- Kannada News Photo gallery Cricket photos MI Emirates sign Kieron Pollard and Trent Boult for UAE T20 league
UAE T20 league: ಪೊಲಾರ್ಡ್, ಪೂರನ್, ಬೋಲ್ಟ್; ಯುಎಇ ಟಿ20 ಲೀಗ್ಗೆ ಹೀಗಿದೆ ಮುಂಬೈ ತಂಡ
UAE T20 league: ILT20 ನಲ್ಲಿ ಅಬುಧಾಬಿ ಫ್ರಾಂಚೈಸಿಯನ್ನು ಖರೀದಿಸಿದ ಮುಂಬೈ ಇಂಡಿಯನ್ಸ್, 14 ಆಟಗಾರರ ಹೆಸರನ್ನು ಘೋಷಿಸಿದೆ.
Updated on:Aug 12, 2022 | 6:02 PM

ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ 5 ಆಟಗಾರರನ್ನು ಖರೀದಿಸಿದ ನಂತರ ಅತ್ಯಂತ ಯಶಸ್ವಿ ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್, ಯುಎಇಯ ಅಂತರರಾಷ್ಟ್ರೀಯ ಟಿ20 ಲೀಗ್‌ನಲ್ಲಿ ತಮ್ಮ ಆಟಗಾರರ ಹೆಸರನ್ನು ಸಹ ಪ್ರಕಟಿಸಿದೆ.

ILT20 ನಲ್ಲಿ ಅಬುಧಾಬಿ ಫ್ರಾಂಚೈಸಿಯನ್ನು ಖರೀದಿಸಿದ ಮುಂಬೈ ಇಂಡಿಯನ್ಸ್, 14 ಆಟಗಾರರ ಹೆಸರನ್ನು ಘೋಷಿಸಿದೆ. ಇದರಲ್ಲಿ ಕೀರಾನ್ ಪೊಲಾರ್ಡ್ ಅತ್ಯಂತ ಪ್ರಸಿದ್ಧ ಹೆಸರು, ಅವರು ಈಗಾಗಲೇ IPL ನಲ್ಲಿ 2010 ರಿಂದ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದಾರೆ.

ಪೊಲಾರ್ಡ್ ಹೊರತುಪಡಿಸಿ, ಮುಂಬೈ ತನ್ನ ಹಳೆಯ ಸ್ಟಾರ್ ಆಟಗಾರರಾದ ಡ್ವೇನ್ ಬ್ರಾವೋ ಮತ್ತು ಟ್ರೆಂಟ್ ಬೌಲ್ಟ್ರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅನುಭವಿ ವಿಂಡೀಸ್ ಆಲ್-ರೌಂಡರ್ ಬ್ರಾವೋ IPLನ ಆರಂಭಿಕ ಸೀಸನ್ಗಳಲ್ಲಿ ಮುಂಬೈನ ಭಾಗವಾಗಿದ್ದರು ನಂತರ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಾರಂಬಿಸಿದರು.

ಅದೇ ಸಮಯದಲ್ಲಿ, ಟ್ರೆಂಟ್ ಬೌಲ್ಟ್ 2020 ಮತ್ತು 2021 ರ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದರು. ಇತ್ತೀಚೆಗೆ, ಬೋಲ್ಟ್ ನ್ಯೂಜಿಲೆಂಡ್ ಕ್ರಿಕೆಟ್‌ನ ಕೇಂದ್ರ ಒಪ್ಪಂದವನ್ನು ತೊರೆಯಲು ನಿರ್ಧರಿಸಿದ್ದರು, ಇದರಿಂದಾಗಿ ಫ್ರಾಂಚೈಸಿಗೆ ಅವರ ಲಭ್ಯತೆಯ ಬಗ್ಗೆ ಹೆಚ್ಚಿನ ಸಮಸ್ಯೆಯಾಗುವುದಿಲ್ಲ.

ಇವರಲ್ಲದೆ, ಮುಂಬೈ ಇಂಡಿಯನ್ಸ್ ತಮ್ಮ ತಂಡಕ್ಕೆ ಇಂಗ್ಲೆಂಡ್ ಬ್ಯಾಟ್ಸ್‌ಮನ್ ವಿಲ್ ಸ್ಮೆಡ್ ಅವರನ್ನು ಕೂಡ ಸೇರಿಸಿಕೊಂಡಿದೆ. ಯುವ ಬ್ಯಾಟ್ಸ್‌ಮನ್ ಸ್ಮೆಡ್ ಇತ್ತೀಚೆಗೆ 'ದಿ ಹಂಡ್ರೆಡ್' ಪಂದ್ಯಾವಳಿಯ ಎರಡನೇ ಸೀಸನ್‌ನಲ್ಲಿ ಶತಕ ಬಾರಿಸಿದ್ದರು. ಈ ಟೂರ್ನಿಯ ಇತಿಹಾಸದಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇವರಲ್ಲದೆ ವಿಂಡೀಸ್ ನಾಯಕ ನಿಕೋಲಸ್ ಪೂರನ್ ಅವರನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇವರೊಂದಿಗೆ MI ಎಮಿರೇಟ್ಸ್ ತಂಡದ 14 ಆಟಗಾರರು ಪಟ್ಟಿ ಹೀಗಿದೆ - ಕೀರಾನ್ ಪೊಲಾರ್ಡ್, ಟ್ರೆಂಟ್ ಬೌಲ್ಟ್, ಡ್ವೇನ್ ಬ್ರಾವೋ, ನಿಕೋಲಸ್ ಪೂರನ್, ಇಮ್ರಾನ್ ತಾಹಿರ್, ಆಂಡ್ರೆ ಫ್ಲೆಚರ್, ನಜಿಬುಲ್ಲಾ ಝದ್ರಾನ್, ಜಹೀರ್ ಖಾನ್, ಫಜ್ಲಾಕ್ ಫಾರೂಕಿ, ಸಮಿತ್ ಪಟೇಲ್, ವಿಲ್ ಸ್ಮೀಡ್, ಜೋರ್ಡಾನ್ ಥಾಂಪ್ಸನ್ ಮತ್ತು ಬ್ರಾಡ್
Published On - 6:02 pm, Fri, 12 August 22




