- Kannada News Photo gallery Cricket photos MS Dhoni fails to hit a six in the last ball: Watch the exciting photo of CSK vs RR IPL 2023 match Kannada News
CSK vs RR, IPL 2023: ಕೊನೆಯ ಬಾಲ್ನಲ್ಲಿ ಸಿಕ್ಸ್ ಸಿಡಿಸಲು ಧೋನಿ ವಿಫಲ: ಚೆನ್ನೈ-ಆರ್ಆರ್ ಪಂದ್ಯದ ರೋಚಕ ಫೋಟೋ ನೋಡಿ
Chennai vs Rajastan: ಸಂದೀಪ್ ಶರ್ಮಾ ಅವರ ಮೊದಲ ಎರಡು ಬಾಲ್ ವೈಡ್ ಆಯಿತು. ನಂತರದ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ದ್ವಿತೀಯ ಎಸೆತದಲ್ಲಿ ಧೋನಿ ಸಿಕ್ಸರ್ ಸಿಡಿಸಿದರು. 3ನೇ ಎಸೆತದಲ್ಲೂ ಮತ್ತೊಂದು ಸಿಕ್ಸ್ ಬಾರಿಸಿ ಪಂದ್ಯವನ್ನು ಮತ್ತಷ್ಟು ರೋಚಕತೆ ಸೃಷ್ಟಿಸಿದರು.
Updated on:Apr 13, 2023 | 7:38 AM

ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ಬುಧವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 3 ರನ್ಗಳ ರೋಚಕ ಜಯ ಸಾಧಿಸಿತು.

ಕೊನೆಯ 20ನೇ ಓವರ್ನಲ್ಲಿ ಸಿಎಸ್ಕೆ ಗೆಲುವಿಗೆ 21 ರನ್ಗಳ ಅವಶ್ಯಕತೆಯಿತ್ತು. ಆರ್ಆರ್ ಪರ ಸಂದೀಶ್ ಶರ್ಮಾ ಬೌಲರ್ ಆಗಿದ್ದರು. ಕ್ರೀಸ್ನಲ್ಲಿ ಫಿನಿಶರ್ ಖ್ಯಾತಿಯ ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ಇದ್ದರು.

ಸಂದೀಪ್ ಅವರ ಮೊದಲ ಎರಡು ಬಾಲ್ ವೈಡ್ ಆಯಿತು. ನಂತರದ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ದ್ವಿತೀಯ ಎಸೆತದಲ್ಲಿ ಧೋನಿ ಸಿಕ್ಸರ್ ಸಿಡಿಸಿದರು. ಮೂರನೇ ಎಸೆತದಲ್ಲೂ ಮತ್ತೊಂದು ಸಿಕ್ಸ್ ಬಾರಿಸಿ ಪಂದ್ಯವನ್ನು ಮತ್ತಷ್ಟು ರೋಚಕತೆ ಸೃಷ್ಟಿಸಿದರು.

ಕೊನೆಯ 3 ಬಾಲ್ನಲ್ಲಿ 7 ರನ್ಗಳು ಬೇಕಾಗಿದ್ದವು. 4ನೇ ಎಸೆತ ಮತ್ತು 5ನೇ ಎಸೆತದಲ್ಲಿ ತಲಾ ಒಂದೊಂದು ರನ್ ಬಂತಷ್ಟೆ. ಕೊನೆಯ ಎಸೆತದಲ್ಲಿ 5 ರನ್ ಬೇಕಿದ್ದಾಗ ಸಂದೀಪ್ ಅದ್ಭುತ ಯಾರ್ಕರ್ ಮೂಲಕ ಧೋನಿ ಸಿಕ್ಸ್ ಸಿಡಿಸುವುದನ್ನು ತಡೆದರು.

ಚೆನ್ನೈ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಸೋಲು ಕಂಡಿತು. ಧೋನಿ (ಅಜೇಯ 32)-ಜಡ್ಡು (ಅಜೇಯ 25) ಬರುವುದಕ್ಕೂ ಮುನ್ನ ಸಿಎಸ್ಕೆ ಪರ ಡೆವೋನ್ ಕಾನ್ವೇ 50 ಹಾಗೂ ಅಜಿಂಕ್ಯಾ ರಹಾನೆ 31 ರನ್ಗಳ ಕೊಡುಗೆ ನೀಡಿದ್ದರು.

ಚೆನ್ನೈ ಸೂಪರ್ ಕಿಂಗ್ಸ್ ಮಧ್ಯಮ ಓವರ್ನಲ್ಲಿ ಕೊಂಚ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದರಿಂದ ಜಯ ಕೈತಪ್ಪಿತು. ರಾಜಸ್ಥಾನ್ ಪರ ಅಶ್ವಿನ್ ಹಾಗೂ ಚಹಲ್ 2 ವಿಕೆಟ್ ಪಡೆದರೆ, ಸಂದೀಪ್ ಶರ್ಮಾ ಹಾಗೂ ಝಂಪಾ ತಲಾ 1 ವಿಕೆಟ್ ಕಿತ್ತರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿತು. ಜೋಸ್ ಬಟ್ಲರ್ 52 ರನ್, ದೇವದತ್ ಪಡಿಕ್ಕಲ್ 38, ಆರ್. ಅಶ್ವಿನ್ ಹಾಗೂ ಹೆಟ್ಮೇರ್ ತಲಾ 30 ರನ್ ಸಿಡಿಸಿದರು.

ಸಿಎಸ್ಕೆ ಪರ ಆಕಾಶ್ ಸಿಂಗ್, ತುಷಾರ್ ದೇಶ್ಪಾಂಡೆ ಹಾಗೂ ರವೀಂದ್ರ ಜಡೇಜಾ 2 ವಿಕೆಟ್ ಪಡೆದರು.
Published On - 7:38 am, Thu, 13 April 23
