ಹಳೆಯ ವಿಶ್ವ ದಾಖಲೆ ಧೂಳೀಪಟ: ಸ್ಪೋಟಕ ದ್ವಿಶತಕ ಸಿಡಿಸಿದ ನ್ಯೂಝಿಲೆಂಡ್ ದಾಂಡಿಗ
Chad Bowes Record: ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತೀ ವೇಗದ ದ್ವಿಶತಕ ಸಿಡಿಸಿದ ವಿಶ್ವ ದಾಖಲೆ ತಮಿಳುನಾಡಿನ ಎನ್ ಜಗದೀಸನ್ ಹಾಗೂ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಹೆಸರಿನಲ್ಲಿತ್ತು. ಜಗದೀಸನ್ 2022 ರಲ್ಲಿ ಅರುಣಾಚಲ ವಿರುದ್ಧ ಸ್ಪೋಟಕ ದ್ವಿಶತಕ ಸಿಡಿಸಿದರೆ, ಟ್ರಾವಿಸ್ ಹೆಡ್ 2021 ರಲ್ಲಿ ಕ್ವೀನ್ಲ್ಯಾಂಡ್ ವಿರುದ್ಧದ ಬಿರುಸಿನ ಡಬಲ್ ಸೆಂಚುರಿ ಬಾರಿಸಿದ್ದರು. ಇದೀಗ ಈ ದಾಖಲೆಯನ್ನು ಚಾಡ್ ಬೋವ್ಸ್ ಮುರಿದಿದ್ದಾರೆ.