120 ವರ್ಷಗಳ ಬಳಿಕ ಟೆಸ್ಟ್​ನಲ್ಲಿ ಮಿಂಚಿನ ದಾಳಿ

South Africa vs Sri Lanka: ಡರ್ಬನ್​ನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್​​ನಲ್ಲಿ 191 ರನ್ ಕಲೆಹಾಕಿದ್ದ ಸೌತ್ ಆಫ್ರಿಕಾ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 366 ರನ್ ಬಾರಿಸಿ ಡಿಕ್ಲೇರ್ ಘೋಷಿಸಿದೆ. ಅತ್ತ ಮೊದಲ ಇನಿಂಗ್ಸ್​ನಲ್ಲಿ 42 ರನ್​​ಗಳಿಗೆ ಆಲೌಟ್ ಆಗಿದ್ದ ಶ್ರೀಲಂಕಾ ತಂಡವು ಈ ಪಂದ್ಯದಲ್ಲಿ ಗೆಲ್ಲಲು ದ್ವಿತೀಯ ಇನಿಂಗ್ಸ್​​ನಲ್ಲಿ 516 ರನ್ ಕಲೆಹಾಕಬೇಕು.

ಝಾಹಿರ್ ಯೂಸುಫ್
|

Updated on: Nov 30, 2024 | 8:19 AM

ಬರೋಬ್ಬರಿ 120 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್​​ನಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಅಂತಹದೊಂದು ವಿಶ್ವ ದಾಖಲೆ ನಿರ್ಮಿಸಿದ್ದು ಸೌತ್ ಆಫ್ರಿಕಾ ವೇಗಿ ಮಾರ್ಕೊ ಯಾನ್ಸೆನ್. ಡರ್ಬನ್​​ನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ ಕಬಳಿಸಿ ಯಾನ್ಸೆನ್ ಈ ಭರ್ಜರಿ ದಾಖಲೆ ಬರೆದಿದ್ದಾರೆ.

1 / 6
ಕಿಂಗ್​​ಸ್​ಮೀಡ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ಇನಿಂಗ್ಸ್​​ನಲ್ಲಿ ಶ್ರೀಲಂಕಾ ತಂಡವು ಕೇವಲ 42 ರನ್​​ಗಿಗೆ ಆಲೌಟ್ ಆಗಿತ್ತು. ಲಂಕಾ ಪಡೆ ಹೀಗೆ ಎರಡಂಕಿ ಮೊತ್ತಕ್ಕೆ ಆಲೌಟ್ ಆಗಲು ಮುಖ್ಯ ಕಾರಣ ಎಡಗೈ ವೇಗಿ ಮಾರ್ಕೊ ಯಾನ್ಸೆನ್. ಈ ಇನಿಂಗ್ಸ್​​ನಲ್ಲಿ 6.5 ಓವರ್​ಗಳನ್ನು ಎಸೆದಿದ್ದ ಯಾನ್ಸೆನ್ ಕೇವಲ 13 ರನ್ ನೀಡಿ 7 ವಿಕೆಟ್ ಕಬಳಿಸಿದ್ದಾರೆ.

2 / 6
7 ವಿಕೆಟ್​​ಗಳೊಂದಿಗೆ ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 7 ವಿಕೆಟ್ ಪಡೆದ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ 120 ವರ್ಷಗಳ ಹಳೆಯ ವರ್ಲ್ಡ್ ರೆಕಾರ್ಡ್ ಅನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ. ಇದಕ್ಕೂ ಮುನ್ನ ಇಂತಹದೊಂದು ದಾಖಲೆ ನಿರ್ಮಿಸಿದ್ದು ಹ್ಯೂ ಟ್ರಂಬಲ್.

3 / 6
1904 ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಕಣಕ್ಕಿಳಿದಿದ್ದ ಹ್ಯೂ ಟ್ರಂಬಲ್ 41 ಎಸೆತಗಳನ್ನು ಎಸೆದು 7 ವಿಕೆಟ್ ಕಬಳಿಸಿದ್ದರು. ಇದೀಗ ಈ ಸಾರ್ವಕಾಲೀಕ ಶ್ರೇಷ್ಠ ದಾಖಲೆಯನ್ನು ಮಾರ್ಕೊ ಯಾನ್ಸೆನ್ ಸರಿಗಟ್ಟಿದ್ದಾರೆ.

4 / 6
ಶ್ರೀಲಂಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್​​ನಲ್ಲಿ ಕೇವಲ 41 ಎಸೆತಗಳನ್ನು ಎಸೆದ ಮಾರ್ಕೊ ಯಾನ್ಸೆನ್ 13 ರನ್ ನೀಡಿ 7 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ ಕ್ರಿಕೆಟ್ ಇತಿಹಾಸದಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 7 ವಿಕೆಟ್ ಕಬಳಿಸಿದ ವಿಶ್ವದ 2ನೇ ಹಾಗೂ ಸೌತ್ ಆಫ್ರಿಕಾದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.

5 / 6
ಇನ್ನು ಮಾರ್ಕೊ ಯಾನ್ಸೆನ್ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡವು ಮೊದಲ ಇನಿಂಗ್ಸ್​​ನಲ್ಲಿ ಕೇವಲ 42 ರನ್​​ಗಳಿಸಿದರೆ, ಅತ್ತ ಸೌತ್ ಆಫ್ರಿಕಾ ತಂಡವು ಪ್ರಥಮ ಇನಿಂಗ್ಸ್​​ನಲ್ಲಿ 191 ರನ್ ಪೇರಿಸಿತು. ಇನ್ನು ದ್ವಿತೀಯ ಇನಿಂಗ್ಸ್​​ನಲ್ಲಿ ಸೌತ್ ಆಫ್ರಿಕಾ 366 ರನ್​ ಕಲೆಹಾಕಿ ಡಿಕ್ಲೇರ್ ಘೋಷಿಸಿದೆ. ಅದರಂತೆ ಇದೀಗ ಶ್ರೀಲಂಕಾ ತಂಡವು ಗೆಲ್ಲಲು ದ್ವಿತೀಯ ಇನಿಂಗ್ಸ್​​ನಲ್ಲಿ 516 ರನ್​ ಕಲೆಹಾಕಬೇಕಿದೆ.

6 / 6
Follow us