AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Logan Van Beek: 4,6,4,6,6,4: ಸೂಪರ್ ಓವರ್​ನಲ್ಲಿ ವಿಶ್ವ ದಾಖಲೆ ಬರೆದ ವ್ಯಾನ್ ಬೀಕ್

Logan Van Beek: 31 ರನ್​ಗಳ ಟಾರ್ಗೆಟ್ ಪಡೆದ ವೆಸ್ಟ್ ಇಂಡೀಸ್ ತಂಡವು 5 ಎಸೆತಗಳಲ್ಲಿ 8 ರನ್​ಗಳಿಸಿ 2 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ವಿಶೇಷ ಎಂದರೆ ಈ ಓವರ್​ ಎಸೆದಿರುವುದು ಕೂಡ ವ್ಯಾನ್ ಬೀಕ್.

TV9 Web
| Edited By: |

Updated on: Jun 27, 2023 | 6:09 PM

Share
 ICC World Cup Qualifiers 2023: ಹರಾರೆಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ರಣರೋಚಕ ಪಂದ್ಯದಲ್ಲಿ ಸೂಪರ್ ಗೆಲುವು ದಾಖಲಿಸುವ ಮೂಲಕ ನೆದರ್​ಲ್ಯಾಂಡ್ಸ್ ತಂಡವು ಹೊಸ ಇತಿಹಾಸ ನಿರ್ಮಿಸಿದೆ.

1 / 9
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 374 ರನ್​ ಕಲೆಹಾಕಿತು. ಈ ಬೃಹತ್ ಟಾರ್ಗೆಟ್ ಅನ್ನು ಬೆನ್ನತ್ತಿದ ನೆದರ್​ಲ್ಯಾಂಡ್ಸ್ ತಂಡವು 9 ವಿಕೆಟ್​ ನಷ್ಟಕ್ಕೆ 374 ರನ್​ಗಳಿಸುವ ಮೂಲಕ ಪಂದ್ಯವನ್ನು ಟೈ ಮಾಡಿಕೊಂಡಿತು.

2 / 9
ಉಭಯ ತಂಡಗಳು ಸಮಬಲ ಸಾಧಿಸಿದ್ದರಿಂದ ಪಂದ್ಯವು ಸೂಪರ್ ಓವರ್​ನತ್ತ ಸಾಗಿತು. ಇತ್ತ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಚೆಂಡನ್ನು ಜೇಸನ್ ಹೋಲ್ಡರ್​ ಕೈಗಿತ್ತರು.

3 / 9
ಹೋಲ್ಡರ್ ಅವರ ಮೊದಲ ಎಸೆತದಲ್ಲೇ ಫೋರ್ ಬಾರಿ ಲೋಗನ್ ವ್ಯಾನ್ ಬೀಕ್, 2ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ಇನ್ನು 3ನೇ ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸಿದರು.

4 / 9
4ನೇ ಹಾಗೂ 5ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದರು. ಇನ್ನು ಕೊನೆಯ ಎಸೆತದಲ್ಲಿ ಫೋರ್ ಬಾರಿಸುವ ಮೂಲಕ ಒಂದೇ ಓವರ್​ನಲ್ಲಿ ವ್ಯಾನ್ ಬೀಕ್ ಬರೋಬ್ಬರಿ 30 ರನ್​ ಚಚ್ಚಿದರು.

5 / 9
31 ರನ್​ಗಳ ಟಾರ್ಗೆಟ್ ಪಡೆದ ವೆಸ್ಟ್ ಇಂಡೀಸ್ ತಂಡವು 5 ಎಸೆತಗಳಲ್ಲಿ 8 ರನ್​ಗಳಿಸಿ 2 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ವಿಶೇಷ ಎಂದರೆ ಈ ಓವರ್​ ಎಸೆದಿರುವುದು ಕೂಡ ವ್ಯಾನ್ ಬೀಕ್.

6 / 9
ಅಂದರೆ ವ್ಯಾನ್ ಬೀಕ್ ಸೂಪರ್​ ಓವರ್​ ಬ್ಯಾಟಿಂಗ್​ನಲ್ಲಿ 30 ರನ್​ ಬಾರಿಸಿ, ಬೌಲಿಂಗ್​ನಲ್ಲಿ 2 ವಿಕೆಟ್ ಪಡೆದು ನೆದರ್​ಲ್ಯಾಂಡ್ಸ್​ ತಂಡಕ್ಕೆ ರೋಚಕ ಗೆಲುವು ತಂದು ಕೊಟ್ಟರು.

7 / 9
 ಅಲ್ಲದೆ ಕ್ರಿಕೆಟ್​ ಇತಿಹಾಸದಲ್ಲೇ ಸೂಪರ್ ಓವರ್​ನಲ್ಲಿ ಅತ್ಯಧಿಕ ರನ್​ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಕೂಡ ಲೋಗನ್ ವ್ಯಾನ್ ಬೀಕ್ ನಿರ್ಮಿಸಿದರು.

8 / 9
ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್​ನ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಗೇಲ್ 2008 ರಲ್ಲಿ ಡೇನಿಯಲ್ ವೆಟ್ಟೋರಿ ಎಸೆದ ಸೂಪರ್ ಓವರ್​ನಲ್ಲಿ 25 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

9 / 9