AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rovman Powell: 10 ಸಿಕ್ಸ್​, 4 ಫೋರ್: ಪೊವೆಲ್​ಗೆ ಪವರ್​ಫುಲ್ ಶತಕ ಜಸ್ಟ್​ ಮಿಸ್

ILT20: 20ನೇ ಓವರ್​ನ ಅಂತಿಮ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಲು ಯತ್ನಿಸಿದ ಪೊವೆಲ್ ಕ್ಯಾಚ್ ಔಟಾದರು. ಇದರೊಂದಿಗೆ ಕೇವಲ 3 ರನ್​ಗಳಿಂದ ಶತಕ ವಂಚಿತರಾದರು.

TV9 Web
| Edited By: |

Updated on: Jan 22, 2023 | 10:31 PM

Share
ದುಬೈ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆದ ILT20 ಲೀಗ್​ನಲ್ಲಿ ವೆಸ್ಟ್ ಇಂಡೀಸ್ ದಾಂಡಿಗ ರೋವ್​ಮನ್ ಪೊವೆಲ್ ಸಿಕ್ಸ್​ಗಳ ಸುರಿಮಳೆಗೈದಿದ್ದಾರೆ. ಈ ಲೀಗ್​ನ 13ನೇ ಪಂದ್ಯದಲ್ಲಿ ದುಬೈ ಕ್ಯಾಪಿಟಲ್ಸ್ ಹಾಗೂ ಎಂಐ ಎಮಿರೇಟ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಎಮಿರೇಟ್ಸ್​ ನಾಯಕ ಕೀರನ್ ಪೊಲಾರ್ಡ್ ಬೌಲಿಂಗ್ ಆಯ್ದುಕೊಂಡಿದ್ದರು.

1 / 5
ಅದರಂತೆ ದುಬೈ ಕ್ಯಾಪಿಟಲ್ಸ್ ಪರ ರಾಬಿನ್ ಉತ್ತಪ್ಪ ಹಾಗೂ ಜೋ ರೂಟ್ ಇನಿಂಗ್ಸ್ ಆರಂಭಿಸಿದರು. ಆದರೆ ಕೇವಲ 26 ರನ್​ಗಳಿಸಿ ಉತ್ತಪ್ಪ ಹೊರನಡೆದರು. ಈ ವೇಳೆ ಕಣಕ್ಕಿಳಿದ ರೋವ್​ಮನ್ ಪೊವೆಲ್ ಬಿರುಸಿನ ಬ್ಯಾಟಿಂಗ್​ ಮೂಲಕ ಗಮನ ಸೆಳೆದರು.

2 / 5
ಆಕ್ರಮಣಕಾರಿ ಹೊಡೆತಗಳೊಂದಿಗೆ ಅಬ್ಬರಿಸಿದ ಪೊವೆಲ್ ಎಮಿರೇಟ್ಸ್​ ಬೌಲರ್​ಗಳನ್ನು ಹಿಗ್ಗಾಮುಗ್ಗಾ ದಂಡಿಸಿದರು. ಪರಿಣಾಮ 12ನೇ ಓವರ್​ನಲ್ಲಿ ತಂಡದ ಮೊತ್ತವು 100ರ ಗಡಿದಾಟಿತು. ಇದರ ನಡುವೆ 34 ಎಸೆತಗಳಲ್ಲಿ ರೂಟ್ ಅರ್ಧಶತಕ ಪೂರೈಸಿದರು. ಮತ್ತೊಂದೆಡೆ ಸಿಡಿಲಬ್ಬರ ಮುಂದುವರೆಸಿದ ಪೊವೆಲ್ ಕೇವಲ 22 ಎಸೆತಗಳಲ್ಲಿ ಹಾಫ್​ ಸೆಂಚುರಿ ಸಿಡಿಸಿದರು.

3 / 5
ಅರ್ಧಶತಕದ ಬಳಿಕ ಪೊವೆಲ್ ಸಿಕ್ಸ್​ಗಳ ಸುರಿಮಳೆಗೈದರು. ಪರಿಣಾಮ 16 ಓವರ್​ ಮುಕ್ತಾಯದ ವೇಳೆಗೆ ತಂಡದ ಮೊತ್ತ 170ರ ಗಡಿದಾಟಿತು. ಅಂದರೆ ಪೊವೆಲ್​ ಪವರ್​ನೊಂದಿಗೆ ಕೇವಲ ಐದು ಓವರ್​ಗಳಲ್ಲಿ ದುಬೈ ಕ್ಯಾಪಿಟಲ್ಸ್ ತಂಡವು 70 ರನ್​ ಕಲೆಹಾಕಿತ್ತು.

4 / 5
20ನೇ ಓವರ್​ನ ಅಂತಿಮ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಲು ಯತ್ನಿಸಿದ ಪೊವೆಲ್ ಕ್ಯಾಚ್ ಔಟಾದರು. ಇದರೊಂದಿಗೆ ಕೇವಲ 3 ರನ್​ಗಳಿಂದ ಶತಕ ವಂಚಿತರಾದರು. ಇದಾಗ್ಯೂ 41 ಎಸೆತಗಳಲ್ಲಿ 10 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ನೊಂದಿಗೆ ರೋವ್​ಮನ್ 97 ರನ್ ಬಾರಿಸಿ ದುಬೈ ಕ್ಯಾಪಿಟಲ್ಸ್ ತಂಡದ ಮೊತ್ತವನ್ನು 3 ವಿಕೆಟ್ ನಷ್ಟಕ್ಕೆ 222 ಕ್ಕೆ ತಂದು ನಿಲ್ಲಿಸಿದರು.

5 / 5
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ