AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಬ್ಯಾಟ್ ಗಿಫ್ಟ್ ನೀಡಿದ ಬಾಂಗ್ಲಾ ಆಟಗಾರ..!

Mehidy Hasan Miraz: ಮೆಹದಿ ಹಸನ್ ಮಿರಾಝ್ ಬಾಂಗ್ಲಾದೇಶ್ ಪರ ಈವರೆಗೆ 47 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 1 ಶತಕ ಹಾಗೂ 8 ಅರ್ಧಶತಕಗಳೊಂದಿಗೆ ಒಟ್ಟು 1689 ರನ್ ಕಲೆಹಾಕಿದ್ದಾರೆ. ಹಾಗೆಯೇ 183 ವಿಕೆಟ್​ಗಳನ್ನು ಕಬಳಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇನ್ನು 97 ಏಕದಿನ ಪಂದ್ಯಗಳಿಂದ 106 ವಿಕೆಟ್ ಪಡೆದಿರುವ ಮೆಹಿದಿ, ಒನ್​ಡೇ ನಲ್ಲಿ 1331 ರನ್​ ಕಲೆಹಾಕಿದ್ದಾರೆ.

ಝಾಹಿರ್ ಯೂಸುಫ್
|

Updated on: Oct 03, 2024 | 4:03 PM

Share
ಭಾರತ ಮತ್ತು ಬಾಂಗ್ಲಾದೇಶ್ ನಡುವಣ 2ನೇ ಟೆಸ್ಟ್ ಪಂದ್ಯದ ಬಳಿಕ ಶಕೀಬ್ ಅಲ್ ಹಸನ್​ಗೆ ವಿರಾಟ್ ಕೊಹ್ಲಿ ಬ್ಯಾಟ್ ಗಿಫ್ಟ್ ನೀಡಿದ್ದರು. ಟೆಸ್ಟ್​ ಕ್ರಿಕೆಟ್​ ಕೆರಿಯರ್​ಗೆ ನಿವೃತ್ತಿ ಘೋಷಿಸಿರುವ ಶಕೀಬ್​ಗೆ ತಮ್ಮ ಸಹಿ ಹೊಂದಿರುವ ಬ್ಯಾಟ್​ನ್ನು ಉಡುಗೊರೆಯಾಗಿ ನೀಡಿ ಕೊಹ್ಲಿ ಬೀಳ್ಕೊಟ್ಟಿದ್ದರು. ಇದರ ಬೆನ್ನಲ್ಲೇ ಮೆಹಿದಿ ಹಸನ್ ಮಿರಾಝ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಬ್ಯಾಟ್​ಗಳನ್ನು ನೀಡಿದ್ದಾರೆ.

1 / 5
ಬಾಂಗ್ಲಾದೇಶ್ ತಂಡದ ಯುವ ಆಲ್​ರೌಂಡರ್ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಬ್ಯಾಟ್​ಗಳನ್ನು ಗಿಫ್ಟ್ ನೀಡಲು ಮುಖ್ಯ ಕಾರಣ ಹೊಸ ಉದ್ಯಮ ಆರಂಭಿಸಿರುವುದು. ಅಂದರೆ ಮೆಹಿದಿ ಹಸನ್ ಮಿರಾಝ್ ಬಾಂಗ್ಲಾದೇಶದಲ್ಲಿ MKS ಹೆಸರಿನ ಬ್ಯಾಟ್ ನಿರ್ಮಾಣ ಕಂಪೆನಿಯನ್ನು ಆರಂಭಿಸಿದ್ದಾರೆ.

2 / 5
ಭಾರತದ ವಿರುದ್ಧದ ಟೆಸ್ಟ್ ಸರಣಿಗಾಗಿ ತನ್ನ ಕಂಪೆನಿಯ ಬ್ಯಾಟ್​ಗಳೊಂದಿಗೆ ಆಗಮಿಸಿದ್ದ ಮೆಹಿದಿ ಹಸನ್ ಅದನ್ನು ವಿರಾಟ್ ಕೊಹ್ಲಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಗಿಫ್ಟ್ ಸ್ವೀಕರಿಸಿದ ಬಳಿಕ ಮಾತನಾಡಿದ ಕೊಹ್ಲಿ, ಬ್ಯಾಟ್ ತುಂಬಾ ಚೆನ್ನಾಗಿದೆ. ಇದೇ ಕ್ವಾಲಿಟಿಯಲ್ಲಿ ಉತ್ತಮ ಬ್ಯಾಟ್​ಗಳನ್ನು ನಿರ್ಮಿಸಿ ಎಂದು ವಿಶಸ್ ತಿಳಿಸಿದ್ದಾರೆ.

3 / 5
ಇನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೂ ಮೆಹಿದಿ ಹಸನ್ ಮಿರಾಝ್ MKS  ಹೆಸರಿನ ವಿಶೇಷ ಬ್ಯಾಟ್ ನೀಡಿದ್ದಾರೆ. ಈ ವೇಳೆ ಮಾತನಾಡಿದ ಹಿಟ್​ಮ್ಯಾನ್, ಮೆಹಿದಿ ನನಗೆ ತುಂಬಾ ದಿನಗಳಿಂದ ಪರಿಚಯ. ಈಗ ಹೊಸ ಉದ್ಯಮ ಆರಂಭಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಈ ಕಂಪೆನಿಯು ಅತ್ಯುನ್ನತ ಎತ್ತರಕ್ಕೇರಲಿ ಎಂದು ಆಶಿಸುತ್ತೇನೆ ಎಂದು ಹಾರೈಸಿದ್ದಾರೆ.

4 / 5
26 ವರ್ಷದ ಮೆಹಿದಿ ಹಸನ್ ಮಿರಾಝ್ ಬಾಂಗ್ಲಾದೇಶ್ ಪರ ಈವರೆಗೆ 47 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 1 ಶತಕ ಹಾಗೂ 8 ಅರ್ಧಶತಕಗಳೊಂದಿಗೆ ಒಟ್ಟು 1689 ರನ್ ಕಲೆಹಾಕಿದ್ದಾರೆ. ಹಾಗೆಯೇ 183 ವಿಕೆಟ್​ಗಳನ್ನು ಕಬಳಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇನ್ನು 97 ಏಕದಿನ ಪಂದ್ಯಗಳಿಂದ 106 ವಿಕೆಟ್ ಪಡೆದಿರುವ ಮೆಹಿದಿ, ಒನ್​ಡೇ ನಲ್ಲಿ 1331 ರನ್​ ಕಲೆಹಾಕಿದ್ದಾರೆ. ಇದೀಗ ಕ್ರಿಕೆಟ್​ನೊಂದಿಗೆ ಬ್ಯಾಟ್ ಉದ್ಯಮಕ್ಕೂ ಯುವ ಆಟಗಾರ ಕಾಲಿಟ್ಟಿದ್ದು, ತನ್ನ ಕಂಪೆನಿಯ ಬ್ಯಾಟ್​ಗಳನ್ನು ಟೀಮ್ ಇಂಡಿಯಾ ದಿಗ್ಗಜರಿಗೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

5 / 5
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್

ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!

ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ

ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್

ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ

ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ

ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?

ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು