AUS vs PAK: ಮತ್ತೊಮ್ಮೆ ಏಕಾಏಕಿ ಟಿ20 ತಂಡದ ನಾಯಕನನ್ನು ಬದಲಿಸಿದ ಪಾಕಿಸ್ತಾನ

Pakistan's Australia Tour: ಪಾಕಿಸ್ತಾನ ತಂಡ ಮತ್ತೊಮ್ಮೆ ತನ್ನ ಟಿ20 ತಂಡದ ನಾಯಕನನ್ನು ಬದಲಾಯಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಿಂದ ಮೊಹಮ್ಮದ್ ರಿಜ್ವಾನ್​ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಹೊಸ ಆಟಗಾರನಿಗೆ ಅವಕಾಶ ನೀಡಲಾಗಿದೆ. ಇವರಲ್ಲದೆ ವೇಗದ ಬೌಲರ್ ನಸೀಮ್ ಶಾ ಅವರನ್ನೂ ತಂಡದಿಂದ ಹೊರಹಾಕಲಾಗಿದೆ.

ಪೃಥ್ವಿಶಂಕರ
|

Updated on: Nov 18, 2024 | 3:34 PM

ಏಕದಿನ ಹಾಗೂ ಟಿ20 ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಪಾಕಿಸ್ತಾನ, ಈ ಪ್ರವಾಸದಲ್ಲಿ ಸಿಹಿ-ಕಹಿ ಅನುಭವ ಪಡೆದುಕೊಂಡಿದೆ. ಉಭಯ ತಂಡಗಳ ನಡುವೆ ನಡೆದ ಏಕದಿನ ಸರಣಿಯಲ್ಲಿ ಆತಿಥೇಯರನ್ನು ಮಣಿಸಿದ್ದ ರಿಜ್ವಾನ್ ಪಡೆ, ಟಿ20 ಸರಣಿಯನ್ನು ಗೆಲ್ಲುವಲ್ಲಿ ವಿಫಲವಾಗಿದೆ. ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದುಕೊಂಡಿರುವ ಆಸ್ಟ್ರೇಲಿಯಾ, ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿದೆ.

1 / 7
 ವಾಸ್ತವವಾಗಿ ಈ ಪ್ರವಾಸಕ್ಕೂ ಮುನ್ನ ಸೀಮಿತ ಓವರ್​ಗಳ ಮಾದರಿಗೆ ಅಂದರೆ ಏಕದಿನ ಹಾಗೂ ಟಿ20 ತಂಡಗಳಿಗೆ ನೂತನ ನಾಯಕನಾಗಿ ಮೊಹಮ್ಮದ್ ರಿಜ್ವಾನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಅವರ ನಾಯಕತ್ವದಲ್ಲಿ ತಂಡ ಏಕದಿನ ಸರಣಿಯನ್ನು ಗೆಲ್ಲುವಲ್ಲೂ ಯಶಸ್ವಿಯಾಗಿತ್ತು. ಆದರೆ ಟಿ20 ಸರಣಿಯಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಲು ರಿಜ್ವಾನ್​ಗೆ ಸಾಧ್ಯವಾಗಲಿಲ್ಲ.

2 / 7
ಅದರಲ್ಲೂ ಉಭಯ ತಂಡಗಳ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಪಾಕ್ ತಂಡ ಸೋಲಲು ನಾಯಕ ರಿಜ್ವಾನ್ ಆಡಿದ ಆಮೆಗತಿಯ ಬ್ಯಾಟಿಂಗ್​ಗೆ ಪ್ರಮುಖ ಕಾರಣ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಹೀಗಾಗಿ ನಾಯಕನ ವಿರುದ್ಧವೇ ಕಠಿಣ ನಿರ್ಧಾರ ತೆಗೆದುಕೊಂಡಿರುವ ಆಯ್ಕೆ ಮಂಡಳಿ, ಮೂರನೇ ಟಿ20 ಪಂದ್ಯದಿಂದ ರಿಜ್ವಾನ್​ ಅವರನ್ನು ಹೊರಗಿಟ್ಟಿರುವುದಲ್ಲದೆ, ನಾಯಕತ್ವದ ಜವಬ್ದಾರಿಯನ್ನು ಸಲ್ಮಾನ್ ಅಲಿ ಅಗಾ ಅವರಿಗೆ ನೀಡಿದೆ.

3 / 7
ಆಸ್ಟ್ರೇಲಿಯಾದಲ್ಲಿ ತಂಡವನ್ನು ಏಕದಿನ ಸರಣಿ ಗೆಲ್ಲುವಂತೆ ಮಾಡಿದ್ದ ರಿಜ್ವಾನ್ ವಿರುದ್ಧ ಈ ರೀತಿಯ ಕ್ರಮ ತೆಗೆದುಕೊಂಡಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಆದರೆ ಎರಡನೇ ಟಿ20ಯಲ್ಲಿ ರಿಜ್ವಾನ್ 26 ಎಸೆತಗಳಲ್ಲಿ ಕೇವಲ 16 ರನ್ ಗಳಿಸಿ ತಂಡದ ಸೋಲಿಗೆ ಪ್ರಮುಖ ಕಾರಣರಾಗಿದ್ದರು. ಹೀಗಾಗಿ ಅವರ ತಲೆದಂಡವಾಗಿದೆ ಎಂದು ಹೇಳಲಾಗುತ್ತಿದೆ.

4 / 7
ವಾಸ್ತವವಾಗಿ ಪಾಕ್ ತಂಡವನ್ನು ಆಯ್ಕೆ ಮಾಡುವಲ್ಲಿ ತಂಡದ ನಾಯಕನಾಗಲಿ ಅಥವಾ ಮುಖ್ಯ ಕೋಚ್ ಆಗಿ ತಲೆಹಾಕುವಂತಿಲ್ಲ. ತಂಡವನ್ನು ಅಯ್ಕೆ ಮಾಡುವ ಕೆಲಸ ಏನಿದ್ದರೂ, ಆಯ್ಕೆ ಮಂಡಳಿಗೆ ಮಾತ್ರ ಬಿಟ್ಟಿದ್ದು. ಹೀಗಾಗಿ ತಂಡದ ಜೊತೆಗೆ ಆಸ್ಟ್ರೇಲಿಯಾದಲ್ಲಿರುವ ಆಯ್ಕೆ ಮಂಡಳಿ ಸದಸ್ಯ ಅಸಾದ್ ಶಫೀಕ್, ಈ ಅಚ್ಚರಿಯ ನಿರ್ಧಾರವನ್ನು ತೆಗೆದುಕೊಂಡಿದ್ದು, ರಿಜ್ವಾನ್ ಜೊತೆಗೆ ವೇಗದ ಬೌಲರ್ ನಸೀಮ್ ಶಾ ಅವರನ್ನು ತಂಡದಿಂದ ಹೊರಹಾಕಿದ್ದಾರೆ.

5 / 7
ನಾಯಕ ರಿಜ್ವಾನ್ ಬದಲಿಗೆ ಯುವ ವಿಕೆಟ್ ಕೀಪರ್ ಹಸಿಬುಲ್ಲಾ ಖಾನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದ್ದರೆ, ನಸೀಮ್ ಶಾ ಬದಲಿಗೆ ಎಡಗೈ ವೇಗಿ ಜಹಾಂಡೆ ಖಾನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದಾಗ್ಯೂ ರಿಜ್ವಾನ್ ಸ್ಥಾನದಲ್ಲಿ ಆಯ್ಕೆಯಾಗಿದ್ದ ಹಸಿಬುಲ್ಲಾಗೆ ಬ್ಯಾಟಿಂಗ್​ನಲ್ಲಿ ಕೇವಲ 24 ರನ್ ಕಲೆಹಾಕಲಷ್ಟೇ ಶಕ್ತರಾದರು.

6 / 7
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿರುವ ಪಾಕಿಸ್ತಾನ ತಂಡ ಪೂರ್ಣ 20 ಓವರ್​ಗಳನ್ನು ಆಡಲು ಸಾಧ್ಯವಾಗದೆ 18.1 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 117 ರನ್ ಕಲೆಹಾಕಲಷ್ಟೇ ಶಕ್ತವಾಗಿದೆ. ತಂಡದ ಪರ ಮಾಜಿ ನಾಯಕ ಬಾಬರ್ ಆಝಂ 41 ರನ್​ಗಳ ಇನ್ನಿಂಗ್ಸ್ ಆಡಿದರೆ, ಹಸಿಬುಲ್ಲಾ 24 ರನ್​ಗಳ ಕಾಣಿಕೆ ನೀಡಿದರು.

7 / 7
Follow us