- Kannada News Photo gallery Cricket photos Mohammed Siraj With Asha Bhosle's Granddaughter Zanai Bhosle Photo Goes Viral
ಖ್ಯಾತ ಗಾಯಕಿ ಜೊತೆ ಮೊಹಮ್ಮದ್ ಸಿರಾಜ್ ಪಾರ್ಟಿ: ಫೋಟೋ ವೈರಲ್ ಬಳಿಕ ಸ್ಪಷ್ಟನೆ
Mohammed Siraj - Zanai Bhosle: ಭಾರತದ ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ಅವರ ಮೊಮ್ಮಗಳು ಝನಾಯಿ ಭೋಸ್ಲೆ ಅವರೊಂದಿಗೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸಿರಾಜ್ ಇದೀಗ ಸ್ಪಷ್ಟನೆ ನೀಡಿದ್ದು, ಈ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.
Updated on: Jan 27, 2025 | 9:53 AM

ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಅವರ ಫೋಟೋವೊಂದು ವೈರಲ್ ಆಗಿದೆ. ಹೀಗೆ ಫೋಟೋ ವೈರಲ್ ಆಗಲು ಮುಖ್ಯ ಕಾರಣ ಗಾಯಕಿ ಝನಾಯಿ ಭೋಸ್ಲೆ. ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಮೊಮ್ಮಗಳಾಗಿರುವ ಝನಾಯಿ ಭೋಸ್ಲೆ ಸಿರಾಜ್ ಅವರೊಂದಿಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪಾರ್ಟಿಯೊಂದರಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದೇ ತಡ, ಫೋಟೋ ಕ್ಲಿಕ್ಕಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಇದರ ಬೆನ್ನಲ್ಲೇ ಮೊಹಮ್ಮದ್ ಸಿರಾಜ್ ಹಾಗೂ ಝನಾಯಿ ಭೋಸ್ಲೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹುಟ್ಟಿಕೊಂಡಿದೆ.

ಆದರೀಗ ಈ ಬಗ್ಗೆ ಖುದ್ದು ಮೊಹಮ್ಮದ್ ಸಿರಾಜ್ ಸ್ಪಷ್ಟನೆ ನೀಡಿದ್ದಾರೆ. ಝನಾಯಿ ಭೋಸ್ಲೆ ಅವರು ನನಗೆ ತಂಗಿ ಸಮಾನ. ನನ್ನ ಫ್ರೆಂಡ್ ಆಗಿರುವ ಕಾರಣ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದೆ. ಇದರ ಹೊರತಾಗಿ ಬೇರೇನು ಇಲ್ಲ ಎಂದು ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.

ಅತ್ತ ಝನಾಯಿ ಭೋಸ್ಲೆ ಕೂಡ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದು, ಮೊಹಮ್ಮದ್ ಸಿರಾಜ್ ನನ್ನ ಅಣ್ಣ. ನನ್ನ ಪ್ರೀತಿಯ ಅಣ್ಣ ಎಂದು ವೈರಲ್ ಆಗಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಎಲ್ಲಾ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.

ಸದ್ಯ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಮೊಹಮ್ಮದ್ ಸಿರಾಜ್ ಹೈರಾಬಾದ್ ಪರ ರಣಜಿ ಟೂರ್ನಿ ಆಡಲು ಸಜ್ಜಾಗುತ್ತಿದ್ದಾರೆ. ಅಲ್ಲದೆ ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಅವರನ್ನು ಆಯ್ಕೆ ಮಾಡಲಾಗಿಲ್ಲ. ಹೀಗಾಗಿ ಈ ಸಂಪೂರ್ಣ ರಣಜಿ ಟೂರ್ನಿಯಲ್ಲಿ ತೊಡಗಿಸಿಕೊಳ್ಳಲು ಸಿರಾಜ್ ನಿರ್ಧರಿಸಿದ್ದಾರೆ.
























