- Kannada News Photo gallery Cricket photos Mongolia All out for 10 runs: Lowest innings totals in T20Is
ಕೇವಲ 10 ರನ್ಗೆ ಆಲೌಟ್: 5 ಎಸೆತಗಳಲ್ಲಿ ಮುಗಿದ ಟಿ20 ಪಂದ್ಯ
T20 Cricket Record: ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡವೆಂಬ ಹೀನಾಯ ದಾಖಲೆಯನ್ನು ಮಂಗೋಲಿಯಾ ನಿರ್ಮಿಸಿದೆ. ಅದು ಸಹ ಮುಂಬರುವ ಟಿ20 ವಿಶ್ವಕಪ್ಗಾಗಿ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಎಂಬುದು ವಿಶೇಷ. ಈ ಮ್ಯಾಚ್ ಕೇವಲ 5 ಎಸೆತಗಳಲ್ಲಿ ಮುಗಿದಿರುವುದು ಕೂಡ ದಾಖಲೆಯಾಗಿದೆ.
Updated on: Sep 05, 2024 | 11:04 AM

ಕೇವಲ 10 ರನ್ಗೆ ಆಲೌಟ್... 5 ಎಸೆತಗಳಲ್ಲೇ ಮುಗಿದ ಹೋದ ಟಿ20 ಪಂದ್ಯ. ಇಂತಹದೊಂದು ಅಪರೂಪದ ಪಂದ್ಯ ಕಂಡು ಬಂದಿರುವುದು ಟಿ20 ವಿಶ್ವಕಪ್ನ ಏಷ್ಯಾದ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಎಂಬುದು ವಿಶೇಷ. ಮುಂಬರುವ ಟಿ20 ವಿಶ್ವಕಪ್ಗಾಗಿ ನಡೆಯುತ್ತಿರುವ ಕ್ವಾಲಿಫೈಯರ್ ಪಂದ್ಯದಲ್ಲಿ ಮಂಗೋಲಿಯಾ ತಂಡವು ಕೇವಲ 10 ರನ್ಗಳಿಗೆ ಆಲೌಟ್ ಆಗಿ ಹೀನಾಯ ದಾಖಲೆ ಬರೆದಿದೆ.

ಮಲೇಷ್ಯಾದ ಓವಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮಂಗೋಲಿಯಾ ಮತ್ತು ಸಿಂಗಾಪುರ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಸಿಂಗಾಪುರ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಮಂಗೋಲಿಯಾ ತಂಡವು 4 ರನ್ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡರು. ಈ ಆಘಾತದಿಂದ ಹೊರಬರುವ ಮುನ್ನವೇ ಉಳಿದ 5 ವಿಕೆಟ್ಗಳು ಕೂಡ ಉರುಳಿದ್ದವು. ಈ ಮೂಲಕ ಕೇವಲ 10 ರನ್ಗಳಿಗೆ ಆಲೌಟ್ ಆಗಿದೆ.

ಈ ಪಂದ್ಯದಲ್ಲಿ ಮಂಗೋಲಿಯಾ ತಂಡವು 10 ಓವರ್ಗಳನ್ನು ಆಡಿದ್ದರು ಎಂಬುದೇ ವಿಶೇಷ. ಆದರೆ ಯಾರು ಸಹ ಎರಡಕ್ಕಿಂತ ಹೆಚ್ಚಿನ ರನ್ ಕಲೆಹಾಕಿಲ್ಲ. ಹಾಗೆಯೇ ಐವರು ಬ್ಯಾಟರ್ಗಳು ಶೂನ್ಯಕ್ಕೆ ಔಟಾಗಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ರನ್ಗಳಿಗೆ ಆಲೌಟ್ ಆದ ತಂಡವೆಂಬ ಅನಗತ್ಯ ದಾಖಲೆಯನ್ನು ಮಂಗೋಲಿಯಾ ತನ್ನದಾಗಿಸಿಕೊಂಡಿದೆ.

ಇದಕ್ಕೂ ಮುನ್ನ ಈ ಕೆಟ್ಟ ದಾಖಲೆ ಐಲ್ ಆಫ್ ಮ್ಯಾನ್ ತಂಡದ ಹೆಸರಿನಲ್ಲಿತ್ತು. 2023 ರಲ್ಲಿ ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಐಲ್ ಆಫ್ ಮ್ಯಾನ್ ತಂಡವು 8.4 ಓವರ್ಗಳಲ್ಲಿ 10 ರನ್ಗಳಿಸಿ ಆಲೌಟ್ ಆಗಿತ್ತು. ಇದೀಗ ಈ ಹೀನಾಯ ದಾಖಲೆಯನ್ನು ಮಂಗೋಲಿಯಾ ತಂಡ ಮುರಿದಿರುವುದು ವಿಶೇಷ.

ಮಂಗೋಲಿಯಾ ತಂಡವು 10 ಓವರ್ಗಳನ್ನು ಆಡಿ ಕೇವಲ 10 ರನ್ಗಳಿಗೆ ಆಲೌಟ್ ಆಗುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡವೆಂಬ ಅಪಕೀರ್ತಿಯನ್ನು ತನ್ನದಾಗಿಸಿಕೊಂಡಿದೆ. ಇಲ್ಲಿ ಐಲ್ ಆಫ್ ಮ್ಯಾನ್ ತಂಡವು 10 ರನ್ಗಳಿಗೆ ಆಲೌಟ್ ಆಗಿದ್ದರೂ, ಮಂಗೋಲಿಯಾ ಹೆಚ್ಚಿನ ಓವರ್ಗಳನ್ನು ತೆಗೆದುಕೊಂಡು ಕೇವಲ 10 ರನ್ಗಳಿಸಿರುವುದರಿಂದ ಈ ಕೆಟ್ಟ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಇನ್ನು ಮಂಗೋಲಿಯಾ ನೀಡಿದ 11 ರನ್ಗಳ ಗುರಿಯನ್ನು ಬೆನ್ನತ್ತಿದ ಸಿಂಗಾಪುರ್ ತಂಡವು ಒಂದು ಸಿಕ್ಸ್ ಹಾಗೂ ಒಂದು ಫೋರ್ನೊಂದಿಗೆ ಕೇವಲ 5 ಎಸೆತಗಳಲ್ಲಿ ಪಂದ್ಯವನ್ನು ಮುಗಿಸಿದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ ಚೇಸ್ ಮಾಡಿದ ವಿಶೇಷ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡರು.
