IND vs AUS: ವಿಕೆಟ್ ಇಲ್ಲದೆ ಶತಕ; ಮೆಲ್ಬೋರ್ನ್​ನಲ್ಲಿ ಬೇಡದ ದಾಖಲೆ ಬರೆದ ಸಿರಾಜ್

|

Updated on: Dec 27, 2024 | 11:02 AM

Mohammed Siraj: ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 474 ರನ್ ಕಲೆಹಾಕಿದ್ದು, ಟೀಂ ಇಂಡಿಯಾದ ದುರ್ಬಲ ಬೌಲಿಂಗ್ ಮತ್ತೊಮ್ಮೆ ಜಗಜ್ಜಾಹೀರಾಗಿದೆ. ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಯಾವುದೇ ವಿಕೆಟ್ ಪಡೆಯದೆ 122 ರನ್‌ಗಳನ್ನು ಬಿಟ್ಟುಕೊಟ್ಟು ತೀರ ದುಬಾರಿಯಾಗಿದ್ದಾರೆ.

1 / 8
ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಆಸೀಸ್ ಪಡೆ 474 ರನ್​ಗಳ ಬೃಹತ್ ಮೊತ್ತ ಕಲೆಹಾಕಿದೆ. ತಂಡದ ಪರ ಉಸ್ಮಾನ್ ಖವಾಜಾ, ಸ್ಯಾಮ್ ಕೊನ್ಸ್ಟಾಸ್, ಮಾರ್ನಸ್ ಲಬುಶೆನ್ ಅರ್ಧಶತಕ ಗಳಿಸಿದರೆ ಸ್ಟೀವ್ ಸ್ಮಿತ್ ಶತಕ ಬಾರಿಸಿದರು. ಇತ್ತ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಕೂಡ ಬೇಡದ ಶತಕವನ್ನು ತಮ್ಮ ಖಾತೆಗೆ ಹಾಕಿಕೊಂಡರು.

2 / 8
ಮೆಲ್ಬೋರ್ನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್ ಪಡೆ ಇಷ್ಟು ಬೃಹತ್ ಮೊತ್ತ ಕಲೆಹಾಕಲು ಟೀಂ ಇಂಡಿಯಾದ ಬೌಲಿಂಗ್ ವಿಭಾಗವೂ ಒಂದು ಕಡೆ ಕಾರಣವಾಯಿತು. ತಂಡದ ಪರ ಎಂದಿನಂತೆ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಜಸ್ಪ್ರೀತ್ ಬುಮ್ರಾ ನಾಲ್ಕು ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಮೂರು ವಿಕೆಟ್, ಆಕಾಶ್ ದೀಪ್ ಎರಡು ವಿಕೆಟ್ ಹಾಗೂ ವಾಷಿಂಗ್ಟನ್ ಸುಂದರ್ ಕೂಡ ಒಂದು ವಿಕೆಟ್ ಪಡೆದರು.

3 / 8
ಆದರೆ ಮೊಹಮ್ಮದ್​ ಸಿರಾಜ್​ಗೆ ಮಾತ್ರ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಮೆಲ್ಬೋರ್ನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್​ನಲ್ಲಿ 23 ಓವರ್‌ಗಳನ್ನು ಬೌಲ್ ಮಾಡಿದ ಸಿರಾಜ್ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಇತ್ತ ರನ್​ ನೀಡುವುದರಲ್ಲೂ ದಾರಾಳತೆ ಮೆರೆದ ಸಿರಾಜ್ 100 ಕ್ಕೂ ಅಧಿಕ ರನ್ ಬಿಟ್ಟುಕೊಟ್ಟು ನಾಚಿಕೆಗೇಡಿನ ದಾಖಲೆಯನ್ನೂ ನಿರ್ಮಿಸಿದ್ದಾರೆ.

4 / 8
ಆಸ್ಟ್ರೇಲಿಯದ ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ ವಿಕೆಟ್ ಕಬಳಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರೂ ಯಾವುದೇ ಯಶಸ್ಸನ್ನು ಪಡೆಯಲಿಲ್ಲ. ಆದರೆ ಇದಕ್ಕೆ ವಿರುದ್ಧವಾಗಿ ಸಿರಾಜ್ ಸಾಕಷ್ಟು ರನ್ಗಳನ್ನು ಬಿಟ್ಟುಕೊಟ್ಟರು. 23 ಓವರ್ ಬೌಲ್ ಮಾಡಿದ ಸಿರಾಜ್ 5.30ರ ಎಕಾನಮಿಯಲ್ಲಿ 122 ರನ್‌ ಬಿಟ್ಟುಕೊಟ್ಟರು. ಇದರೊಂದಿಗೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಯಾವುದೇ ವಿಕೆಟ್ ಪಡೆಯದೇ ಅತಿ ಹೆಚ್ಚು ರನ್ ವ್ಯಯಿಸಿದ ಭಾರತೀಯ ಬೌಲರ್ ಎನಿಸಿಕೊಂಡರು.

5 / 8
ಸಿರಾಜ್​ಗೂ ಮುನ್ನ 2014ರ ಟೆಸ್ಟ್‌ನಲ್ಲಿ ಇಶಾಂತ್ ಶರ್ಮಾ ಯಾವುದೇ ವಿಕೆಟ್ ಪಡೆಯದೆ 104 ರನ್ ಬಿಟ್ಟುಕೊಟ್ಟಿದ್ದರು. ಇದಲ್ಲದೆ ಯಾವುದೇ ವಿಕೆಟ್ ಪಡೆಯದೇ 100ಕ್ಕೂ ಹೆಚ್ಚು ರನ್‌ ನೀಡಿದ ಭಾರತದ ಇತ್ತೀಚಿನ 10 ವೇಗಿಗಳ ಪಟ್ಟಿಗೆ ಇದೀಗ ಸಿರಾಜ್​ ಎಂಟ್ರಿಕೊಟ್ಟಿದ್ದಾರೆ.

6 / 8
2023 ರಲ್ಲಿ ನಡೆದಿದ್ದ ಅಹಮದಾಬಾದ್ ಟೆಸ್ಟ್‌ನಲ್ಲಿ ಉಮೇಶ್ ಯಾದವ್ ಆಸ್ಟ್ರೇಲಿಯಾ ವಿರುದ್ಧ ಯಾವುದೇ ವಿಕೆಟ್ ಪಡೆಯದೆ 105 ರನ್ ನೀಡಿದರು. ಅದಕ್ಕೂ ಮುನ್ನ ಭುವನೇಶ್ವರ್ ಕುಮಾರ್ 2015 ರಲ್ಲಿ ಸಿಡ್ನಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 122 ರನ್ ಬಿಟ್ಟುಕೊಟ್ಟಿದ್ದರು.

7 / 8
ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಇಶಾಂತ್ ಶರ್ಮಾ 2014ರಲ್ಲಿ ನಡೆದಿದ್ದ ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಯಾವುದೇ ವಿಕೆಟ್ ಪಡೆಯದೆ 164 ರನ್ ನೀಡಿದ್ದರು. ಎರಡನೇ ಸ್ಥಾನದಲ್ಲಿರುವ ರವಿಚಂದ್ರನ್ ಅಶ್ವಿನ್ 2012ರಲ್ಲಿ ನಡೆದಿದ್ದ ಸಿಡ್ನಿ ಟೆಸ್ಟ್‌ನಲ್ಲಿ ಯಾವುದೇ ವಿಕೆಟ್ ಪಡೆಯದೆ 157 ರನ್ ಬಿಟ್ಟುಕೊಟ್ಟಿದ್ದರು.

8 / 8
ಈ ಸರಣಿಯಲ್ಲಿ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ ಆಡಿರುವ 7 ಇನ್ನಿಂಗ್ಸ್‌ಗಳಲ್ಲಿ 25 ವಿಕೆಟ್ ಪಡೆದಿದ್ದರೆ, ಇತ್ತ ಮೊಹಮ್ಮದ್ ಸಿರಾಜ್ ಇದುವರೆಗೆ ಕೇವಲ 11 ವಿಕೆಟ್ ಪಡೆದಿದ್ದಾರೆ. ಆದರೆ ಅಗತ್ಯ ಸಮಯದಲ್ಲಿ ವಿಕೆಟ್ ಪಡೆಯುವಲ್ಲಿ ಅವರು ಪರಿಣಾಮಕಾರಿ ಎಂದು ಸಾಬೀತುಪಡಿಸಲಿಲ್ಲ. ವೇಗದ ಬೌಲಿಂಗ್‌ನಲ್ಲಿ ಬುಮ್ರಾಗೆ ಬೆಂಬಲ ನೀಡುವಲ್ಲಿ ಸಿರಾಜ್ ಯಶಸ್ವಿಯಾಗಲಿಲ್ಲ.