Happy Birthday MS Dhoni: ಬರ್ತ್​ಡೇ ಬಾಯ್ ಧೋನಿ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ 8 ಪ್ರಮುಖ ಸಂಗತಿಗಳು

Happy Birthday MS Dhoni: 2001ರಲ್ಲಿ ಭಾರತೀಯ ರೈಲ್ವೇಯಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಸಿಕ್ಕಿತು. ಎರಡು ವರ್ಷಗಳ ಕಾಲ ದುಡಿದು ಕುಟುಂಬವನ್ನು ಆರ್ಥಿಕವಾಗಿ ಪೋಷಿಸಿದ ನಂತರ 2003ರಲ್ಲಿ ಕೆಲಸ ಬಿಟ್ಟು ಮತ್ತೆ ಕ್ರಿಕೆಟ್ ಆಡಲು ಆರಂಭಿಸಿದರು.

TV9 Web
| Updated By: ಪೃಥ್ವಿಶಂಕರ

Updated on: Jul 07, 2022 | 3:57 PM

ಇಂದು ಕ್ಯಾಪ್ಟನ್ ಕುಲ್ ಅವರ ಜನ್ಮದಿನ, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಅನೇಕ ದಾಖಲೆಗಳನ್ನು ಮುರಿದಿದೆ. ಭಾರತವು T20 ವಿಶ್ವಕಪ್ 2007 ಮತ್ತು ODI ವಿಶ್ವಕಪ್ 2011 ಅನ್ನು ಗೆದ್ದಿದೆ. ಜೊತೆಗೆ ಭಾರತ 2013 ರಲ್ಲಿ ಮಹೀ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದೆ.

1 / 8
ಮಹೇಂದ್ರ ಸಿಂಗ್ ಧೋನಿ ಮೊದಲು ಬಿಹಾರದಲ್ಲಿ ನಡೆದ ರಣಜಿ ಟ್ರೋಫಿಯಲ್ಲಿ ಆಡಿದ್ದರು. ಈ ನಡುವೆ 2001ರಲ್ಲಿ ಭಾರತೀಯ ರೈಲ್ವೇಯಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಸಿಕ್ಕಿತು. ಎರಡು ವರ್ಷಗಳ ಕಾಲ ದುಡಿದು ಕುಟುಂಬವನ್ನು ಆರ್ಥಿಕವಾಗಿ ಪೋಷಿಸಿದ ನಂತರ 2003ರಲ್ಲಿ ಕೆಲಸ ಬಿಟ್ಟು ಮತ್ತೆ ಕ್ರಿಕೆಟ್ ಆಡಲು ಆರಂಭಿಸಿದರು.

2 / 8
Happy Birthday MS Dhoni: ಬರ್ತ್​ಡೇ ಬಾಯ್ ಧೋನಿ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ 8 ಪ್ರಮುಖ ಸಂಗತಿಗಳು

2007 ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡವು ಮೊದಲ T20 ವಿಶ್ವಕಪ್ ಅನ್ನು ಗೆದ್ದುಕೊಂಡಿತು. ಈ ವರ್ಷ, ಹಲವಾರು ಹಿರಿಯ ಆಟಗಾರರನ್ನು ಬಿಟ್ಟು ಧೋನಿಗೆ ತಂಡದ ಅಧಿಕಾರವನ್ನು ನೀಡಲಾಯಿತು. ನಾಯಕನಾಗಲು ನಿರ್ಧರಿಸಿದಾಗ ನಾನು ಸಭೆಗೆ ಹಾಜರಾಗಿರಲಿಲ್ಲ ಎಂದು ಸ್ವತಃ ಧೋನಿಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆದರೆ ಸಚಿನ್ ಸಲಹೆ ಮೇರೆಗೆ ಧೋನಿ ನಾಯಕರಾದದ್ದನ್ನು ಸಹ ಒಪ್ಪಿಕೊಂಡಿದ್ದಾರೆ.

3 / 8
Happy Birthday MS Dhoni: ಬರ್ತ್​ಡೇ ಬಾಯ್ ಧೋನಿ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ 8 ಪ್ರಮುಖ ಸಂಗತಿಗಳು

ಭಾರತೀಯ ಸೇನೆಯು ಮಹೇಂದ್ರ ಸಿಂಗ್ ಧೋನಿ ಅವರನ್ನು ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಿ ಗೌರವಿಸಿದೆ. ಕಪಿಲ್ ದೇವ್ ನಂತರ ಈ ಗೌರವ ಪಡೆದ ಎರಡನೇ ಕ್ರಿಕೆಟಿಗ ಧೋನಿ. ಜೊತೆಗೆ ಮಹೀ 538 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 195 ಸ್ಟಂಪಿಂಗ್‌ಗಳೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸ್ಟಂಪಿಂಗ್‌ಗಳ ದಾಖಲೆಯನ್ನು ಹೊಂದಿದ್ದಾರೆ.

4 / 8
Happy Birthday MS Dhoni: ಬರ್ತ್​ಡೇ ಬಾಯ್ ಧೋನಿ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ 8 ಪ್ರಮುಖ ಸಂಗತಿಗಳು

ಮಹೇಂದ್ರ ಸಿಂಗ್ ಧೋನಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಉದ್ದನೆಯ ತಲೆ ಕೂದಲನ್ನು ಹೊಂದಿದ್ದರು. ಇದಕ್ಕೆ ಕಾರಣ ಧೋನಿಗೆ, ಬಾಲಿವುಡ್ ಸ್ಟಾರ್ ನಟ ಜಾನ್ ಅಬ್ರಹಾಂ ಎಂದರೆ ಅಚ್ಚುಮೆಚ್ಚು. ಹೀಗಾಗಿ ಉದ್ದ ಕೂದಲು ಬಿಟ್ಟಿದ್ದಾಗಿ ಕ್ಯಾಪ್ಟನ್ ಕೂಲ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

5 / 8
Happy Birthday MS Dhoni: ಬರ್ತ್​ಡೇ ಬಾಯ್ ಧೋನಿ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ 8 ಪ್ರಮುಖ ಸಂಗತಿಗಳು

ಧೋನಿ ಬಿಳಿ ಜರ್ಸಿಯಲ್ಲಿ ಹಲವಾರು ದಾಖಲೆಗಳನ್ನು ಮುರಿದಿದ್ದಾರೆ, ಅದರಲ್ಲಿ ಒಂದು ಭಾರತವನ್ನು 2009 ರಲ್ಲಿ ನಂಬರ್ ಒನ್ ಟೆಸ್ಟ್ ತಂಡವನ್ನಾಗಿ ಮಾಡುವುದು. ಶ್ರೀಲಂಕಾವನ್ನು ಸೋಲಿಸಿದ ನಂತರ, ಧೋನಿ ತಂಡವು ನವೆಂಬರ್ 2009 ರಲ್ಲಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿತ್ತು, ನಂತರ 21 ತಿಂಗಳವರೆಗೆ, ಆಗಸ್ಟ್ 2011 ರವರೆಗೆ, ಭಾರತ ತಂಡ ಟೆಸ್ಟ್‌ನಲ್ಲಿ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡಿತ್ತು.

6 / 8
Happy Birthday MS Dhoni: ಬರ್ತ್​ಡೇ ಬಾಯ್ ಧೋನಿ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ 8 ಪ್ರಮುಖ ಸಂಗತಿಗಳು

ಧೋನಿ ಮೈದಾನದಲ್ಲಿ ಹಲವು ಬೌಲರ್‌ಗಳ ಬೆವರು ಸುರಿಸಿದ್ದರು. ಮಹಿ ಅವರ ಹೆಲಿಕಾಪ್ಟರ್ ಶಾರ್ಟ್ ಹೆಚ್ಚು ಚರ್ಚೆಯಾಗಿತ್ತು. ಧೋನಿ ಈ ರೀತಿಯಾಗಿ ಸಿಕ್ಸರ್ ಬಾರಿಸುವುದನ್ನು ರಾಂಚಿಯ ತಮ್ಮ ಸ್ನೇಹಿತ ಸಂತೋಷ್ ಲಾಲ್ ಅವರಿಂದ ಕಲಿತುಕೊಂಡಿದ್ದರು. ಇದು ನಂತರ ಅವರ ಟ್ರೇಡ್‌ಮಾರ್ಕ್ ಆಯಿತು.

7 / 8
Happy Birthday MS Dhoni: ಬರ್ತ್​ಡೇ ಬಾಯ್ ಧೋನಿ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ 8 ಪ್ರಮುಖ ಸಂಗತಿಗಳು

ಮೈದಾನದಲ್ಲಿ ವಿದಾಯ ಪಂದ್ಯ ಆಡುವ ಅವಕಾಶ ಧೋನಿಗೆ ಸಿಗಲಿಲ್ಲ. ಮಹೀ 2014 ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. 15 ಆಗಸ್ಟ್ 2020 ರಂದು ಅವರು T20 ಮತ್ತು ODI ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಮಹಿ ಅವರ ಈ ನಿರ್ಧಾರ ಅವರ ಅಭಿಮಾನಿಗಳಿಗೂ ಬೇಸರ ತಂದಿತು.

8 / 8
Follow us