
ಏಕದಿನ ವಿಶ್ವಕಪ್ ಸೂಪರ್ ಲೀಗ್ನ ಹೊಸ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ಕೂಡ ಭಾರತ ತಂಡವೇ ಅಗ್ರಸ್ಥಾನ ಅಲಂಕರಿಸಿದೆ. ಮುಂಬರುವ ಏಕದಿನ ವಿಶ್ವಕಪ್ಗಾಗಿ ಈ ಶ್ರೇಯಾಂಕ ಪಟ್ಟಿ ಅನ್ವಯವಾಗಲಿದ್ದು, ಈ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ 8 ಸ್ಥಾನ ಪಡೆಯುವ ತಂಡಗಳು ಏಕದಿನ ವಿಶ್ವಕಪ್ 2023 ಕ್ಕೆ ನೇರ ಅರ್ಹತೆ ಪಡೆಯಲಿದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ ಎಂದರೆ ಆತಿಥೇಯ ರಾಷ್ಟ್ರವಾಗಿ ಭಾರತ ತಂಡವು ಈಗಾಗಲೇ 2023ರ ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ. ಇನ್ನು ಟೆಸ್ಟ್ ಆಡುವ 12 ದೇಶ ಹಾಗೂ ನೆದರ್ಲ್ಯಾಂಡ್ಸ್ ತಂಡವು ಏಕದಿನ ಸೂಪರ್ ಲೀಗ್ ಶ್ರೇಯಾಂಕ ಪಟ್ಟಿಯಲ್ಲಿದ್ದು, ಇದರಲ್ಲಿ ಟಾಪ್- 7 ನಲ್ಲಿ ಕಾಣಿಸಿಕೊಳ್ಳುವ ತಂಡಗಳಿಗೆ ವಿಶ್ವಕಪ್ಗೆ ನೇರ ಅರ್ಹತೆ ಸಿಗಲಿದೆ. ಇನ್ನುಳಿದ 5 ತಂಡಗಳು ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಳ್ಳಬೇಕಾಗುತ್ತದೆ.

ಇನ್ನು ಅರ್ಹತಾ ಸುತ್ತಿನಲ್ಲಿ 5 ಇತರೆ ತಂಡಗಳು ಕೂಡ ಸೇರ್ಪಡೆಯಾಗಲಿದೆ. ಅಂದರೆ ಏಕದಿನ ವಿಶ್ವಕಪ್ 2023 ರ ಅರ್ಹತಾ ಸುತ್ತಿನಲ್ಲಿ ಒಟ್ಟು 10 ತಂಡಗಳು ಇರಲಿದ್ದು, ಇದರಲ್ಲಿ 2 ತಂಡಗಳು ಭಾರತದಲ್ಲಿ ನಡೆಯಲಿರುವ ವಿಶ್ವಕಪ್ಗೆ ಆಯ್ಕೆಯಾಗಲಿದೆ. ಅಂದರೆ 2023 ರ ಏಕದಿನ ವಿಶ್ವಕಪ್ನಲ್ಲಿ ಒಟ್ಟು 10 ತಂಡಗಳು ಕಾಣಿಸಿಕೊಳ್ಳಲಿದೆ.

ಏಕದಿನ ವಿಶ್ವಕಪ್ ಸೂಪರ್ ಲೀಗ್ನ ಹೊಸ ಶ್ರೇಯಾಂಕ ಪಟ್ಟಿ ಹೀಗಿದೆ.

13- ನೆದರ್ಲ್ಯಾಂಡ್ಸ್- 25 ಅಂಕಗಳು

12- ಜಿಂಬಾಬ್ವೆ- 45 ಅಂಕಗಳು

11- ಸೌತ್ ಆಫ್ರಿಕಾ- 59 ಅಂಕಗಳು

10- ಶ್ರೀಲಂಕಾ- 62 ಅಂಕಗಳು

9-ಐರ್ಲೆಂಡ್- 68 ಅಂಕಗಳು

8- ವೆಸ್ಟ್ ಇಂಡೀಸ್- 88 ಅಂಕಗಳು

7- ಅಫ್ಘಾನಿಸ್ತಾನ್- 110 ಅಂಕಗಳು

6- ಪಾಕಿಸ್ತಾನ್- 120 ಅಂಕಗಳು

5- ಬಾಂಗ್ಲಾದೇಶ್- 120 ಅಂಕಗಳು

4- ನ್ಯೂಜಿಲೆಂಡ್- 120 ಅಂಕಗಳು

3- ಆಸ್ಟ್ರೇಲಿಯಾ- 120 ಅಂಕಗಳು

2- ಇಂಗ್ಲೆಂಡ್- 125 ಅಂಕಗಳು

1- ಭಾರತ - 129 ಅಂಕಗಳು ( ವಿಶ್ವಕಪ್ಗೆ ನೇರ ಅರ್ಹತೆ)