AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 1000 ವಿಕೆಟ್; ಇತಿಹಾಸ ನಿರ್ಮಿಸಿದ ಲಂಕಾ ಸ್ಪಿನ್ನರ್

Malinda Pushpakumara: ಶ್ರೀಲಂಕಾದ ಎಡಗೈ ಸ್ಪಿನ್ನರ್ ಮಲಿಂದಾ ಪುಷ್ಪಕುಮಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1,000 ವಿಕೆಟ್‌ಗಳನ್ನು ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ನಾಲ್ಕನೇ ಶ್ರೀಲಂಕಾದ ಬೌಲರ್ ಇವರು. ಮುತ್ತಯ್ಯ ಮುರಳೀಧರನ್‌ಗಿಂತ ಉತ್ತಮ ಸ್ಟ್ರೈಕ್ ರೇಟ್ ಹೊಂದಿರುವ ಪುಷ್ಪಕುಮಾರ, ತಮ್ಮ ಪ್ರಭಾವಶಾಲಿ ದಾಖಲೆಗಳ ಹೊರತಾಗಿಯೂ ರಾಷ್ಟ್ರೀಯ ತಂಡದಲ್ಲಿ ಕಡಿಮೆ ಅವಕಾಶಗಳನ್ನು ಪಡೆದಿದ್ದಾರೆ. ಅವರ ಬೌಲಿಂಗ್ ಸರಾಸರಿ 20.06 ಗಮನಾರ್ಹವಾಗಿದೆ.

ಪೃಥ್ವಿಶಂಕರ
|

Updated on: Jan 19, 2026 | 3:47 PM

Share
ಶ್ರೀಲಂಕಾದ ದೇಶಿ ಸೂಪರ್​ಸ್ಟಾರ್ ಎಡಗೈ ಸ್ಪಿನ್ನರ್ ಮಲಿಂದಾ ಪುಷ್ಪಕುಮಾರ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿದ್ದಾರೆ. ಈ ಸ್ಪಿನ್ ಮಾಂತ್ರಿಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1,000 ವಿಕೆಟ್‌ಗಳನ್ನು ಪಡೆದ ಅಪರೂಪದ ದಾಖಲೆಯನ್ನು ನಿರ್ಮಿಸಿದ್ದಾರೆ.

1 / 6
ಕೊಲಂಬೊದ ಕೋಲ್ಟ್ಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಮೂರ್ ಸ್ಪೋರ್ಟ್ಸ್ ಕ್ಲಬ್ ವಿರುದ್ಧದ ಪಂದ್ಯದಲ್ಲಿ ಸೋಹನ್ ಡಿ ಲಿವೇರಾ ಮತ್ತು ಪಸಿಂದು ಸೂರ್ಯಬಂದರ ಅವರನ್ನು ಔಟ್ ಮಾಡುವ ಮೂಲಕ ಪುಷ್ಪಕುಮಾರ ಈ ಅದ್ಭುತ ಮೈಲಿಗಲ್ಲು ಸ್ಥಾಪಿಸಿದರು. ಈ ಸಾಧನೆ ಮಾಡಿದ ನಾಲ್ಕನೇ ಶ್ರೀಲಂಕಾದ ಬೌಲರ್ ಎಂಬ ದಾಖಲೆಯನ್ನು ಅವರು ಸೃಷ್ಟಿಸಿದರು.

2 / 6
ಶ್ರೀಲಂಕಾ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1000 ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮುತ್ತಯ್ಯ ಮುರಳೀಧರನ್ (1374 ವಿಕೆಟ್‌ಗಳು), ರಂಗನ ಹೆರಾತ್ (1080 ವಿಕೆಟ್‌ಗಳು) ಮತ್ತು ದಿನುಕಾ ಹೆಟ್ಟಿಯಾರಾಚಿ (1001 ವಿಕೆಟ್‌ಗಳು) ಮಾತ್ರ ಇದ್ದರು. ಆದರೆ ಈಗ ಮಲಿಂದಾ ಪುಷ್ಪಕುಮಾರ ಕೂಡ ಈ ಪಟ್ಟಿಗೆ ಸೇರಿಕೊಂಡಿದ್ದಾರೆ. ಇನ್ನು ಜಾಗತಿಕವಾಗಿ, ಪುಷ್ಪಕುಮಾರ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ 218 ನೇ ಆಟಗಾರ ಎನಿಸಿಕೊಂಡಿದ್ದಾರೆ.

3 / 6
ಆದಾಗ್ಯೂ ಮಲಿಂದಾ ಪುಷ್ಪಕುಮಾರ ಸ್ಟ್ರೈಕ್ ರೇಟ್ ವಿಚಾರದಲ್ಲಿ ಮಾಜಿ ಲೆಜೆಂಡರಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್​ಗಿಂತ ಮುಂದಿದ್ದಾರೆ. ಮುರಳೀಧರನ್ ಪ್ರತಿ 48.7 ಎಸೆತಗಳಿಗೆ ಒಂದು ವಿಕೆಟ್ ಪಡೆದರೆ, ಪುಷ್ಪಕುಮಾರ ಕೇವಲ 38.3 ಎಸೆತಗಳಲ್ಲಿ ವಿಕೆಟ್ ಪಡೆದಿದ್ದಾರೆ. ಅವರ ಬೌಲಿಂಗ್ ಸರಾಸರಿ ಕೂಡ ಕೇವಲ 20.06 ಆಗಿದೆ.

4 / 6
ಮಲಿಂದಾ ಪುಷ್ಪಕುಮಾರ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಒಂದು ಇನ್ನಿಂಗ್ಸ್‌ನಲ್ಲಿ 86 ಬಾರಿ ಐದು ವಿಕೆಟ್‌ಗಳನ್ನು ಮತ್ತು ಒಂದು ಪಂದ್ಯದಲ್ಲಿ 10 ವಿಕೆಟ್‌ಗಳನ್ನು 28 ಬಾರಿ ಪಡೆದಿದ್ದಾರೆ. ಇನ್ನು ಜನವರಿ 2019 ರಲ್ಲಿ ಸ್ಯಾರಸೆನ್ಸ್ ಸ್ಪೋರ್ಟ್ಸ್ ಕ್ಲಬ್ ವಿರುದ್ಧದ ಪಂದ್ಯದಲ್ಲಿ, ಅವರು ಒಂದೇ ಇನ್ನಿಂಗ್ಸ್‌ನಲ್ಲಿ ಒಟ್ಟು 10 ವಿಕೆಟ್‌ಗಳನ್ನು ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದರು.

5 / 6
ಇಷ್ಟೊಂದು ಪ್ರಭಾವಶಾಲಿ ದಾಖಲೆಯ ಹೊರತಾಗಿಯೂ, ಪುಷ್ಪಕುಮಾರ ಅವರಿಗೆ ಶ್ರೀಲಂಕಾ ರಾಷ್ಟ್ರೀಯ ತಂಡದಲ್ಲಿ ಆಡಲು ಕಡಿಮೆ ಅವಕಾಶಗಳು ಸಿಕ್ಕವು. ಪುಷ್ಪಕುಮಾರ ಶ್ರೀಲಂಕಾ ಪರ ಕೇವಲ 4 ಟೆಸ್ಟ್ ಪಂದ್ಯಗಳನ್ನು ಆಡಿದ್ದು 14 ವಿಕೆಟ್‌ಗಳನ್ನು ಪಡೆದಿದ್ದಾರೆ. ಎರಡು ಏಕದಿನ ಪಂದ್ಯಗಳನ್ನು ಆಡಿರುವ ಅವರು ಒಂದು ವಿಕೆಟ್ ಪಡೆದಿದ್ದಾರೆ.

6 / 6