Legends League Cricket 2023: ಲೆಜೆಂಡ್ಸ್​ ಲೀಗ್ ತಂಡಗಳಿಗೆ ನಾಯಕರುಗಳ ಆಯ್ಕೆ

| Updated By: ಝಾಹಿರ್ ಯೂಸುಫ್

Updated on: Mar 02, 2023 | 4:54 PM

Legends League Cricket 2023: ಮೂರು ತಂಡಗಳಲ್ಲಿ ಸ್ಟಾರ್ ಆಟಗಾರರಾಗಿ ಇರ್ಫಾನ್ ಪಠಾಣ್, ಶ್ರೀಶಾಂತ್, ರಾಬಿನ್ ಉತ್ತಪ್ಪ, ಆರೋನ್ ಫಿಂಚ್, ಶಾಹಿದ್ ಅಫ್ರಿದಿ, ಮೊಹಮ್ಮದ್ ಹಫೀಜ್, ತಿಲಕರತ್ನೆ ದಿಲ್ಶನ್, ಕ್ರಿಸ್ ಗೇಲ್ ಮತ್ತು ಬ್ರೆಟ್ ಲೀ ಕಾಣಿಸಿಕೊಳ್ಳಲಿದ್ದಾರೆ.

1 / 6
ಲೆಜೆಂಡ್ಸ್ ಲೀಗ್ ಕ್ರಿಕೆಟ್​ ಟೂರ್ನಿಯು ಮಾರ್ಚ್ 10 ರಿಂದ ಶುರುವಾಗಲಿದೆ. ಮಾಜಿ ಆಟಗಾರರ ಈ ಟೂರ್ನಿಯಲ್ಲಿ ಮೂರು ತಂಡಗಳು ಭಾಗವಹಿಸಲಿದ್ದು, ಅದರಂತೆ ಏಷ್ಯಾ ಲಯನ್ಸ್, ವರ್ಲ್ಡ್ ಜೈಂಟ್ಸ್ ಮತ್ತು ಇಂಡಿಯಾ ಮಹಾರಾಜಸ್ ತಂಡಗಳು ಕಣಕ್ಕಿಳಿಯಲಿದೆ. ಇದೀಗ ಈ ಮೂರು ತಂಡಗಳ ನಾಯಕರುಗಳನ್ನು ಘೋಷಿಸಲಾಗಿದೆ.

2 / 6
ಇಂಡಿಯಾ ಮಹಾರಾಜಸ್ ತಂಡವನ್ನು ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಮುನ್ನಡೆಸಲಿದ್ದಾರೆ. ಸದ್ಯ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿರುವ ಗಂಭೀರ್ ಮತ್ತೆ ಟಿ20 ಲೀಗ್​ನಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

3 / 6
ಇನ್ನು ಏಷ್ಯನ್ ಲಯನ್ಸ್ ತಂಡದ ನಾಯಕರಾಗಿ ಪಾಕಿಸ್ತಾನ್ ತಂಡದ ಮಾಜಿ ಕ್ಯಾಪ್ಟನ್ ಶಾಹಿದ್ ಅಫ್ರಿದಿ ಆಯ್ಕೆಯಾಗಿದ್ದಾರೆ. ಅಫ್ರಿದಿ ಜೊತೆ ಈ ತಂಡದಲ್ಲಿ ಮೊಹಮ್ಮದ್ ಹಫೀಜ್, ತಿಲಕರತ್ನೆ ದಿಲ್ಶನ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

4 / 6
ಹಾಗೆಯೇ ವರ್ಲ್ಡ್ ಜೈಂಟ್ಸ್  ತಂಡವನ್ನು ಈ ಬಾರಿ ಮುನ್ನಡೆಸುತ್ತಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆರೋನ್ ಫಿಂಚ್. ಇತ್ತೀಚೆಗಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದ ಫಿಂಚ್ ಇದೀಗ ಲೆಜೆಂಡ್ಸ್ ಲೀಗ್ ಮೂಲಕ ಮತ್ತೆ ಮೈದಾನಕ್ಕಿಳಿಯಲಿದ್ದಾರೆ.

5 / 6
ಲೆಜೆಂಡ್ಸ್ ಲೀಗ್​ ಕ್ರಿಕೆಟ್​ ಟೂರ್ನಿಯು ಮಾರ್ಚ್ 10 ರಿಂದ ಮಾರ್ಚ್ 20 ರವರೆಗೆ ದೋಹಾ, ಕತಾರ್‌ನ ಏಷ್ಯನ್ ಟೌನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಲೀಗ್​ನಲ್ಲಿ ವಿಶ್ವ ಮಾಜಿ ಕ್ರಿಕೆಟಿಗರು ಕಾಣಿಸಿಕೊಳ್ಳುತ್ತಿರುವುದು ವಿಶೇಷ.

6 / 6
ಅದರಂತೆ ಮೂರು ತಂಡಗಳಲ್ಲಿ ಸ್ಟಾರ್ ಆಟಗಾರರಾಗಿ ಇರ್ಫಾನ್ ಪಠಾಣ್, ಶ್ರೀಶಾಂತ್, ರಾಬಿನ್ ಉತ್ತಪ್ಪ, ಆರೋನ್ ಫಿಂಚ್, ಶಾಹಿದ್ ಅಫ್ರಿದಿ, ಮೊಹಮ್ಮದ್ ಹಫೀಜ್, ತಿಲಕರತ್ನೆ ದಿಲ್ಶನ್, ಕ್ರಿಸ್ ಗೇಲ್ ಮತ್ತು ಬ್ರೆಟ್ ಲೀ ಸೇರಿದಂತೆ ಹಲವು ಕ್ರಿಕೆಟಿಗರು ಕಾಣಿಸಿಕೊಳ್ಳಲಿದ್ದಾರೆ.