Mithali Raj Surpass MS Dhoni: ಧೋನಿ ದಾಖಲೆ ಮುರಿದ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್

| Updated By: ಪೃಥ್ವಿಶಂಕರ

Updated on: Feb 24, 2022 | 5:09 PM

Mithali Raj: ಚೇಸಿಂಗ್ ಮಾಡುವಾಗ ಮಿಥಾಲಿ ರಾಜ್ ಗೆಲುವಿನಲ್ಲಿ ಅತ್ಯುತ್ತಮ ಸರಾಸರಿ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ODI ಕ್ರಿಕೆಟ್‌ನಲ್ಲಿ ಚೇಸಿಂಗ್‌ನಲ್ಲಿ ಮಿಥಾಲಿ ಅವರ ಸರಾಸರಿ 109.05 ಇದೆ. ಈ ಸರಾಸರಿಯಲ್ಲಿ ಅವರು 2181 ರನ್ ಗಳಿಸಿದ್ದಾರೆ.

1 / 5
ನ್ಯೂಜಿಲೆಂಡ್ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಅದ್ಭುತ ಗೆಲುವು ದಾಖಲಿಸಿದೆ. ಮೊದಲ ನಾಲ್ಕು ಪಂದ್ಯಗಳಲ್ಲಿ ಸೋತಿದ್ದ ಟೀಂ ಇಂಡಿಯಾ ಕೊನೆಯ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಗೆಲುವಿಗೆ 252 ರನ್ ಗಳ ಗುರಿ ಬೆನ್ನತ್ತಿದ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 46 ಓವರ್ ಗಳಲ್ಲಿ ಸೋಲಿಸಿತು. ಸ್ಮೃತಿ ಮಂಧಾನ 71 ಮತ್ತು ಹರ್ಮನ್‌ಪ್ರೀತ್ ಕೌರ್ 63 ರನ್ ಗಳಿಸಿ ಭಾರತದ ಗೆಲುವಿಗೆ ಕಾರಣರಾದರು. ನಾಯಕಿ ಮಿಥಾಲಿ ರಾಜ್ ಕೂಡ ಅಜೇಯ 57 ರನ್ ಗಳಿಸಿ ತಂಡದ ಗೆಲುವಿಗೆ ಪಾತ್ರರಾದರು. ಮಿಥಾಲಿ ರಾಜ್ ಅವರ ಈ ಇನ್ನಿಂಗ್ಸ್ನಿಂದ ಅವರು ಧೋನಿ ಹೆಸರಲ್ಲಿದ್ದ ದಾಖಲೆಯನ್ನು ತಮ್ಮದಾಗಿಸಿಕೊಂಡರು.

2 / 5
ಚೇಸಿಂಗ್ ಮಾಡುವಾಗ ಮಿಥಾಲಿ ರಾಜ್ ಗೆಲುವಿನಲ್ಲಿ ಅತ್ಯುತ್ತಮ ಸರಾಸರಿ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ODI ಕ್ರಿಕೆಟ್‌ನಲ್ಲಿ ಚೇಸಿಂಗ್‌ನಲ್ಲಿ ಮಿಥಾಲಿ ಅವರ ಸರಾಸರಿ 109.05 ಇದೆ. ಈ ಸರಾಸರಿಯಲ್ಲಿ ಅವರು 2181 ರನ್ ಗಳಿಸಿದ್ದಾರೆ.

3 / 5
ಚೇಸಿಂಗ್‌ನಲ್ಲಿ ಧೋನಿ 102.71 ಸರಾಸರಿಯಲ್ಲಿ 2876 ರನ್ ಗಳಿಸಿದರು. ಆದರೆ, ಇದೀಗ ಮಿಥಾಲಿ ರಾಜ್ ಅವರನ್ನು ಹಿಂದಿಕ್ಕಿದ್ದಾರೆ. ವಿರಾಟ್ ಕೊಹ್ಲಿ ಚೇಸಿಂಗ್ ಗೆಲುವಿನಲ್ಲಿ 94.66 ಸರಾಸರಿಯಲ್ಲಿ 5396 ರನ್ ಗಳಿಸಿದ್ದಾರೆ.

4 / 5
ಭಾರತದ ಮತ್ತೊಬ್ಬ ಮಹಿಳಾ ಕ್ರಿಕೆಟರ್ ಸ್ಮೃತಿ ಮಂಧಾನ ಕೂಡ ಚೇಸ್‌ನಲ್ಲಿ ಪರಿಣತಿ ಹೊಂದಿದ್ದಾರೆ. ಗುರಿ ಬೆನ್ನಟ್ಟುವಾಗ ಅವರು 69.94ರ ಸರಾಸರಿಯಲ್ಲಿ 1189 ರನ್ ಗಳಿಸಿದ್ದಾರೆ. ಸುರೇಶ್ ರೈನಾ 66.60 ಸರಾಸರಿಯಲ್ಲಿ 1865 ರನ್ ಗಳಿಸಿದ್ದಾರೆ.

5 / 5
ನ್ಯೂಜಿಲೆಂಡ್ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂಧಾನ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಮಂಧಾನ 84 ಎಸೆತಗಳಲ್ಲಿ 71 ರನ್‌ಗಳ ಅಮೋಘ ಇನ್ನಿಂಗ್ಸ್‌ ಆಡಿದರು.