಗಿಸಿಕೊಂಡಿರುವ ಎಡಗೈ ವೇಗಿ ಕ್ವೆನಾ ಈಗಾಗಲೇ 3 ಬಾರಿ 5 ವಿಕೆಟ್ಗಳನ್ನು ಕಬಳಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 38 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದ ಕ್ವೆನಾ ಮಫಕಾ, ಝಿಂಬಾಬ್ವೆ ವಿರುದ್ಧದ ಮ್ಯಾಚ್ನಲ್ಲಿ 34 ರನ್ಗಳಿಗೆ 5 ವಿಕೆಟ್ ಎಗರಿಸಿದ್ದರು. ಇನ್ನು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 21 ರನ್ ನೀಡಿ 6 ವಿಕೆಟ್ ಕಬಳಿಸಿದ್ದಾರೆ.

ಹೀಗೆ ಮೂರು ಬಾರಿ ಐದು ವಿಕೆಟ್ ಕಬಳಿಸುವುದರೊಂದಿಗೆ 5 ಪಂದ್ಯಗಳಿಂದ ಕ್ವೆನಾ ಮಫಕಾ ಒಟ್ಟು 18 ವಿಕೆಟ್ಗಳನ್ನು ಪಡೆದಿದ್ದಾರೆ. ಅಲ್ಲದೆ ಈ ಅದ್ಭುತ ಬೌಲಿಂಗ್ ಪ್ರದರ್ಶನದ ಫಲವಾಗಿ ಇದೀಗ ಸೌತ್ ಆಫ್ರಿಕಾ ತಂಡವು ಅಂಡರ್-19 ವಿಶ್ವಕಪ್ನ ಸೆಮಿಫೈನಲ್ಗೇರಿದೆ.

ವಿಶೇಷ ಎಂದರೆ ಸೆಮಿಫೈನಲ್ನಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗುವ ಸಾಧ್ಯತೆಯಿದೆ. ಅದರಂತೆ ಈಗಾಗಲೇ ಎಡಗೈ ಯಾರ್ಕರ್ ಮೂಲಕ ಸಂಚಲನ ಸೃಷ್ಟಿಸಿರುವ ಕ್ವೆನಾ ಮಫಕಾ ರನ್ನು ಎದುರಿಸುವುದೇ ಟೀಮ್ ಇಂಡಿಯಾ ಪಾಲಿಗೆ ಹೊಸ ದೊಡ್ಡ ಸಾವಾಲಾಗಬಹುದು.

ಇದಾಗ್ಯೂ ಪ್ರಸ್ತುತ ಅಂಡರ್-19 ವಿಶ್ವಕಪ್ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ಆಟಗಾರ ಮುಶೀರ್ ಖಾನ್ ಅಗ್ರಸ್ಥಾನದಲ್ಲಿದ್ದಾರೆ. ಅತ್ತ ವಿಕೆಟ್ ಕಬಳಿಕೆಯಲ್ಲಿ ಕ್ವೆನಾ ಮಫಕಾ ಮೊದಲ ಸ್ಥಾನದಲ್ಲಿದ್ದಾರೆ. ಹೀಗಾಗಿ ಸೆಮಿಫೈನಲ್ನಲ್ಲಿ ಉಭಯ ತಂಡಗಳು ಮುಖಾಮುಖಿಯಾದರೆ ರಣರೋಚಕ ಪೈಪೋಟಿಯನ್ನಂತು ನಿರೀಕ್ಷಿಸಬಹುದು.
