IPL 2025: RCB ಟಾರ್ಗೆಟ್ ಲಿಸ್ಟ್​ನಲ್ಲಿ ಇಬ್ಬರು ಮಾಜಿ ಆಟಗಾರರು

IPL 2025 RCB: ಐಪಿಎಲ್ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ನಡೆಯಲಿದೆ. ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯಲಿರುವ ಈ ಹರಾಜಿನ ಮೂಲಕ ಆರ್​ಸಿಬಿ ಫ್ರಾಂಚೈಸಿಯು ತನ್ನಿಬ್ಬರ ಹಳೆಯ ಆಟಗಾರರನ್ನು ಟಾರ್ಗೆಟ್ ಮಾಡಲಿದೆ. ಈ ಆಟಗಾರರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಝಾಹಿರ್ ಯೂಸುಫ್
|

Updated on: Nov 18, 2024 | 12:09 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಮೆಗಾ ಹರಾಜಿಗಾಗಿ ದಿನಗಣನೆ ಶುರುವಾಗಿದೆ. ಈ ದಿನಗಣನೆಯ ನಡುವೆ ಎಲ್ಲಾ ಫ್ರಾಂಚೈಸಿಗಳು ಹರಾಜಿಗಾಗಿ ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದೆ. ಈ ಪ್ಲ್ಯಾನ್​ನೊಂದಿಗೆ ಹರಾಜಿನಲ್ಲಿ ಖರೀದಿಸಬೇಕಾದ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುತ್ತಿದೆ. ಅದರಂತೆ ಆರ್​ಸಿಬಿ ಫ್ರಾಂಚೈಸಿ ರೂಪಿಸಿರುವ ಟಾರ್ಗೆಟ್ ಲಿಸ್ಟ್​ನಲ್ಲಿ ಇಬ್ಬರು ಮಾಜಿ ಆಟಗಾರರ ಹೆಸರು ಕಾಣಿಸಿಕೊಂಡಿದೆ.

1 / 6
ಆರ್​ಸಿಬಿ ಮೂಲಗಳ ಮಾಹಿತಿ ಪ್ರಕಾರ, ಮುಂಬರುವ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೆಎಲ್ ರಾಹುಲ್ ಅವರ ಖರೀದಿಗೆ ಮುಂದಾಗಲಿದೆ. ದ್ವಿತೀಯ ಸುತ್ತಿನ ಹರಾಜು ಪಟ್ಟಿಯಲ್ಲಿರುವ ರಾಹುಲ್ ಅವರ ಮೂಲ ಬೆಲೆ 2 ಕೋಟಿ ರೂ. ಹೀಗಾಗಿ ಆರ್​ಸಿಬಿ ಫ್ರಾಂಚೈಸಿ ಅವರ ಖರೀದಿಗೆ ಕನಿಷ್ಠ 10 ಕೋಟಿಯನ್ನಾದರೂ ಮೀಸಲಿಡಲಿದೆ.

2 / 6
ಏಕೆಂದರೆ ಕೆಎಲ್ ರಾಹುಲ್ ಅವರ ಖರೀದಿಯಿಂದ ಆರ್​ಸಿಬಿ ವಿಕೆಟ್ ಕೀಪರ್ ಹಾಗೂ ನಾಯಕನ ಸ್ಥಾನಗಳನ್ನು ತುಂಬಿಕೊಳ್ಳಬಹುದು. ಅಲ್ಲದೆ ಕನ್ನಡಿಗ ಖರೀದಿಯಿಂದ ತವರಿನ ಪ್ರೇಕ್ಷಕರ ಮನಗೆಲ್ಲುವಲ್ಲಿಯೂ ಯಶಸ್ವಿಯಾಗಬಹುದು. ಈ ಎಲ್ಲಾ ಕಾರಣಗಳಿಂದಾಗಿ ಕೆಎಲ್ ರಾಹುಲ್ ಅವರ ಖರೀದಿಗೆ ಆರ್​ಸಿಬಿ ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದೆ.

3 / 6
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎರಡನೇ ಟಾರ್ಗೆಟ್ ಯುಜ್ವೇಂದ್ರ ಚಹಲ್. ಆರ್​ಸಿಬಿ ಪರ 8 ಸೀಸನ್​ ಆಡಿದ್ದ ಚಹಲ್ ಅವರನ್ನು 2022 ರಲ್ಲಿ ಕೈ ಬಿಡಲಾಗಿತ್ತು. ಇದೀಗ ಮತ್ತೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿರುವ ಸ್ಪಿನ್ ಮೋಡಿಗಾರನ ಖರೀದಿಗೆ ಆರ್​ಸಿಬಿ ಆಸಕ್ತಿ ಹೊಂದಿದೆ. ಹೀಗಾಗಿ ಮೆಗಾ ಹರಾಜಿನಲ್ಲಿ ಚಹಲ್​ಗಾಗಿ ಆರ್​ಸಿಬಿ ಭರ್ಜರಿ ಪೈಪೋಟಿ ನಡೆಸಲಿದೆ.

4 / 6
ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಯುಜ್ವೇಂದ್ರ ಚಹಲ್ ಹೆಸರಿನಲ್ಲಿದೆ. 2014 ರಿಂದ 2021 ರವರೆಗೆ ಆರ್​ಸಿಬಿ ಪರ 113 ಪಂದ್ಯಗಳನ್ನಾಡಿರುವ ಚಹಲ್ ಒಟ್ಟು 139 ವಿಕೆಟ್ ಕಬಳಿಸಿದ್ದಾರೆ. ಇತ್ತ ಆರ್​ಸಿಬಿ ಕೋಚ್ ಆ್ಯಂಡ್ರಿ ಫ್ಲವರ್​ ಕೂಡ ವಿಕೆಟ್ ಟೇಕರ್​ ಬೌಲರ್​ಗಳನ್ನು ಟಾರ್ಗೆಟ್ ಮಾಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಚಹಲ್​ ಖರೀದಿಗಾಗಿ ಆರ್​ಸಿಬಿ ಹೆಚ್ಚಿನ ಆಸಕ್ತಿವಹಿಸಲಿದೆ.

5 / 6
ಅದರಂತೆ ಮುಂಬರುವ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಇಬ್ಬರು ಮಾಜಿ ಆಟಗಾರರ ಖರೀದಿಗಾಗಿ ಫೈಪೋಟಿ ನಡೆಸುವುದಂತು ದಿಟ. ಈ ಮೂಲಕ ಆರ್​ಸಿಬಿ ಫ್ರಾಂಚೈಸಿ, ಕೆಎಲ್ ರಾಹುಲ್ ಹಾಗೂ ಯುಜ್ವೇಂದ್ರ ಚಹಲ್ ಅವರನ್ನು ಮರಳಿ ತಂಡಕ್ಕೆ ಕರೆ ತರಲಿದ್ದಾರಾ ಕಾದು ನೋಡಬೆಖೀಧೇ.

6 / 6
Follow us
ಪೆಟ್ರೋಲ್ ಬಂಕ್​ಗೆ ನುಗ್ಗಿ ಸಿಬ್ಬಂದಿಗೆ ಥಳಿಸಿದ ಯುವಕರು

ಯೋಗೇಶ್ವರ್ ಮಾತಿಗೆ ವಿಪರೀತ ಅರ್ಥ ಕಲ್ಪಿಸುವುದು ಬೇಡ: ಪರಮೇಶ್ವರ್

ಬಿಜೆಪಿಗೆ ಹಣದ ಕೊರತೆಯಿಲ್ಲ, ಹಣ ಚೆಲ್ಲಿ ಶಾಸಕರನ್ನು ಖರೀದಿಸುತ್ತಾರೆ: ಗಾಣಿಗ

ಬ್ರೆಜಿಲ್​ನಲ್ಲಿ ಮಂತ್ರ-ಘೋಷಗಳೊಂದಿಗೆ ಪ್ರಧಾನಿ ಮೋದಿಗೆ ಸ್ವಾಗತ

ಡಬಲ್ ವೈಲ್ಡ್ ಕಾರ್ಡ್​ ಎಂಟ್ರಿಗೆ ಬಿಗ್ ಬಾಸ್ ಮನೆ ಶೇಕ್; ಪ್ರಬಲರೇ ಟಾರ್ಗೆಟ್

ಬಿಜೆಪಿಯಿಂದ 50 ಅಲ್ಲ, 100 ಕೋಟಿ ರೂ. ಆಫರ್: ರವಿಕುಮಾರ್​ ಗಣಿಗ ಮತ್ತೆ ಆರೋಪ

Video: ಆಂಬ್ಯುಲೆನ್ಸ್​ಗೆ ದಾರಿ ಬಿಡದ ಕಾರು ಚಾಲಕನಿಗೆ 2.5 ಲಕ್ಷ ರೂ. ದಂಡ

Daily Devotional: ಪುಣ್ಯ ಕ್ಷೇತ್ರಗಳಿಗೆ ಹೋದಾಗ ಆಹಾರ ಪದ್ಧತಿ ಹೇಗಿರಬೇಕು

ಕಾರ್ತಿಕ ಸೋಮವಾರದಂದು ಯಾವೆಲ್ಲಾ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ

ಪಾಸ್ ತೋರಿಸಿ ಎಂದಿದ್ದಕ್ಕೆ ಬಿಎಂಟಿಸಿ ಸಿಬ್ಬಂದಿಗೆ ಆವಾಜ್ ಹಾಕಿದ ಪ್ರಯಾಣಿಕ