ಕೊನೆಯ ಟೆಸ್ಟ್ ಪಂದ್ಯದ ಬಳಿಕ ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿರುವ PCB ಪ್ರಧಾನ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ರಮೀಜ್ ರಾಜಾ, ಮುಖ್ಯ ಆಯ್ಕೆಗಾರ ಮೊಹಮ್ಮದ್ ವಾಸಿಮ್, ಬಾಬರ್ ಮತ್ತು ಸಕ್ಲೇನ್ ಭಾಗವಹಿಸಿದ್ದರು. ಇದರಲ್ಲಿ ಪಾಕ್ ಸೋಲಿಗೆ ಕಾರಣ ಏನು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ. "ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ತಂಡದ ಪ್ರತಿಯೊಂದು ಅಂಶ, ಆಯ್ಕೆ ವಿಷಯಗಳು, ನಾಯಕತ್ವ ಮತ್ತು ಸಕ್ಲೇನ್ ಪಾತ್ರದ ಬಗ್ಗೆ ಚರ್ಚಿಸಲಾಯಿತು" ಎಂದು ಮೂಲಗಳು ತಿಳಿಸಿವೆ.