- Kannada News Photo gallery Cricket photos Mumbai Indians Big shock for Hardik Pandya team Suryakumar Yadav still unfit
Suryakumar Yadav: ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಕೆಟ್ಟ ಸುದ್ದಿ: ಮುಂಬೈ ಇಂಡಿಯನ್ಸ್ಗೆ ಬಿಗ್ ಶಾಕ್
IPL 2024, Mumbai Indians: ಐಪಿಎಲ್ 2024 ರಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಮುಂಬೈ ಇಂಡಿಯನ್ಸ್ಗೆ ಇದೀಗ ಮತ್ತೊಂದು ಆಘಾತ ಉಂಟಾಗಿದೆ. ತಂಡದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಮುಂದಿನ ಕೆಲ ಪಂದ್ಯಗಳಲ್ಲೂ ಆಡಲು ಸಾಧ್ಯವಾಗುವುದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.
Updated on: Mar 29, 2024 | 10:09 AM

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಐಪಿಎಲ್ 2024 ರಲ್ಲಿ ಕೆಟ್ಟ ಆರಂಭ ಪಡೆದುಕೊಂಡಿದೆ. ಟೂರ್ನಮೆಂಟ್ ಈಗಷ್ಟೇ ಆರಂಭಗೊಂಡಿದ್ದರೂ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ತಂಡ ಗುಜರಾತ್ ಟೈಟಾನ್ಸ್ ಮತ್ತು ಎಸ್ಆರ್ಹೆಚ್ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಸೋತಿದೆ.

ಈ ಸೋಲಿನ ಹಿನ್ನಡೆ ನಡುವೆ ಮುಂಬೈ ಇಂಡಿಯನ್ಸ್ಗೆ ಮತ್ತೊಂದು ಆಘಾತ ಉಂಟಾಗಿದೆ. ತಂಡದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಮುಂದಿನ ಕೆಲ ಪಂದ್ಯಗಳಲ್ಲೂ ಆಡಲು ಸಾಧ್ಯವಾಗುವುದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. ವಿಶ್ವದ ನಂಬರ್ ಒನ್ ಟಿ20 ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಸ್ಪೋರ್ಟ್ಸ್ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇದುವರೆಗೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ.

ಸೂರ್ಯ ಇನ್ನೂ ಸಂಪೂರ್ಣ ಫಿಟ್ ಆಗಿರದ ಕಾರಣ ಎನ್ಸಿಎನಿಂದ ಆಡಲು ಅನುಮತಿ ಪಡೆದಿಲ್ಲ. ಹೀಗಾಗಿ ಅವರು ಮುಂಬರುವ ಕೆಲವು ಐಪಿಎಲ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇವರ ಪುನರಾಗಮನ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸ್ವೀಕರಿಸಲಾಗಿದೆ.

ಆದಾಗ್ಯೂ, ಬಿಸಿಸಿಐ ಸೂರ್ಯಕುಮಾರ್ ಯಾದವ್ ವಿಚಾರದಲ್ಲಿ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಲು ಬಯಸುತ್ತಿಲ್ಲ. ಏಕೆಂದರೆ ಐಪಿಎಲ್ ನಂತರ ಟಿ20 ವಿಶ್ವಕಪ್ ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದ್ದು, ಅಲ್ಲಿ ಇವರ ಪಾತ್ರ ಪ್ರಮುಖವಾಗಿರುತ್ತದೆ. ಹೀಗಾಗಿ ಐಪಿಎಲ್ ಆಡಿಲ್ಲದಿದ್ದರೂ ವಿಶ್ವಕಪ್ಗೆ ಇವರು ಬೇಕು ಎಂಬ ನಿರ್ಧಾರದಲ್ಲಿದೆ ಬಿಸಿಸಿಐ.

ಸೂರ್ಯಕುಮಾರ್ ಯಾದವ್ ಅನುಪಸ್ಥಿತಿಯಲ್ಲಿ ಮುಂಬೈ ತಂಡ ಪಂಜಾಬ್ನ ಸ್ಫೋಟಕ ಬ್ಯಾಟರ್ ನಮನ್ ಧೀರ್ಗೆ ಅವಕಾಶ ನೀಡುತ್ತಿದೆ. ಈ ಬಲಗೈ ಬ್ಯಾಟ್ಸ್‌ಮನ್ ಇದುವರೆಗಿನ ಎರಡೂ ಪಂದ್ಯಗಳಲ್ಲಿ 50 ರನ್ ಗಳಿಸಿದ್ದಾರೆ. ಸೂರ್ಯಕುಮಾರ್ ಆದಷ್ಟು ಬೇಗ ಮರಳಲಿ ಎಂದು ಮುಂಬೈ ತಂಡ ಬಯಸುತ್ತದೆ. ಹಾರ್ದಿಕ್ ಪಡೆ ಸೋಮವಾರ ರಾಜಸ್ಥಾನ್ ರಾಯಲ್ಸ್ ಅನ್ನು ಎದುರಿಸಲಿದೆ.
