Updated on: Jan 22, 2023 | 8:29 PM
ಏಕದಿನ ಕ್ರಿಕೆಟ್ನ ಚೇಸ್ ಮಾಸ್ಟರ್ ಯಾರು ಎಂಬ ಪ್ರಶ್ನೆ ಮುಂದಿಟ್ಟರೆ ಥಟ್ಟನೆ ಬರುವ ಉತ್ತರ ವಿರಾಟ್ ಕೊಹ್ಲಿ. ಆದರೆ ಈ ವಿಷಯದಲ್ಲಿ ಕಿಂಗ್ ಕೊಹ್ಲಿ ಇನ್ನೂ ಕೂಡ 2ನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಅಗ್ರಸ್ಥಾನಕ್ಕೇರಬೇಕಿದ್ದರೆ ಯಶಸ್ವಿ ಚೇಸಿಂಗ್ನಲ್ಲಿ 63 ರನ್ಗಳಿಸಬೇಕಿದೆ.
ಹಾಗಿದ್ರೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಯಶಸ್ವಿ ರನ್ ಚೇಸ್ ಮಾಸ್ಟರ್ ಆಗಿ ಗುರುತಿಸಿಕೊಂಡ ಬ್ಯಾಟ್ಸ್ಮನ್ಗಳು ಯಾರೆಲ್ಲಾ ಎಂದು ನೋಡೋಣ...
1- ಸಚಿನ್ ತೆಂಡೂಲ್ಕರ್: ಚೇಸಿಂಗ್ ವಿಷಯದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. 124 ಬಾರಿ ಯಶಸ್ವಿ ಚೇಸಿಂಗ್ ಇನಿಂಗ್ಸ್ ಆಡಿರುವ ಸಚಿನ್ ಒಟ್ಟು 5490 ರನ್ ಕಲೆಹಾಕಿದ್ದಾರೆ. ಈ ಮೂಲಕ ದ್ವಿತೀಯ ಇನಿಂಗ್ಸ್ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
2- ವಿರಾಟ್ ಕೊಹ್ಲಿ: ಟೀಮ್ ಇಂಡಿಯಾದ ಪ್ರಸ್ತುತ ಚೇಸ್ ಮಾಸ್ಟರ್ ಆಗಿ ಗುರುತಿಸಿಕೊಂಡಿರುವ ಕಿಂಗ್ ಕೊಹ್ಲಿ, 90 ಯಶಸ್ವಿ ಚೇಸಿಂಗ್ ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಒಟ್ಟು 5428 ರನ್ ಕಲೆಹಾಕುವ ಮೂಲಕ ದ್ವಿತೀಯ ಇನಿಂಗ್ಸ್ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
3- ರಿಕಿ ಪಾಂಟಿಂಗ್: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಒಟ್ಟು 104 ಚೇಸಿಂಗ್ ಇನಿಂಗ್ಸ್ ಆಡಿದ್ದಾರೆ. ಈ ಮೂಲಕ ಒಟ್ಟು 4186 ರನ್ ಬಾರಿಸಿ ಆಸ್ಟ್ರೇಲಿಯಾ ತಂಡದ ಚೇಸಿಂಗ್ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ.
4- ಜಾಕ್ಸ್ ಕಾಲಿಸ್: ಸೌತ್ ಆಫ್ರಿಕಾ ತಂಡದ ಮಾಜಿ ಆಲ್ರೌಂಡರ್ ಜಾಕ್ಸ್ ಕಾಲಿಸ್ ಕೂಡ ತಂಡದ ಚೇಸಿಂಗ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಒಟ್ಟು 100 ಚೇಸಿಂಗ್ ಇನಿಂಗ್ಸ್ ಆಡಿರುವ ಕಾಲಿಸ್ ಒಟ್ಟು 3950 ರನ್ ಕಲೆಹಾಕಿದ್ದಾರೆ.
5- ರೋಹಿತ್ ಶರ್ಮಾ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಈ ಪಟ್ಟಿಯಲ್ಲಿದ್ದಾರೆ. 86 ಯಶಸ್ವಿ ಚೇಸಿಂಗ್ ಇನಿಂಗ್ಸ್ ಆಡಿರುವ ಹಿಟ್ಮ್ಯಾನ್ ಒಟ್ಟು 3897 ರನ್ಗಳಿಸಿದ್ದಾರೆ.
ಅಂದರೆ ಟೀಮ್ ಇಂಡಿಯಾ ಚೇಸಿಂಗ್ ಗೆಲುವಿನಲ್ಲಿ ಅತ್ಯಧಿಕ ರನ್ ಕಲೆಹಾಕಿರುವ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಈ ದಾಖಲೆಯನ್ನು ಮುರಿಯಲು ವಿರಾಟ್ ಕೊಹ್ಲಿಗೆ ಕೇವಲ 63 ರನ್ಗಳ ಅವಶ್ಯಕತೆಯಿದೆ. ಒಂದು ವೇಳೆ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ಆಡಿದ್ರೆ ಕಿಂಗ್ ಕೊಹ್ಲಿಗೆ ಈ ದಾಖಲೆ ಮುರಿಯುವ ಅವಕಾಶ ಸಿಗಲಿದೆ.