PAK vs NZ: ತವರು ನೆಲದಲ್ಲಿ ಪಾಕ್ ವಿರುದ್ಧ ದಾಖಲೆಯ ಶತಕ ಸಿಡಿಸಿದ ಕನ್ನಡಿಗ ರಚಿನ್ ರವೀಂದ್ರ..!

Rachin Ravindra Century: ಬೆಂಗಳೂರಿನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಆಲ್‌ರೌಂಡರ್ ರಚಿನ್ ರವೀಂದ್ರ ಶತಕ ಸಿಡಿಸಿ ಮಿಂಚಿದ್ದಾರೆ. ವಾಸ್ತವವಾಗಿ ಕರ್ನಾಟಕ ಮೂಲದ ರಚಿನ್ ರವೀಂದ್ರ ಕಿವೀಸ್ ತಂಡದ ಪರ ಚೊಚ್ಚಲ ವಿಶ್ವಕಪ್ ಪಂದ್ಯವನ್ನಾಡುತ್ತಿದ್ದು, ಈಗಾಗಲೇ ಈ ಟೂರ್ನಿಯಲ್ಲಿ ಮೂರು ಶತಕ ಸಿಡಿಸಿದ್ದಾರೆ.

ಪೃಥ್ವಿಶಂಕರ
|

Updated on: Nov 04, 2023 | 1:55 PM

ಬೆಂಗಳೂರಿನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಆಲ್‌ರೌಂಡರ್ ರಚಿನ್ ರವೀಂದ್ರ ಶತಕ ಸಿಡಿಸಿ ಮಿಂಚಿದ್ದಾರೆ.

1 / 7
ವಾಸ್ತವವಾಗಿ ಕರ್ನಾಟಕ ಮೂಲದ ರಚಿನ್ ರವೀಂದ್ರ ಕಿವೀಸ್ ತಂಡದ ಪರ ಚೊಚ್ಚಲ ವಿಶ್ವಕಪ್ ಪಂದ್ಯವನ್ನಾಡುತ್ತಿದ್ದು, ಈಗಾಗಲೇ ಈ ಟೂರ್ನಿಯಲ್ಲಿ ಮೂರು ಶತಕ ಸಿಡಿಸಿದ್ದಾರೆ.

2 / 7
ಇದರೊಂದಿಗೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ನ್ಯೂಜಿಲೆಂಡ್ ಪರ ಮೂರು ಶತಕಗಳನ್ನು ಸಿಡಿಸಿದ ಮೊದಲ ಕಿವೀ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಈ ಶತಕದೊಂದಿಗೆ ಈ ಟೂರ್ನಿಯಲ್ಲಿ ರವೀಂದ್ರ 500 ರನ್​ಗಳ ಗಡಿ ಕೂಡ ದಾಟಿದ್ದಾರೆ.

3 / 7
ತಮ್ಮ ಇನ್ನಿಂಗ್ಸ್​ನಲ್ಲಿ 94 ಎಸೆತಗಳನ್ನು ಎದುರಿಸಿದ ರಚಿನ್ ರವೀಂದ್ರ 15 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 108 ರನ್ ಕಲೆ ಹಾಕಿ ಮೊಹಮ್ಮದ್ ವಾಸಿಂ ಜೂನಿಯರ್​ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

4 / 7
ರಚಿನ್ ಔಟಾಗುವುದಕ್ಕೂ ಮೊದಲು ಡೆವೊನ್ ಕಾನ್ವೇ ಜೊತೆಗೆ ಆರಂಭಿಕ ವಿಕೆಟ್‌ಗೆ 68 ರನ್‌ಗಳ ಜೊತೆಯಾಟ ನಡೆಸಿದಲ್ಲದೆ, ಆ ನಂತರ ಎರಡನೇ ವಿಕೆಟ್‌ಗೆ ಕೇನ್ ವಿಲಿಯಮ್ಸನ್ ಜೊತೆ 150 ಪ್ಲಸ್ ಜೊತೆಯಾಟವನ್ನು ದಾಖಲಿಸಿದರು.

5 / 7
ಏತನ್ಮಧ್ಯೆ, ರವೀಂದ್ರ ಅವರು ಏಕದಿನ ವಿಶ್ವಕಪ್ ಈವೆಂಟ್‌ನಲ್ಲಿ 500 ರನ್ ಗಳಿಸಿದ ಮೂರನೇ ನ್ಯೂಜಿಲೆಂಡ್ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರು ವಿಲಿಯಮ್ಸನ್ (2019 ರಲ್ಲಿ 578 ರನ್) ಮತ್ತು ಮಾರ್ಟಿನ್ ಗಪ್ಟಿಲ್ (2015 ರಲ್ಲಿ 547 ರನ್) ನಂತರದ ಸ್ಥಾನದಲ್ಲಿದ್ದಾರೆ.

6 / 7
ಈ ಪಂದ್ಯದಲ್ಲಿ ಶತಕ ಸಿಡಿಸುವುದಕ್ಕೂ ಮುನ್ನ ರಚಿನ್ ರವೀಂದ್ರ ವಿಶ್ವಕಪ್​ನ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ್ದರೆ, ಆ ಬಳಿಕ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧವೂ ಶತಕ ಬಾರಿಸಿದ್ದರು.

7 / 7
Follow us