AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳೆಯ ವಿಶ್ವ ದಾಖಲೆ ಧೂಳೀಪಟ: ಸ್ಪೋಟಕ ದ್ವಿಶತಕ ಸಿಡಿಸಿದ ನ್ಯೂಝಿಲೆಂಡ್ ದಾಂಡಿಗ

Chad Bowes Record: ಲಿಸ್ಟ್ ಎ ಕ್ರಿಕೆಟ್​ನಲ್ಲಿ ಅತೀ ವೇಗದ ದ್ವಿಶತಕ ಸಿಡಿಸಿದ ವಿಶ್ವ ದಾಖಲೆ ತಮಿಳುನಾಡಿನ ಎನ್​ ಜಗದೀಸನ್ ಹಾಗೂ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಹೆಸರಿನಲ್ಲಿತ್ತು. ಜಗದೀಸನ್ 2022 ರಲ್ಲಿ ಅರುಣಾಚಲ ವಿರುದ್ಧ ಸ್ಪೋಟಕ ದ್ವಿಶತಕ ಸಿಡಿಸಿದರೆ, ಟ್ರಾವಿಸ್ ಹೆಡ್ 2021 ರಲ್ಲಿ ಕ್ವೀನ್​ಲ್ಯಾಂಡ್ ವಿರುದ್ಧದ ಬಿರುಸಿನ ಡಬಲ್ ಸೆಂಚುರಿ ಬಾರಿಸಿದ್ದರು. ಇದೀಗ ಈ ದಾಖಲೆಯನ್ನು ಚಾಡ್ ಬೋವ್ಸ್ ಮುರಿದಿದ್ದಾರೆ.

ಝಾಹಿರ್ ಯೂಸುಫ್
|

Updated on:Oct 23, 2024 | 10:17 AM

Share
ನ್ಯೂಝಿಲೆಂಡ್ ಕ್ರಿಕೆಟಿಗ ಚಾಡ್ ಬೋವ್ಸ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಸ್ಪೋಟಕ ದ್ವಿಶತಕ ಸಿಡಿಸುವ ಮೂಲಕ ಎಂಬುದು ವಿಶೇಷ. ಅಂದರೆ ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗವಾಗಿ ಡಬಲ್ ಸೆಂಚುರಿ ಸಿಡಿಸಿದ ವಿಶ್ವ ದಾಖಲೆ ಇದೀಗ ಚಾಡ್ ಬೋವ್ಸ್ ಪಾಲಾಗಿದೆ.

1 / 6
ನ್ಯೂಝಿಲೆಂಡ್​ನಲ್ಲಿ ನಡೆಯುತ್ತಿರುವ ಫೋರ್ಡ್ ಟ್ರೋಫಿ ಟೂರ್ನಿಯಲ್ಲಿ  ಬೋವ್ಸ್ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 50 ಓವರ್​ಗಳ ಈ ಪಂದ್ಯದಲ್ಲಿ ಕ್ಯಾಂಟರ್ಬರಿ ಮತ್ತು ಒಟಾಗೋ ತಂಡಗಳು ಮುಖಾಮುಖಿಯಾಗಿದ್ದವು. ಕ್ಯಾಂಟರ್ಬರಿ ಪರ ಆರಂಭಿಕನಾಗಿ ಕಣಕ್ಕಿಳಿದ ಚಾಡ್ ಬೋವ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು.

2 / 6
ಈ ಸಿಡಿಲಬ್ಬರದೊಂದಿಗೆ ಕೇವಲ 103 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗವಾಗಿ ಡಬಲ್ ಸೆಂಚುರಿ ಸಿಡಿಸಿದ ವಿಶ್ವ ದಾಖಲೆಯನ್ನು ಚಾಡ್ ಬೋವ್ಸ್ ತಮ್ಮದಾಗಿಸಿಕೊಂಡರು.

3 / 6
ಇದಕ್ಕೂ ಮುನ್ನ ಈ ದಾಖಲೆ ಭಾರತದ ಎನ್​ ಜಗದೀಸನ್ ಹಾಗೂ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಹೆಸರಿನಲ್ಲಿತ್ತು. ಈ ಇಬ್ಬರು ದಾಂಡಿಗರು ಲಿಸ್ಟ್ ಎ ಕ್ರಿಕೆಟ್​ನಲ್ಲಿ 114 ಎಸೆತಗಳಲ್ಲಿ ದ್ವಿಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಇದೀಗ ಈ ದಾಖಲೆ ಮುರಿಯುವಲ್ಲಿ ಚಾಡ್ ಬೋವ್ಸ್ ಯಶಸ್ವಿಯಾಗಿದ್ದಾರೆ.

4 / 6
ಇನ್ನು ಈ ಪಂದ್ಯದಲ್ಲಿ 110 ಎಸೆತಗಳನ್ನು ಎದುರಿಸಿದ ಚಾಡ್ ಬೋವ್ಸ್ 27 ಫೋರ್ ಹಾಗೂ 7 ಸಿಕ್​​ಗಳೊಂದಿಗೆ 205 ರನ್​ಗಳಿಸಿ ಔಟಾದರು. ವಿಶೇಷ ಎಂದರೆ ಬೋವ್ಸ್ ಔಟಾಗುವ ಮುನ್ನ ಕ್ಯಾಂಟರ್ಬರಿ ತಂಡದ ಸ್ಕೋರ್ ಸ್ಕೋರ್ 257 ಆಗಿತ್ತು. ಅಂದರೆ ಒಟ್ಟಾರೆ ತಂಡದ ಸ್ಕೋರ್​ನ ಬಹುಪಾಲು ರನ್​ಗಳು ಬೋವ್ಸ್ ಬ್ಯಾಟ್​ನಿಂದ ಮೂಡಿಬಂದಿದ್ದವು.

5 / 6
ಹಾಗೆಯೇ ಈ ದ್ವಿಶತಕದೊಂದಿಗೆ ನ್ಯೂಝಿಲೆಂಡ್ ಕ್ರಿಕೆಟ್ ಇತಿಹಾಸದಲ್ಲೇ ಸೀಮಿತ ಓವರ್​ಗಳ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಜೇಮಿ ಹೌ (2013 ಫೋರ್ಡ್ ಟ್ರೋಫಿ- 222 ರನ್ಸ್) ಮತ್ತು ಮಾರ್ಟಿನ್ ಗಪ್ಟಿಲ್ (2015 ಏಕದಿನ ವಿಶ್ವಕಪ್- 237* ರನ್ಸ್) ಮಾತ್ರ ಕಿವೀಸ್ ಪರ ಡಬಲ್ ಸೆಂಚುರಿ ಸಿಡಿಸಿದ್ದರು. ಇದೀಗ 205 ರನ್ ಸಿಡಿಸುವ  ನಂತರ ಚಾಡ್ ಬೋವ್ಸ್ ಈ ಸಾಧನೆ ಮಾಡಿದ ನ್ಯೂಝಿಲೆಂಡ್​ನ ಮೂರನೇ ದಾಂಡಿಗ ಎನಿಸಿಕೊಂಡಿದ್ದಾರೆ.

6 / 6

Published On - 10:17 am, Wed, 23 October 24

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು

20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..

ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ

ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!

ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?

ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?