IPL 2024: SRH ತಂಡಕ್ಕೆ ಹೊಸ ನಾಯಕ ಆಯ್ಕೆ

| Updated By: ಝಾಹಿರ್ ಯೂಸುಫ್

Updated on: Mar 04, 2024 | 11:53 AM

Pat Cummins: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್) 17ನೇ ಆವೃತ್ತಿಯಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಪ್ಯಾಟ್ ಕಮಿನ್ಸ್ ಮುನ್ನಡೆಸಲಿದ್ದಾರೆ. ಕಳೆದ ಬಾರಿ ನಾಯಕರಾಗಿ ಕಾಣಿಸಿಕೊಂಡಿದ್ದ ಸೌತ್ ಆಫ್ರಿಕಾ ಆಟಗಾರ ಐಡೆನ್ ಮಾರ್ಕ್ರಾಮ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಅವರ ಬದಲಿಗೆ ಆಸೀಸ್ ಆಲ್​ರೌಂಡರ್​ಗೆ ನಾಯಕತ್ವ ನೀಡಲಾಗಿದೆ.

1 / 6
ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್ 17 ಗಾಗಿ ಸನ್​ರೈಸರ್ಸ್​ ಹೈದರಾಬಾದ್ ತಂಡವು ಹೊಸ ನಾಯಕನನ್ನು ಘೋಷಿಸಿದೆ. ಅದರಂತೆ ಈ ಬಾರಿಯ ಐಪಿಎಲ್​ನಲ್ಲಿ ಎಸ್​ಆರ್​ಹೆಚ್ ತಂಡವನ್ನು ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಮುನ್ನಡೆಸಲಿದ್ದಾರೆ. ಕಳೆದ ಸೀಸನ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿ ಐಡೆನ್ ಮಾರ್ಕ್ರಾಮ್ ಕಾಣಿಸಿಕೊಂಡಿದ್ದರು.

2 / 6
2023 ರಲ್ಲಿ ಐಡೆನ್ ಮಾರ್ಕ್ರಾಮ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಸನ್​ರೈಸರ್ಸ್ ಹೈದರಾಬಾದ್ ತಂಡವು 14 ಪಂದ್ಯಗಳಲ್ಲಿ ಕೇವಲ 4 ಮ್ಯಾಚ್​ಗಳಲ್ಲಿ ಮಾತ್ರ ಜಯ ಸಾಧಿಸಿತ್ತು. ಅಲ್ಲದೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸುವ ಮೂಲಕ ಟೂರ್ನಿಯನ್ನು ಅಂತ್ಯಗೊಳಿಸಿತ್ತು. ಹೀಗಾಗಿ ಈ ಬಾರಿ ಮಾರ್ಕ್ರಾಮ್​ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ.

3 / 6
ಇದೀಗ ಆಸ್ಟ್ರೇಲಿಯಾ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿರುವ ಪ್ಯಾಟ್ ಕಮಿನ್ಸ್​ಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ. ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಮತ್ತು ಏಕದಿನ ವಿಶ್ವಕಪ್ ಗೆದ್ದುಕೊಂಡಿದೆ. ಇದೇ ಕಾರಣದಿಂದಾಗಿ ಕಮಿನ್ಸ್ ಅವರನ್ನು ನಾಯಕನಾಗಿ ನೇಮಿಸಲಾಗಿದೆ.

4 / 6
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಕಮಿನ್ಸ್ ಅವರನ್ನು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಬರೋಬ್ಬರಿ 20.50 ಕೋಟಿ ರೂ.ಗೆ ಖರೀದಿಸಿದೆ. ಇದು ಐಪಿಎಲ್ ಇತಿಹಾಸದ 2ನೇ ಅತ್ಯಂತ ದುಬಾರಿ ಬಿಡ್ಡಿಂಗ್ ಎಂಬುದು ವಿಶೇಷ. ಇದೀಗ ದುಬಾರಿ ಆಟಗಾರನನ್ನೇ ಸನ್​ರೈಸರ್ಸ್​ ಹೈದರಾಬಾದ್​ ನಾಯಕನನ್ನಾಗಿ ಘೋಷಿಸಿರುವುದು ವಿಶೇಷ.

5 / 6
ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್​, ಕೊಲ್ಕತ್ತಾ ನೈಟ್ ರೈಡರ್ಸ್ ಪರ ಒಟ್ಟು 42 ಪಂದ್ಯಗಳನ್ನಾಡಿರುವ ಪ್ಯಾಟ್ ಕಮಿನ್ಸ್ 379 ರನ್ಸ್​ ಹಾಗೂ 45 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಇದೀಗ ಸನ್​ರೈಸರ್ಸ್ ಹೈದರಾಬಾದ್​ ಪರ ನಾಯಕನಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

6 / 6
ಸನ್​ರೈಸರ್ಸ್​ ಹೈದರಾಬಾದ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ) ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಮಾರ್ಕೊ ಯಾನ್ಸೆನ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಸನ್ವಿರ್ ಸಿಂಗ್, ಹೆನ್ರಿಕ್ ಕ್ಲಾಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಅಗರ್ವಾಲ್, ಟಿ. ನಟರಾಜನ್, ಅನ್ಮೋಲ್ಪ್ರೀತ್ ಸಿಂಗ್, ಮಯಾಂಕ್ ಮಾರ್ಕಾಂಡೆ, ಉಪೇಂದ್ರ ಸಿಂಗ್ ಯಾದವ್, ಉಮ್ರಾನ್ ಮಲಿಕ್, ನಿತೀಶ್ ಕುಮಾರ್ ರೆಡ್ಡಿ, ಫಜಲ್ಹಕ್ ಫಾರೂಕಿ, ಶಹಬಾಝ್ ಅಹ್ಮದ್, ಟ್ರಾವಿಸ್ ಹೆಡ್, ವನಿಂದು ಹಸರಂಗ, ಜಯದೇವ್ ಉನಾದ್ಕತ್, ಆಕಾಶ್ ಸಿಂಗ್, ಜಾತವೇಧ್ ಸುಬ್ರಮಣ್ಯನ್.

Published On - 11:18 am, Mon, 4 March 24