26 ವರ್ಷದ ಮೆಹಿದಿ ಹಸನ್ ಮಿರಾಝ್ ಬಾಂಗ್ಲಾದೇಶ್ ಪರ ಈವರೆಗೆ 47 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 1 ಶತಕ ಹಾಗೂ 8 ಅರ್ಧಶತಕಗಳೊಂದಿಗೆ ಒಟ್ಟು 1689 ರನ್ ಕಲೆಹಾಕಿದ್ದಾರೆ. ಹಾಗೆಯೇ 183 ವಿಕೆಟ್ಗಳನ್ನು ಕಬಳಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇನ್ನು 97 ಏಕದಿನ ಪಂದ್ಯಗಳಿಂದ 106 ವಿಕೆಟ್ ಪಡೆದಿರುವ ಮೆಹಿದಿ, ಒನ್ಡೇ ನಲ್ಲಿ 1331 ರನ್ ಕಲೆಹಾಕಿದ್ದಾರೆ. ಇದೀಗ ಕ್ರಿಕೆಟ್ನೊಂದಿಗೆ ಬ್ಯಾಟ್ ಉದ್ಯಮಕ್ಕೂ ಯುವ ಆಟಗಾರ ಕಾಲಿಟ್ಟಿದ್ದು, ತನ್ನ ಕಂಪೆನಿಯ ಬ್ಯಾಟ್ಗಳನ್ನು ಟೀಮ್ ಇಂಡಿಯಾ ದಿಗ್ಗಜರಿಗೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.