- Kannada News Photo gallery Cricket photos Nicholas Pooran breaks Chris Gayle's All Time Six Hitting Record
ಪೂರನ್ ಸಿಕ್ಸರ್ಗೆ ಕ್ರಿಸ್ ಗೇಲ್ ವಿಶ್ವ ದಾಖಲೆಯೇ ಉಡೀಸ್..!
Nicholas Pooran - Chris Gayle: ಟಿ20 ಕ್ರಿಕೆಟ್ನ ಸಿಕ್ಸರ್ ಕಿಂಗ್ ಎನಿಸಿಕೊಂಡಿದ್ದ ಕ್ರಿಸ್ ಗೇಲ್ ಅವರ ಒಂದೊಂದೇ ದಾಖಲೆಗಳನ್ನು ನಿಕೋಲಸ್ ಪೂರನ್ ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಟಿ20 ವಿಶ್ವಕಪ್ನಲ್ಲಿ ವಿಂಡೀಸ್ ಪರ ಅತ್ಯಧಿಕ ಸಿಕ್ಸ್ ಸಿಡಿಸಿದ ಗೇಲ್ ದಾಖಲೆಯನ್ನು ಮುರಿದಿದ್ದ ಪೂರನ್ ಈ ಬಾರಿ ಯುನಿವರ್ಸ್ ಬಾಸ್ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನೇ ಅಳಿಸಿ ಹಾಕಿದ್ದಾರೆ.
Updated on: Sep 02, 2024 | 8:53 AM

ಕೆರಿಬಿಯನ್ ಪ್ರೀಮಿಯರ್ ಲೀಗ್ನ 3ನೇ ಪಂದ್ಯದಲ್ಲಿ ಎಡಗೈ ದಾಂಡಿಗ ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ವಿರುದ್ಧದ ಈ ಪಂದ್ಯದಲ್ಲಿ ಟ್ರಿನ್ಬಾಗೊ ನೈಟ್ ರೈಡರ್ಸ್ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪೂರನ್ 43 ಎಸೆತಗಳಲ್ಲಿ 97 ರನ್ ಚಚ್ಚಿದ್ದರು.

ಈ 97 ರನ್ಗಳಲ್ಲಿ ನಿಕೋಲಸ್ ಪೂರನ್ ಬ್ಯಾಟ್ನಿಂದ ಮೂಡಿಬಂದ ಸಿಕ್ಸ್ಗಳ ಸಂಖ್ಯೆ 9. ಈ ಒಂಭತ್ತು ಸಿಕ್ಸ್ಗಳೊಂದಿಗೆ ವಿಂಡೀಸ್ ದಾಂಡಿಗ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ಸಾರ್ವಕಾಲಿಕ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಅದು ಸಹ ಈ ವರ್ಷ ಸಿಕ್ಸ್ಗಳ ಸುರಿಮಳೆಗೈಯ್ಯುವ ಮೂಲಕ ಎಂಬುದು ವಿಶೇಷ.

ಅಂದರೆ ವರ್ಷವೊಂದರಲ್ಲಿ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆ ಯುನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. 2015 ರಲ್ಲಿ ಗೇಲ್ ಒಟ್ಟು 135 ಸಿಕ್ಸ್ಗಳನ್ನು ಸಿಡಿಸುವ ಮೂಲಕ ಈ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ 9 ವರ್ಷಗಳ ಬಳಿಕ ಈ ದಾಖಲೆಯನ್ನು ಉಡೀಸ್ ಮಾಡುವಲ್ಲಿ ನಿಕೋಲಸ್ ಪೂರನ್ ಯಶಸ್ವಿಯಾಗಿದ್ದಾರೆ. 2024 ರಲ್ಲಿ ಪೂರನ್ ಒಟ್ಟು 139 ಸಿಕ್ಸ್ಗಳನ್ನು ಸಿಡಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಒಂದೇ ವರ್ಷ ಅತ್ಯಧಿಕ ಸಿಕ್ಸ್ ಬಾರಿಸಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಸದ್ಯ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಣಕ್ಕಿಳಿಯುತ್ತಿರುವ ಪೂರನ್ ಈ ವರ್ಷದೊಳಗೆ ಮತ್ತಷ್ಟು ಟಿ20 ಪಂದ್ಯಗಳನ್ನಾಡಲಿದ್ದಾರೆ. ಹೀಗಾಗಿ ಒಂದೇ ವರ್ಷ 150 ಸಿಕ್ಸ್ಗಳನ್ನು ಸಿಡಿಸಿದ ವಿಶ್ವದ ಏಕೈಕ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸುವ ಉತ್ತಮ ಅವಕಾಶ ಪೂರನ್ ಮುಂದಿದೆ. ಅದರಂತೆ ಸಿಕ್ಸ್ಗಳ ಮೂಲಕವೇ ವಿಂಡೀಸ್ ದಾಂಡಿಗ ಟಿ20 ಕ್ರಿಕೆಟ್ನಲ್ಲಿ ಹೊಸ ಚರಿತ್ರೆ ಸೃಷ್ಟಿಸಲಿದ್ದಾರಾ ಕಾದು ನೋಡಬೇಕಿದೆ.




