MS Dhoni: ಆರ್ಮಿ ಬಳಿಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡ್ರ ಧೋನಿ? ಫೋಟೋ ನೋಡಿ

| Updated By: ಪೃಥ್ವಿಶಂಕರ

Updated on: Sep 11, 2022 | 6:30 PM

MS Dhoni: ಧೋನಿಗೆ ಭಾರತೀಯ ಸೈನ್ಯದ ಪ್ಯಾರಾ ಫೋರ್ಸ್‌ನಲ್ಲಿ ಲೆಫ್ಟಿನೆಂಟ್ ಕರ್ನಲ್ ಪ್ರಮಾಣಿತ ಶ್ರೇಣಿಯನ್ನು ನೀಡಲಾಗಿದೆ.

1 / 5
ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಅಖಾಡದಿಂದ ದೂರವಿರಬಹುದು ಆದರೆ ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಚರ್ಚೆಯಾಗುತ್ತಿದೆ. ಈ ಬಾರಿ ಧೋನಿ ಹೊಸ ಲುಕ್‌ನಿಂದ ಟ್ರೆಂಡಿಂಗ್ ಆಗಿದ್ದು ಅವರ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ.

2 / 5
ವೈರಲ್ ಆಗುತ್ತಿರುವ ಧೋನಿ ಫೋಟೋದಲ್ಲಿ, ಅವರು ಟ್ರಾಫಿಕ್ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದಾರೆ. ಬಿಳಿ ಅಂಗಿಯಲ್ಲಿ ಧೋನಿ ಕಾಣಿಸಿಕೊಂಡಿದ್ದು, ಅವರ ಭುಜಗಳ ಮೇಲೆ ಸ್ಟಾರ್​ಗಳನ್ನು ಕಾಣಬಹುದಾಗಿದೆ.

3 / 5
ಈಗ ಧೋನಿಯವರ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮಹಿ ಯಾವಾಗ ಪೊಲೀಸ್ ಆದರು ಎಂಬ ಪ್ರಶ್ನೆಯನ್ನು ಮುಂದಿಡುತ್ತಿದ್ದಾರೆ. ಆದರೆ ಈ ಫೋಟೋದ ಹಿಂದಿನ ಕಹಾನಿ ಏನೆಂದರೆ, ಧೋನಿ ಒಂದು ಜಾಹೀರಾತು ಶೂಟ್‌ಗಾಗಿ ಪೊಲೀಸ್ ವೇಶದಲ್ಲಿ ಕಾಣಿಸಿಕೊಂಡಿದ್ದಾರೆ.

4 / 5
ಎಂಎಸ್ ಧೋನಿ- ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾಕ್ಕೆ ಗೆಲ್ಲಿಸಿಕೊಟ್ಟಿರುವ ಐಸಿಸಿ ಪ್ರಶಸ್ತಿಗಳನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಇಂತಹ ಧೋನಿ, ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ನೇಮಕಗೊಂಡಿದ್ದಾರೆ.

5 / 5
ಧೋನಿ 2020 ರಲ್ಲಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು. ಅಂದಿನಿಂದ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಆಡುತ್ತಿದ್ದಾರೆ. ಕಳೆದ ವರ್ಷ ಐಪಿಎಲ್ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಆದಾಗ್ಯೂ ಸೀಸನ್​ ಮಧ್ಯದಲ್ಲಿ, ಅವರು ಮತ್ತೊಮ್ಮೆ ನಾಯಕತ್ವವಹಿಸಿಕೊಳ್ಳಬೇಕಾಯಿತು. ವರದಿಗಳ ಪ್ರಕಾರ ಧೋನಿ 2023 ರ ಆವೃತ್ತಿಯಲ್ಲೂ ಸಿಎಸ್​ಕೆ ತಂಡದ ನಾಯಕತ್ವವಹಿಸಿಕೊಳ್ಳಲಿದ್ದಾರೆ.

Published On - 6:30 pm, Sun, 11 September 22